ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ vs ಸುಷ್ಮಾ ಸ್ವರಾಜ್ ಜಟಾಪಟಿ
ನವದೆಹಲಿ, ಆಗಸ್ಟ್ 12: ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ ಅವರಿಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಷ್ಮಾ ಸ್ವರಾಜ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲಿ ಬುಧವಾರ ಆಗ್ರಹಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ vs ಸುಷ್ಮಾ ಸ್ವರಾಜ್ ಜಟಾಪಟಿ ಮುಖ್ಯಾಂಶಗಳು ಇಲ್ಲಿವೆ:
ಲಲಿತ್ ಮೋದಿ ಅವರಿಗೆ ಸುಷ್ಮಾ ಸ್ವರಾಜ್ ಅವರು ಮಾನವೀಯ ನೆಲೆಯಲ್ಲಿ ನೆರವು ನೀಡಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಎಲ್ಲವೂ ನಡೆಯಬೇಕಿತ್ತು. ಆದರೆ, ಕಾನೂನು ವ್ಯಾಪ್ತಿ ಮೀರಿ ನೆರವು ನೀಡಿದ್ದಲ್ಲದೆ ಭಾರತ- ಯು.ಕೆ ನಡುವಿನ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಶಿಫಾರಸು ಪತ್ರದ ಜೊತೆಗೆ ಹೇಳಿರುವುದು ಎಷ್ಟು ಸರಿ? ಈ ಬಗ್ಗೆ ಸುಷ್ಮಾ ಅವರು ನೀಡಿದ ಉತ್ತರವನ್ನು ಸದನ ಆಲಿಸಿದೆ.
ಸ್ಪೀಕರ್ ಸುಮಿತ್ರ ಮಹಾಜನ್ ಅವರಲ್ಲಿ ನನ್ನದ್ದೊಂದು ಕೋರಿಕೆ ಇದೆ. ಪ್ರಧಾನಿ ಮೋದಿ ಅವರು ಈ ಚರ್ಚೆಯಲ್ಲಿ ಭಾಗವಹಿಸಬೇಕು ಹಾಗೂ ಅವರಿಂದ ನಾವು ಉತ್ತರ ಬಯಸುತ್ತಿದ್ದೇವೆ ಎಂದು ಖರ್ಗೆ ಕೇಳಿಕೊಂಡರು. ಮುಂದೇನಾಯ್ತು? ಸಂಸತ್ತಿನಲ್ಲಿ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರವೇನು ಮುಂದೆ ಓದಿ...

ಸುಷ್ಮಾ ಸ್ವರಾಜ್ ಮೊದಲ ಪ್ರತಿಕ್ರಿಯೆ
ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಸುಷ್ಮಾ ಸ್ವರಾಜ್, ಮೋದಿಗೆ ಸಹಾಯ ಮಾಡಲು ಯು.ಕೆ ಸರ್ಕಾರಕ್ಕೆ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಲಲಿತ್ ಮೋದಿ ಪತ್ನಿಗೆ ಮಾತ್ರ ಸಹಾಯ ಮಾಡಿದ್ದಾಗಿ ತಿಳಿಸಿದ್ದರು. ಬುಧವಾರ ಕೂಡಾ ಈ ಬಗ್ಗೆ ಮಾತನಾಡಿದ ಸುಷ್ಮಾ ಅವರು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಗಳನ್ನು ಎಸೆದರು.

ಸ್ಪೀಕರ್ ಸುಮಿತ್ರ ಮಹಾಜನ್ ಅವರಲ್ಲಿ ಕೋರಿಕೆ
ಸ್ಪೀಕರ್ ಸುಮಿತ್ರ ಮಹಾಜನ್ ಅವರಲ್ಲಿ ನನ್ನದ್ದೊಂದು ಕೋರಿಕೆ ಇದೆ. ಲಲಿತ್ ಗೇಟ್ ಪ್ರಕರಣದ ಬಗ್ಗೆ ಸುಷ್ಮಾ ಅವರು ನೀಡಿದ ಉತ್ತರವನ್ನು ಸದನ ಆಲಿಸಿದೆ. ಪ್ರಧಾನಿ ಮೋದಿ ಅವರು ಈ ಚರ್ಚೆಯಲ್ಲಿ ಭಾಗವಹಿಸಬೇಕು ಹಾಗೂ ಅವರಿಂದ ನಾವು ಉತ್ತರ ಬಯಸುತ್ತಿದ್ದೇವೆ ಎಂದು ಖರ್ಗೆ ಕೇಳಿಕೊಂಡರು.

ಕ್ವಟ್ರೋಚಿ, ಆಂಡರ್ಸನ್ ಹೆಸರೆತ್ತಿದ ಸುಷ್ಮಾ
ಬೋಫೋರ್ಸ್, ಭೋಪಾಲ್ ಅನಿಲ ದುರಂತದ ಬಗ್ಗೆ ಉಲ್ಲೇಖಿಸಿದ ಸುಷ್ಮಾ ಅವರು ಕ್ವಟ್ರೋಚಿ, ಆಂಡರ್ಸನ್ ಅವರು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಎಷ್ಟು ಪಡೆದುಕೊಂಡಿತು ಹೇಳಲಿ. ಖರ್ಗೆ ಅವರ ಸವಾಲು ಸ್ವೀಕರಿಸಿ ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದರು.
|
ಸದನದಲ್ಲಿ ಚರ್ಚೆ ಆರಂಭಿಸಿ ಎಲ್ಲಿ ಹೋದ್ರಿ ಖರ್ಗೆ
ಸದನದಲ್ಲಿ ಚರ್ಚೆ ಆರಂಭಿಸಿ ಎಲ್ಲಿ ಹೋದ್ರಿ ಖರ್ಗೆ, ಚರ್ಚೆಗೆ ಉತ್ತರ ನೀಡಲು ಬನ್ನಿ
|
ಖರ್ಗೆ ಕೇಳಿದ ಪ್ರಶ್ನೆಗೆ ಪ್ರತಿ ಪ್ರಶ್ನೆ
ಖರ್ಗೆ ಕೇಳಿದ ಪ್ರಶ್ನೆಗೆ ಪ್ರತಿ ಪ್ರಶ್ನೆ ಕೇಳಿದ ಸಾರ್ವಜನಿಕರು.
ಸಂಸತ್ತಿನಲ್ಲಿ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ
ಸಂಸತ್ತಿನಲ್ಲಿ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ ಹೀಗಿತ್ತು ವಿಡಿಯೋ ನೋಡಿ...












Click it and Unblock the Notifications