ಕಾಂಗ್ರೆಸ್ ಶಾಸಕರ ರಾಜೀನಾಮೆ ರಾಹುಲ್ ಗಾಂಧಿಯ ಷಡ್ಯಂತ್ರ: ರಾಜನಾಥ್
ನವದೆಹಲಿ, ಜುಲೈ 08: "ಕರ್ನಾಟಕದಲ್ಲಿ ಏನೆಲ್ಲ ರಾಜಕೀಯ ಬೆಳವಣಿಗೆಯಾಗುತ್ತಿದೆಯೂ ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಕಾಂಗ್ರೆಸ್ ಶಾಸಕರ ರಾಜೀನಾಮೆ ರಾಹುಲ್ ಗಾಂಧಿಯ ಷಡ್ಯಂತ್ರ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಗುಡುಗಿದ್ದಾರೆ.
ಈ ಮೂಲಕ ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಬಿರುಸಿನ ರಾಜಕೀಯ ಬೆಳವಣಿಗೆ ಲೋಕಸಭೆಯಲ್ಲೂ ಪ್ರತಿಧ್ವನಿಸಿದಂತಾಗಿದೆ.
ಈಗಾಗಲೇ ಕರ್ನಾಟಕದ 14 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಮುಂಬೈ ವಿಮಾನ ಏರಿದ್ದಾರೆ. ಈ ನಡುವೆ ಪಕ್ಷೇತರ ಶಾಸಕ ಎಚ್ ನಾಗೇಶ್ ಸಹ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ನಮ್ಮ ಪಕ್ಷ ಎಂದಿಗೂ ಕುದುರೆ ವ್ಯಾಪಾರದಲ್ಲಿ ತೊಡಗಿಲ್ಲ. ಈ ಬೆಳವಣಿಗೆಗೂ ನಮಗೂ ಸಂಬಂಧವಿಲ್ಲ. ಈ ಎಲ್ಲವೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಷಡ್ಯಂತ್ರ" ಎಂದು ದೂರಿದರು.












Click it and Unblock the Notifications