ಸಣ್ಣ ಮಟ್ಟದ ತೆರಿಗೆ ಅಪರಾಧಕ್ಕೆ ಕಾನೂನು ಕ್ರಮ ಇಲ್ಲ: ನಿರ್ಮಲಾ ಸೀತಾರಾಮನ್
ನವದೆಹಲಿ, ಸೆಪ್ಟೆಂಬರ್ 14: ಸಣ್ಣ ಮಟ್ಟದ ತೆರಿಗೆ ಅಪರಾಧಕ್ಕೆ ಕಾನೂನು ಕ್ರಮ ಇರುವುದಿಲ್ಲವೆಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕುಸಿದ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವು ಘೋಷಣೆಗಳನ್ನು ಮಾಡಿದ ನಿರ್ಮಲಾ ಅವರು, ಸಣ್ಣ ಮಟ್ಟಿನ ತೆರಿಗೆ ಉಲ್ಲಂಘನೆಗಳನ್ನು ನಿರ್ಲಕ್ಷಿಸಲಾಗುವುದು ಎಂದಿದ್ದಾರೆ.

ತೆರಿಗೆ ಇಲಾಖೆಯು ವಿಚಾರಣೆ ನಡೆಸುತ್ತದೆ ಎಂಬ ಭಯವನ್ನು ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಂದ ಹೋಗಲಾಡಿಸಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಐಟಿ ಇಲಾಖೆಯ ವಿಚಾರಣೆಯು ಅಗತ್ಯವಿರುವ ಪ್ರಕರಣಗಳಲ್ಲಷ್ಟೆ ಮಾಡಲಾಗುವುದು ಸಣ್ಣ ಮಟ್ಟದ ತೆರಿಗೆ ಪಾವಿತದಾರರನ್ನು ಐಟಿ ಇಲಾಖೆ ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
25 ಲಕ್ಷಕ್ಕಿಂತಲೂ ಕಡಿಮೆ ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ತೆರಿಗೆ ಅಧಿಕಾರಿಗಳ ನಿಯೋಗವು ಒಪ್ಪಿಗೆ ಸೂಚಿಸಿ, ಅವಶ್ಯಕತೆ ಇದ್ದರಷ್ಟೆ ವಿಚಾರಣೆ ಅಥವಾ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ 'ಹಣದುಬ್ಬರ ನಿಯಂತ್ರಣದಲ್ಲಿದೆ ಎಂದ ಅವರು, ಮೋದಿ ಅವರ ಆಡಳಿತದಲ್ಲಿ ರಫ್ತು ಪ್ರಮಾಣ ಹೆಚ್ಚು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.












Click it and Unblock the Notifications