ರಾಜಧಾನಿ ದೆಹಲಿ ಜನರಿಗೆ ಮತ್ತೆ ಸಮ-ಬೆಸ ಪರೀಕ್ಷೆ?

Subscribe to Oneindia Kannada

ನವದೆಹಲಿ, ಫೆಬ್ರವರಿ, 10: ದೆಹಲಿ ಜನತೆ ಮೇಲೆ ಮತ್ತೆ ಅರವಿಂದ್ ಕೇಜ್ರಿವಾಲ್ ಸರ್ಕಾರ ಸಮ-ಬೆಸ ವಾಹನ ಸಂಚಾರದ ನಿಯಮವನ್ನು ಜಾರಿ ಮಾಡಲಿದೆ. ಜನವರಿ ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ವ್ಯವಸ್ಥೆಗೆ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು.

ಫೆಬ್ರವರಿ 11 ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಮ-ಬೆಸ ನಿಯಮ ಮತ್ತೆ ಜಾರಿಯಾಗಬೇಕು ಎಂದು ಒತ್ತಾಯಿಸಿ ದೆಹಲಿಗರು ಮನವಿ ಸಲ್ಲಿಸಿದ್ದಾರೆ. ಈ ಮೇಲ್ ಮುಖಾಂತರ ಕೋರಿಕೊಂಡಿದ್ದಾರೆ. ಇದೆಲ್ಲವನ್ನ ಆಧರಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ತಿಳಿಸಿದ್ದಾರೆ.[ಸಮ-ಬೆಸ ಯಾರಿಗೆ ಲಾಭ? ಕೇಜ್ರಿಗೆ ದಿಲ್ಲಿ ಹೈಕೋರ್ಟ್ ಪ್ರಶ್ನೆ]

'Odd-even' set to return; CM to announce dates on Feb 11

ಪ್ರಾಯೋಗಿಕವಾಗಿ ಜನವರಿ 1ರಿಂದ 15 ದಿನಗಳ ಕಾಲ ಸಮ-ಬೆಸ ನಿಯಮ ಜಾರಿಗೆ ಮಾಡಲಾಗಿತ್ತು. ನಂತರ ಇದರ ಕುರಿತಾಗಿ ಸರ್ಕಾರಿ ವೆಬ್ ಸೈಟ್ ನಲ್ಲಿ ಸುಮಾರು 12 ಲಕ್ಷ ಸಲಹೆಗಳು ಬಂದಿದ್ದವು. ಜನರ ಸಲಹೆ ಸೂಚನೆಗಳನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಸೋಡಿಯಾ ತಿಳಿಸಿದ್ದಾರೆ.[ದೆಹಲಿ ಸಮ-ಬೆಸ ಸಂಚಾರ ನಿಯಮದ ಪ್ರಮುಖ ಅಂಶಗಳು]

ವ್ಯಾಪಕ ವಿರೋಧ: ಸಾಮಾಜಿಕ ತಾಣಗಳಲ್ಲಿ ದೆಹಲಿ ಸರ್ಕಾರದ ಸಮ-ಬೆಸ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾಲಿನ್ಯ ನಿಯಂತ್ರಣ ಮತ್ತು ಟ್ರಾಫಿಕ್ ಸಮಸ್ಯೆಗೆ ಇದರಿಂದ ಮುಕ್ತಿ ಸಾಧ್ಯವೇ ಎಂಬ ಪ್ರಶ್ನೆಯೂ ಎದ್ದಿತ್ತು. ಅಲ್ಲದೇ ದೆಹಲಿ ನ್ಯಾಯಾಲಯ ಶೀಘ್ರವಾಗಿ ವ್ಯವಸ್ಥೆಯ ಪರಿಣಾಮಗಳ ಕುರಿತು ಸಮಗ್ರ ವರದಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಆದೇಶ ನೀಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The 'odd-even' scheme is "all set" make a comeback in the national capital, the dates to which will be announced by Delhi Chief Minister Arvind Kejriwal. Transport Minister Gopal Rai said that the government will make the announcement after reviewing over 11 lakh responses received from the public through multiple channels today.
Please Wait while comments are loading...