ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೇರೆ ಸೋಂಕೂ ಇರುವ ಅರ್ಧದಷ್ಟು ಕೋವಿಡ್ ರೋಗಿಗಳು ಮೃತ್ಯು' - ಐಸಿಎಂಆರ್

|
Google Oneindia Kannada News

ನವದೆಹಲಿ, ಮೇ 28: ಆಂಟಿಬಯೋಟಿಕ್‌ಗಳು ಮತ್ತು ಸೂಪರ್‌ಬಗ್‌ಗಳ (ಜೈವಿಕ ತಂತ್ರಜ್ಞಾನದಲ್ಲಿ ಉಪಯುಕ್ತವಾದ ಬ್ಯಾಕ್ಟೀರಿಯ) ಅತಿಯಾದ ಬಳಕೆಯು ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಮುಂಬೈನ ಎರಡು (ಸಿಯಾನ್ ಮತ್ತು ಹಿಂದೂಜಾ) ಸೇರಿದಂತೆ 10 ಆಸ್ಪತ್ರೆಗಳಲ್ಲಿ ನಡೆದ ಐಸಿಎಂಆರ್ ಅಧ್ಯಯನ ತಿಳಿಸಿದೆ. ಹಾಗೆಯೇ ಬೇರೆ ಸೋಂಕೂ ಇರುವ ಅರ್ಧದಷ್ಟು ಕೋವಿಡ್ ರೋಗಿಗಳು ಮೃತರಾಗಿದ್ದಾರೆ ಎಂದು ಕೂಡಾ ಈ ಅಧ್ಯಯನ ಹೇಳಿದೆ.

ಅಧ್ಯಯನ ಮಾಡಿದ 17,000 ಕೋವಿಡ್ ರೋಗಿಗಳಲ್ಲಿ ಶೇ. 4 ರಷ್ಟು ಸೋಂಕಿತರಲ್ಲಿ ಬೇರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ಕೂಡಾ ಇದೆ. ಈ ಬಗ್ಗೆ ಮಾಹಿತಿ ನೀಡಿದ ಅಧ್ಯಯನದ ನೇತೃತ್ವ ವಹಿಸಿದ್ದ ಐಸಿಎಂಆರ್‌ನ ಹಿರಿಯ ವಿಜ್ಞಾನಿ ಕಾಮಿಣಿ ವಾಲಿಯಾ, ಈ ರೀತಿ ಕೊರೊನಾ ಸೋಂಕಿನೊಂದಿಗೆ ಬೇರೊಂದು ಸೋಂಕು ಇರುವವರು ಆಸ್ಪತ್ರೆಗಳಿಗೆ ಸೇರಿಸಬೇಕಾಗುತ್ತದೆ. ಲಕ್ಷಾಂತರ ಜನರು ಸುದೀರ್ಘ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಸೋಂಕು ತಡೆಯಲು ದೇಹದಲ್ಲಿ ಪ್ರತಿಜೀವಕಗಳ ಅಗತ್ಯವಿರುತ್ತದೆ ಅದರ ಅಭಿವೃದ್ಧಿಗೆ 10 ದಿನಗಳು ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕೋವಿಶೀಲ್ಡ್‌ ಮೊದಲ ಡೋಸ್‌ನಿಂದ ಪ್ರಬಲ ರೋಗ ನಿರೋಧಕ ಶಕ್ತಿ ವೃದ್ಧಿ: ಐಸಿಎಂಆರ್ಕೋವಿಶೀಲ್ಡ್‌ ಮೊದಲ ಡೋಸ್‌ನಿಂದ ಪ್ರಬಲ ರೋಗ ನಿರೋಧಕ ಶಕ್ತಿ ವೃದ್ಧಿ: ಐಸಿಎಂಆರ್

ವಿಶ್ವದಾದ್ಯಂತ ಕೋವಿಡ್ -19 ಮರಣ ಪ್ರಮಾಣ ಶೇ. 10 ಆಗಿದೆ. ಆದರೆ ಕೋವಿಡ್ -19 ಜೊತೆಗೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನ ರೋಗಿಗಳ ಪೈಕಿ ಶೇ. 56.7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಯನ ವಿವರಿಸಿದೆ.

