ಪದ್ಮಾವತ್ ವಿರುದ್ಧ ಗಲಭೆ: ಬಿಜೆಪಿಯನ್ನು ದೂರಿದ ರಾಹುಲ್
ನವದೆಹಲಿ, ಜನವರಿ 25: ಪದ್ಮಾವತ್ ಚಿತ್ರದ ವಿರುದ್ಧ ದೇಶದಾದ್ಯಂತ ಆರಂಭವಾಗಿರುವ ಗಲಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇಶದಲ್ಲಿ ದ್ವೇಷ ಮತ್ತು ಹಿಂಸೆ ಬಿತ್ತಲು ಬಿಜೆಪಿ ಪ್ರಯತ್ನಿಸುತ್ತಿದೆ' ಎಂದಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರ ಐತಿಹಾಸಿಕ ಕತೆ ಆಧಾರಿತ ಚಿತ್ರ ಪದ್ಮಾವತಿ, ಹಲವು ವಿರೋಧಗಳಿಂದಾಗಿ ಪದ್ಮಾವತ್ ಎಂದು ಹೆಸರು ಬದಲಿಸಿಕೊಂಡಿದೆ. ಸೆನ್ಸಾರ್ ಮಂಡಳಿ ಸಹ ಈ ಚಿತ್ರದಲ್ಲಿ ಯಾವುದೇ ರೀತಿಯ ಅವಹೇಳನಾಕಾರಿ ದೃಶ್ಯಗಳಿಲ್ಲ ಎಂದು ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ ಪ್ರತಿಭಟನೆ ಮಾತ್ರ ನಿಂತಿಲ್ಲ.
ನಿನ್ನೆ(ಜ.24) ಹರ್ಯಾಣದ ಗುರ್ಗಾಂವ್ ನ ಶಾಲಾ ವಾಹನವೊಂದರ ಮೇಲೆ ಪದ್ಮಾವತ್ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ರಾಹುಲ್ ಗಾಂಧಿ, ಪುಟ್ಟ ಮಕ್ಕಳ ಮೇಲೆ ಹಿಂಸೆ ನಡೆಸುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಚಿತ್ತೂರಿನ ರಾಣಿ ಪದ್ಮಿನಿಯ ಕತೆಯನ್ನೊಳಗೊಂಡ ಈ ಚಿತ್ರದಲ್ಲಿ ರಜಪೂತ ಭಾವನೆಗಳಿಗೆ ನೋವನ್ನುಂಟುಮಾಡಲಾಗಿದೆ ಎಂಬುದು ಪ್ರತಿಭಟನಾಕಾರರ ವಾದ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹಿದ್ ಕಪೂರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications