ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರಿಗೆ 100% ಸ್ಯಾಲರಿ ಹೆಚ್ಚಳ! ಮೊಮ್ಮಕ್ಕಳಿಗೂ ಉಡುಗೊರೆ

By Mahesh
|
Google Oneindia Kannada News

ನವದೆಹಲಿ, ಜು.2: ಸಂಸತ್ತಿನ ಕ್ಯಾಂಟೀನ್ ಊಟದ ರೇಟ್ ನೋಡಿದರೆ ಜನಸಾಮಾನ್ಯರ ಹುಬ್ಬೇರುತ್ತಿತ್ತು. ಈಗ ಸಂಸದರಿಗೆ ಶೇ 100 ಸಂಬಳ ಏರಿಕೆಯಾಗುವ ಸುದ್ದಿ ಬಂದಿದೆ. ಜೊತೆಗೆ ಸಂಸದರ ಮಕ್ಕಳು, ಮೊಮ್ಮಕ್ಕಳಿಗೂ ಉಡುಗೊರೆ ನೀಡುವ ಶಿಫಾರಸ್ಸನ್ನು ಜಂಟಿ ಸದನ ಸಮಿತಿ ಸಿದ್ಧಪಡಿಸಿದೆ.

ಬಿಜೆಪಿಯ ಬೆಂಕಿ ಚೆಂಡು ಸಂಸದ ಯೋಗಿ ಆದಿತ್ಯಾನಾಥ್ ನೇತೃತ್ವದ ಜಂಟಿ ಸಮಿತಿ ಒಟ್ಟಾರೆ 60ಕ್ಕೂ ಅಧಿಕ ಶಿಫಾರಸುಗಳನ್ನು ಸಿದ್ಧಪಡಿಸಿ ವರದಿ ತಯಾರಿಸಿದೆ. ಮಾಜಿ ಸಂಸದರ ಪಿಂಚಣಿಯನ್ನು ಸಹ ಶೇ.75ರಷ್ಟು ಏರಿಸಲು ಸಮಿತಿ ವರದಿಯಲ್ಲಿ ತಿಳಿಸಿದೆ. ಸರ್ಕಾರ ಈ ವರದಿಯನ್ನು ಒಪ್ಪಿದ್ದೇ ಆದರೆ ಸಂಸದರು ತಿಂಗಳಿಗೆ ಸುಮಾರು 1 ಲಕ್ಷ ರೂ.ದಷ್ಟು ಸಂಬಳ ಪಡೆಯಲಿದ್ದಾರೆ.[ಸಂಸದರಿಗೆ 4 ರೂಪಾಯಿಗೆ ಭರ್ಜರಿ ಊಟ!]

ಸಂಬಳ ಏರಿಕೆಯ ಕುರಿತು ಕೇಂದ್ರ ಸರ್ಕಾರ ಶಾಸಕರ ಸದನ ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಆದೇಶಿಸಿತ್ತು. ಅದರನ್ವಯ ಸಮಿತಿ ತನ್ನ ವರದಿಯನ್ನು ಗುರುವಾರ ಸಲ್ಲಿಸಿದೆ. [ಕರ್ನಾಟಕದ ಶಾಸಕರ ಸಂಬಳ ಎಷ್ಟು ಗೊತ್ತಾ?]

Parliamentary panel recommends 100% salary hike for MPs

* ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ್ ನೇತೃತ್ವದ ಜಂಟಿ ಸದನ ಸಮಿತಿಯಿಂದ ಶಿಫಾರಸು.
* ಮಾಜಿ ಸಂಸದರ ಪಿಂಚಣಿ ಮೊತ್ತ 20,000 ರು ನಿಂದ 50,000 ರು ಗೆ ಏರಿಕೆ.
* ವೇತನ ಆಯೋಗ ಪರಿಷ್ಕರಣೆಯಂತೆ ಸಂಸದರ ಸಂಬಳ ಏರಿಕೆಗೆ ಕ್ರಮ.
* ಸಂಸತ್ ಅಧಿವೇಶನದ ಸಮಯದಲ್ಲಿ ದಿನಭತ್ಯೆ ಪ್ರತಿ ಸಂಸದರಿಗೆ 2,000 ರು ನೀಡಬೇಕು.
* ವಾರ್ಷಿಕವಾಗಿ 20 ರಿಂದ 25 ಬಾರಿ ಉಚಿತ ವಿಮಾನಯಾನಕ್ಕೆ ಅವಕಾಶ.
* ಪರ್ಸನಲ್ ಸೆಕ್ರೆಟರಿಗಳಿಗೂ ಎಸಿ ಫಸ್ಟ್ ಕ್ಲಾಸ್ ಟಿಕೆಟ್. [ಕೇಂದ್ರ ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]
* ಆರೋಗ್ಯ ಸಂಬಂಧಿತ ಸೌಲಭ್ಯಗಳು ಸಂಸದರಿಗಷ್ಟೇ ಅಲ್ಲದೆ, ಅವರ ಮಕ್ಕಳು, ಮೊಮ್ಮಕ್ಕಳಿಗೂ ತಲುಪಬೇಕು.
* 2010ರಿಂದ ಸಂಸದರ ಸಂಬಳದಲ್ಲಿ ಪರಿಷ್ಕರಣೆ ಮಾಡಲಾಗಿಲ್ಲ.
* ಸದ್ಯದ ಮಾಹಿತಿ ಪ್ರಕಾರ ಸಂಸದರ ವರಮಾನ ಭತ್ಯೆ ಸೇರಿ ಪ್ರತಿ ತಿಂಗಳಿಗೆ 1.4 ಲಕ್ಷ ರು ನಷ್ಟಿದೆ.

(ಒನ್ ಇಂಡಿಯಾ ಸುದ್ದಿ)

English summary
A parliamentary committee headed by firebrand Bharatiya Janata Party (BJP) MP Yogi Adityanath has recommended 100 percent hike in the salary of parliamentarians, a newspaper report said on Thursday(Jul.2).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X