ಅರ್ಧದಷ್ಟು ಕೋವಿಡ್ ರೋಗಿಗಳಿಗೆ ಆಂಟಿಬಯೋಟಿಕ್‌

ಅರ್ಧದಷ್ಟು ಕೋವಿಡ್ ರೋಗಿಗಳಿಗೆ ಆಂಟಿಬಯೋಟಿಕ್‌

ಕೆಲವು ರೋಗಿಗಳಿಗೆ ಆಂಟಿಬಯೋಟಿಕ್‌ಗಳ ಮೂಲಕ ಚಿಕಿತ್ಸೆ ನೀಡಲಾಗದ ಸೂಪರ್‌ಬಗ್‌ಗಳು ಇರುವುದರಿಂದ ಅನೇಕ ರೋಗಿಗಳಿಗೆ ಪ್ರಬಲವಾದ ಪ್ರತಿಜೀವಕಗಳ ಅಗತ್ಯವಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬ್ಯಾಕ್ಟೀರಿಯಾದ ಸೋಂಕಿನ (52.36%) ಅರ್ಧದಷ್ಟು ಕೋವಿಡ್ ರೋಗಿಗಳಿಗೆ ಆಂಟಿಬಯೋಟಿಕ್‌ಗಳನ್ನು ನೀಡಲಾಗಿದೆ. ಈ ಪ್ರತಿಜೀವಕಗಳನ್ನು ನಿರ್ದಿಷ್ಟ ರೀತಿಯ ಸೋಂಕುಗಳಿಗೆ ಮಾತ್ರ ಬಳಸಲಾಗುತ್ತದೆ.

ಬ್ಲ್ಯಾಕ್ ಫಂಗಸ್ ಪತ್ತೆ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಐಸಿಎಂಆರ್ ಸಲಹೆಬ್ಲ್ಯಾಕ್ ಫಂಗಸ್ ಪತ್ತೆ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಐಸಿಎಂಆರ್ ಸಲಹೆ

ಅತಿಯಾದ ಆಂಟಿಬಯೋಟಿಕ್‌ ಮತ್ತು ಆಂಟಿಫಂಗಸ್‌ ಔಷಧಿ ಬಳಕೆಯಿಂದ ಇತರೆ ಸೋಂಕು

ಅತಿಯಾದ ಆಂಟಿಬಯೋಟಿಕ್‌ ಮತ್ತು ಆಂಟಿಫಂಗಸ್‌ ಔಷಧಿ ಬಳಕೆಯಿಂದ ಇತರೆ ಸೋಂಕು

ಆಂಟಿಬಯೋಟಿಕ್‌ ಮತ್ತು ಆಂಟಿಫಂಗಸ್‌ ಔಷಧಿಗಳ ಅತಿಯಾದ ಬಳಕೆಯು ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್‌ನಂತಹ ಅಪರೂಪದ ಸೋಂಕುಗಳ ಉಲ್ಬಣಕ್ಕೆ ಕಾರಣವಾಗಬಹುದು ಎಂದು ಅನೇಕ ತಜ್ಞರು ಹೇಳಿದ್ದಾರೆ. ನಮ್ಮ ದೇಹದಲ್ಲೇ ಉತ್ತಮ ಬ್ಯಾಕ್ಟೀರಿಯವಿರುತ್ತದೆ. ಅದು ರಕ್ಷಣಾತ್ಮಕ ಪಾತ್ರ ನಿರ್ವಹಿಸುತ್ತದೆ. ಆದರೆ ಯಾವುದೇ ಕಾರಣವಿಲ್ಲದೆ ಆಂಟಿಬಯೋಟಿಕ್‌ಗಳ ಸೇವನೆ ಮಾಡಿದಾಗ, ನಮ್ಮ ದೇಹದಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕೂಡಾ ನಾಶವಾಗುತ್ತದೆ. ಇದರಿಂದಾಗಿ ಕಪ್ಪು ಶಿಲೀಂಧ್ರದಂತಹ ಸೋಂಕುಗಳು ಬರುತ್ತದೆ ಎಂದು ಕೋವಿಡ್ -19 ರ ರಾಜ್ಯ ಸರ್ಕಾರದ ಕಾರ್ಯಪಡೆಯ ಸದಸ್ಯರಾಗಿರುವ ಡಾ.ರಾಹುಲ್ ಪಂಡಿತ್ ಹೇಳಿದ್ದಾರೆ.

