2 ಉಗ್ರ ಸಂಘಟನೆಯಿಂದ ಭಾರತದ ಮೇಲೆ ಜಂಟಿ ದಾಳಿ ಸಂಚು: ಗುಪ್ತಚರ ಇಲಾಖೆ
ನವದೆಹಲಿ, ಮಾರ್ಚ್ 16: ಚುನಾವಣೆ ಸಮಯದಲ್ಲಿ ಭಾರತದಲ್ಲಿ ಹಿಂಸಾತ್ಮಕ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಪಾಕಿಸ್ತಾನವೇ ಜೈಷ್ ಇ ಮೊಹಮ್ಮದ್ ಮತ್ತು ತಾಲಿಬಾನ್ ಉಗ್ರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂಬ ಆಘಾತಕಾರಿ ವಿಷಯವನ್ನು ಭಾರತೀಯ ಗುಪ್ತಚರ ಇಲಾಖೆ ಬಯಲು ಮಾಡಿದೆ.
ಪಾಕಿಸ್ತಾನ ಗುಪ್ತಚರ ಇಲಾಖೆ ತಾಲಿಬಾನ್ ಮತ್ತು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಗಳ ಜಂಟಿ ದಾಳಿಗೆ ಸಂಚು ರೂಪಿಸಿದೆ ಎಂದು ಅದು ಹೇಳಿದೆ.
ಭಾರತ ಪಾಕಿಸ್ತಾನದ ಬಾಲಕೋಟ್ ಮೇಲೆ ದಾಳಿ ನಡೆಸುವ ಮೊದಲೇ ಜೆಇಎಂ, ತಾಲಿಬಾನ್ ಮತ್ತು ಹಕ್ಕಾನಿ ಸಂಘಟನೆಗಳು ಗುಟ್ಟಾಗಿ ಸಭೆ ಸೇರಿದ್ದವು ಎಂಬ ವಿಷಯವೂ ಬಯಲಾಗಿದೆ.

ಭಾರತದ ವಿರುದ್ಧ 'ಜಿಹಾದ್'(ಧರ್ಮಯುದ್ಧ) ಸಾರುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಸಭೆ ಡಿಸೆಂಬರ್ 15-20 ರ ಒಳಗೆ ನಡೆದಿರಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿದೆ.
ಅಫಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಪಡೆಗಳಿಗಳ ವಿರುದ್ಧ ದಾಳಿ ನಡೆಸುತ್ತಲೇ ಬಂದಿರುವ ತಾಲಿಬಾನ್ ಸಂಘಟನೆಯ ಮೂಲಕ ಜೆಇಎಂ ಗೆ ತರಬೇತಿ ನೀಡಲಾಗಿದ್ದು, ಆತ್ಮಾಹುತಿ ಬಾಂಬ್ ದಾಳಿಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಅದೇ ತರಬೇತಿ ನೀಡಿದೆ ಎನ್ನಲಾಗಿದೆ.












Click it and Unblock the Notifications