ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಐದು ರಾಜ್ಯಗಳಲ್ಲಿ ಕೊವಿಡ್ ಸಾವಿನ ಸಂಖ್ಯೆ 'ಶೂನ್ಯ'

|
Google Oneindia Kannada News

ದೆಹಲಿ, ಜುಲೈ 17: ಭಾರತದಲ್ಲಿ ಗುರುವಾರ ಒಂದೇ ದಿನ 686 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 25602ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಏಂಟನೇ ಸ್ಥಾನದಲ್ಲಿದೆ.

Recommended Video

ಗೋವಾ ಹೋಗೋ ಪ್ಲಾನ್ ಇದ್ರೆ ಮೊದಲು ಕ್ಯಾನ್ಸಲ್ ಮಾಡಿ. |Oneindia kannada

ಜಗತ್ತಿನಾದ್ಯಂತ 593,445 ಜನರು ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿದ್ದು, ಅಮೆರಿಕದಲ್ಲಿ 141,125 ಜನರು ಸಾವನ್ನಪ್ಪಿದ್ದಾರೆ. ಯುಎಸ್ ನಂತರ ಬ್ರೆಜಿಲ್‌ನಲ್ಲಿ 76,822 ಜನರು ಸಾವನ್ನಪ್ಪಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಅಂಕಿ ಅಂಶಗಳು ಹೇಳುತ್ತಿದೆ.

Breaking: ಭಾರತದಲ್ಲಿ 10 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರುBreaking: ಭಾರತದಲ್ಲಿ 10 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

ಆದರೆ, ಈ ಪ್ರಮಾಣ ಮುಂದಿನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಹ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಭಾರತದ ಈ ಐದು ರಾಜ್ಯಗಳಲ್ಲಿ ಒಂದೇ ಒಂದು ಕೊವಿಡ್ ಸಾವು ವರದಿಯಾಗಿಲ್ಲ. ಯಾವುದು ಆ ರಾಜ್ಯಗಳು? ಮುಂದೆ ಓದಿ....

ಮಣಿಪುರದಲ್ಲಿ ಕೊರೊನಾ ಸಾವಿಲ್ಲ

ಮಣಿಪುರದಲ್ಲಿ ಕೊರೊನಾ ಸಾವಿಲ್ಲ

ಮಣಿಪುರದಲ್ಲಿ ಈವರೆಗೂ ಒಂದೇ ಒಂದು ಕೊವಿಡ್ ಸಾವು ವರದಿಯಾಗಿಲ್ಲ. ಇದುವರೆಗೂ 1764 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಅದರಲ್ಲಿ 1129 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 635 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಮಣಿಪುರಕ್ಕೆ ಸಮಾಧಾನಕರ ಸಂಗತಿ.

ನಾಗಲ್ಯಾಂಡ್‌ನಲ್ಲೂ ಸಾವಿಲ್ಲ

ನಾಗಲ್ಯಾಂಡ್‌ನಲ್ಲೂ ಸಾವಿಲ್ಲ

ಮಣಿಪುರದ ನೆರೆ ರಾಜ್ಯ ನಾಗಲ್ಯಾಂಡ್‌ನಲ್ಲೂ ಕೊರೊನಾದಿಂದ ಸತ್ತವರ ಬಗ್ಗೆ ವರದಿಯಾಗಿಲ್ಲ. ಈ ರಾಜ್ಯದಲ್ಲಿ ಒಟ್ಟು 916 ಜನರಿಗೆ ಕೊವಿಡ್ ತಗುಲಿದೆ. ಇದರಲ್ಲಿ 391 ಜನರು ಚೇತರಿಸಿಕೊಂಡಿದ್ದಾರೆ. 525 ಕೇಸ್ ಸಕ್ರಿಯವಾಗಿದೆ. ಆದರೆ, ಯಾವುದೇ ಪ್ರಾಣಾಪಾಯ ಆಗಿರುವ ಬಗ್ಗೆ ವರದಿ ಇಲ್ಲ.

ಕೊರೊನಾ ಸೋಂಕಿನ ಭೀತಿ: 1,00,000 ಮಿಂಕ್‌ಗಳನ್ನು ಕೊಲ್ಲಲು ಸ್ಪೇನ್ ಆದೇಶಕೊರೊನಾ ಸೋಂಕಿನ ಭೀತಿ: 1,00,000 ಮಿಂಕ್‌ಗಳನ್ನು ಕೊಲ್ಲಲು ಸ್ಪೇನ್ ಆದೇಶ

ಮಿಜೋರಾಂನಲ್ಲು ಪ್ರಾಣಾಪಾಯವಿಲ್ಲ

ಮಿಜೋರಾಂನಲ್ಲು ಪ್ರಾಣಾಪಾಯವಿಲ್ಲ

ಈಶಾನ್ಯ ಭಾರತದ ಮತ್ತೊಂದು ರಾಜ್ಯ ಮಿಜೋರಾಂ. ಈ ರಾಜ್ಯದಲ್ಲಿ ಕೊರೊನಾದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಿಜೋರಾಂನಲ್ಲಿ ಒಟ್ಟು 272 ಜನರಿಗೆ ಕೊರೊನಾ ತಗುಲಿದೆ. ಅದರಲ್ಲಿ 160 ಮಂದಿ ಗುಣಮುಖರಾಗಿದ್ದಾರೆ. 112 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಿಕ್ಕಿಂನಲ್ಲೂ ಕೊವಿಡ್ ಸಾವಿಲ್ಲ

ಸಿಕ್ಕಿಂನಲ್ಲೂ ಕೊವಿಡ್ ಸಾವಿಲ್ಲ

ಮಣಿಪುರ, ನಾಗಲ್ಯಾಂಡ್ ಹಾಗೂ ಮಿಜೋರಾಂ ಪಕ್ಕದಲ್ಲೇ ಇರುವ ಸಿಕ್ಕಿಂ ರಾಜ್ಯದಲ್ಲೂ ಕೊವಿಡ್‌ನಿಂದ ಯಾರೂ ಸಾವನ್ನಪ್ಪಿಲ್ಲ. ಸಿಕ್ಕಿಂನಲ್ಲಿ ಒಟ್ಟು 235 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 87 ಜನರು ಚೇತರಿಸಿಕೊಂಡಿದ್ದಾರೆ. 135 ಜನರು ಇನ್ನೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಂಡಮಾನ್ ನಿಕೋಬಾರ್

ಅಂಡಮಾನ್ ನಿಕೋಬಾರ್

ಭಾರತದ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬಾರ್‌ನಲ್ಲಿ 180 ಮಂದಿಗೆ ಕೊವಿಡ್ ಸೋಂಕು ತಗುಲಿದೆ. 133 ಜನರು ಗುಣಮುಖರಾಗಿದ್ದಾರೆ. 47 ಕೇಸ್ ಸಕ್ರಿಯವಾಗಿದೆ. ಇಲ್ಲಿಯೂ ಯಾವುದೇ ಸಾವು ವರದಿಯಾಗಿಲ್ಲ. ಮೇಘಲಾಯ್ ರಾಜ್ಯದಲ್ಲಿ 2 ಸಾವು, ಅರುಣಾಚಲ ಪ್ರದೇಶದಲ್ಲಿ 3 ಸಾವು, ಲಡಾಖ್‌ನಲ್ಲಿ 1 ಸಾವು, ತ್ರಿಪುರದಲ್ಲಿ 3 ಸಾವು ಕೊರೊನಾದಿಂದ ಆಗಿದೆ.

English summary
No single death of covid 19 was reported in these five state Manipur, nagaland, sikkim, mizoram and andaman and nicobar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X