ಶೇ. 73 ಮಂದಿಗೆ ನೀಡಲಾಗಿದೆ ಆಂಟಿಬಯೋಟಿಕ್‌

ಶೇ. 73 ಮಂದಿಗೆ ನೀಡಲಾಗಿದೆ ಆಂಟಿಬಯೋಟಿಕ್‌

ಮೊದಲ ಕೋವಿಡ್‌ ಅಲೆಯ ಸಂದರ್ಭದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ಶೇ. 17 ಕೋವಿಡ್ ರೋಗಿಗಳಿಗೆ ಕೊರೊನಾ ಸೋಂಕಿನೊಂದಿಗೆ ಬೇರೊಂದು ಸೋಂಕು ತಗುಲಿತ್ತು. ಆದರೆ ಶೇ. 73 ಜನರಿಗೆ ಆಂಟಿಬಯೋಟಿಕ್‌ ನೀಡಲಾಗಿದೆ ಎಂದು ಹಿಂದೂಜಾ ಆಸ್ಪತ್ರೆಯ ಡಾ. ಕೌಸ್‌ರಾವ್‌ ಹೇಳಿದ್ದಾರೆ. ಎರಡನೇ ಅಲೆಯ ಸಂದರ್ಭ ಮನೆಯಲ್ಲಿ ಮೊದಲ ಹಂತದ ಚಿಕಿತ್ಸೆಯ ಸಮಯದಲ್ಲಿ ಎರಡು ಅಥವಾ ಮೂರು ಆಂಟಿಬಯೋಟಿಕ್‌ಗಳನ್ನು ಸೇವಿಸಿ ನಂತರ ನಮ್ಮ ಬಳಿಗೆ ಬರುವ ಯುವಕರನ್ನು ನಾವು ನೋಡುತ್ತಿದ್ದೇವೆ. ನಮ್ಮ ಬಳಿಗೆ ಬರುವಷ್ಟರಲ್ಲಿ ಆ ಯುವಕರಿಗೆ ಹೆಚ್ಚಿನ ಆಂಟಿಬಯೋಟಿಕ್‌ಗಳ ಅಗತ್ಯವಿರುತ್ತದೆ ಎಂದು ಹೇಳುತ್ತಾರೆ ಕಾರ್ಯಪಡೆಯ ಸದಸ್ಯರೂ ಆಗಿರುವ ಡಾ. ಬಜನ್.

ಯಾರಿಗೆ ಆಂಟಿಬಯೋಟಿಕ್‌ ಅತ್ಯಗತ್ಯ

ಯಾರಿಗೆ ಆಂಟಿಬಯೋಟಿಕ್‌ ಅತ್ಯಗತ್ಯ

ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿಯುವ ದೀರ್ಘ ಕೋವಿಡ್ ರೋಗಿಗಳಿಗೆ ಆಂಟಿಬಯೋಟಿಕ್‌ ನೀಡಲು ಸೂಚಿಸಲಾಗುತ್ತದೆ. ರೋಗಿಯು ಆಸ್ಪತ್ರೆಯಲ್ಲಿ ಹೆಚ್ಚು ಕಾಲ ಇದ್ದು ಆ ರೋಗಿಗೆ ಐಸಿಯು ಅಥವಾ ವೆಂಟಿಲೇಟರ್ ಅಗತ್ಯವಿದ್ದರೆ, ಆ ಕೋವಿಡ್ ರೋಗಿಗೆ ಆಂಟಿಬಯೋಟಿಕ್‌ ಬೇಕಾಗುತ್ತವೆ. ಆದರೆ ಆತಂಕಕಾರಿಯಾದ ಅಂಶವೆಂದರೆ ಈ ರೋಗಿಯ ದೇಹದಲ್ಲಿ ಇದು ಒತ್ತಡವನ್ನು ಉಂಟು ಮಾಡುತ್ತದೆ ಎಂದು ಡಾ ವಾಲಿಯಾ ತಿಳಿಸಿದ್ದಾರೆ.

ಮನೆಯಲ್ಲೇ ಆಂಟಿಬಯೋಟಿಕ್‌ ಬಳಕೆ ದೀರ್ಘಕಾಲೀನ ಪರಿಣಾಮಕ್ಕೆ ಕಾರಣ

ಮನೆಯಲ್ಲೇ ಆಂಟಿಬಯೋಟಿಕ್‌ ಬಳಕೆ ದೀರ್ಘಕಾಲೀನ ಪರಿಣಾಮಕ್ಕೆ ಕಾರಣ

ಮನೆಯಲ್ಲೇ ಕೋವಿಡ್ ರೋಗಿಗಳು ಆಂಟಿಬಯೋಟಿಕ್‌ ಬಳಕೆ ಮಾಡಿದರೆ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡಬಹುದು. ಅಜಿಥ್ರೊಮೈಸಿನ್ ಬಳಕೆಯಿಂದಾಗಿ ಭವಿಷ್ಯದಲ್ಲಿ ಟೈಫಾಯಿಡ್‌ ಮೇಲೆ ಪರಿಣಾಮಕಾರಿಯಾಗುತ್ತದೆಯೇ ಎಂದು ನೋಡಬೇಕಾಗಿದೆ ಎಂದು ಕೂಡಾ ಡಾ.ವಾಲಿಯಾ ಹೇಳಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ಭಯದಿಂದ ಹಲವಾರು ಮಂದಿ ಆಂಟಿ ಫಂಗಸ್‌ ಔಷಧಿಗಳನ್ನು ಸೇವಿಸುತ್ತಿದ್ದಾರೆ ಎಂದು ಕೂಡಾ ತಜ್ಞರು ಹೇಳಿದ್ದಾರೆ. ರೋಗಿಯ ಸ್ಥಿತಿ ಸುಧಾರಿಸಿದ ಕೂಡಲೇ ಆಸ್ಪತ್ರೆಗಳು ಈ ಅನಗತ್ಯ ಔಷಧಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂಬುದು ಸಿಯಾನ್ ಆಸ್ಪತ್ರೆಯ ಡಾ.ಸುಜಾತಾ ಬವೇಜಾ ಅಭಿಪ್ರಾಯಪಟ್ಟಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Over 56% of Covid-19 patients with secondary infection have died says ICMR, what is reason?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X