ಹೊಸ 1000 ರು. ಮುಖಬೆಲೆ ನೋಟು ಬರಲಿವೆ ಎನ್ನುವರಿಗೆ ಇಲ್ಲಿದೆ ಉತ್ತರ

ಶೀಘ್ರದಲ್ಲೇ ಹೊಸ 1000 ರು. ಮುಖಬೆಲೆ ನೋಟು ಜಾರಿಗೆ ಬರಲಿವೆ ಎಂದು ಪುಕಾರು ಎಬ್ಬಿಸಿದ್ದವರಿಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಉತ್ತರ ನೀಡಿದ್ದಾರೆ. ಆ ಉತ್ತರ ಇಲ್ಲಿದೆ.

ನವದೆಹಲಿ, ಫೆಬ್ರವರಿ.22 : ಹೊಸ 1000 ರು. ನೋಟು ಸಧ್ಯದಲ್ಲಿಯೇ ಚಲಾವಣೆಗೆ ಬರಲಿವೆ ಎಂಬ ಊಹಾಪೋಹಗಳಿಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಹೊಸ ಒಂದು ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಉದ್ದೇಶ ಇಲ್ಲ ಎಂದು ಅವರು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಈ ಮೂಲಕ ಹೊಸ ಸಾವಿರ ನೋಟುಗಳ ಬಗ್ಗೆ ಸಾರ್ವಜನಿಕರಲ್ಲಿ ಎದಿದ್ದ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

no-plan-introduce-new-rs-1-000-note-says-economic-affairs-secretary-shaktikanta-das

1,000 ರೂ.ಗಳ ನೋಟುಗಳ ಬದಲು ಕಡಿಮೆ ಮುಖಬೆಲೆಯ 500 ರು. ಮುಖ ಬೆಲೆಯ ನೋಟು ಹೆಚ್ಚು ಉತ್ಪಾದನೆಗೆ ಗಮನ ನೀಡುವುದಾಗಿ ಅವರು ಟ್ವೀಟರ್ ನಲ್ಲಿ ತಿಳಿಸಿ ಟ್ವೀಟ್ ಮಾಡಿದ್ದಾರೆ.

ದೇಶದ ಎಟಿಎಂಗಳಲ್ಲಿ ನಗದು ಕೊರತೆ ಇದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಅಭಾವ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಜನರು ತಮಗೆ ಅಗತ್ಯವಾದ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್ ಡ್ರಾ ಮಾಡಬಾರದು ಎಂದು ಅವರು ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ಹೊಸ ಸಾವಿರ ರು. ನೋಟುಗಳು ಚಲಾವಣೆಗೆ ಬರಲಿವೆ ಎಂಬುದು ಗಾಳಿ ಸುದ್ದಿಯಾಗಿದೆ ಎಂದಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಕಳೆದ ವಾರ ಹೇಳಿಕೆ ನೀಡಿ ದೇಶದಲ್ಲಿ ನೋಟುಗಳ ಕೊರತೆ ಇಲ್ಲ.

ಬಹುತೇಕ ಬ್ಯಾಂಕ್‍ ಗಳು ಮತ್ತು ಎಟಿಎಂಗಳಲ್ಲಿ ಹಣ ಲಭ್ಯತೆ ಸಹಜ ಸ್ಥಿತಿಗೆ ಬರುತ್ತಿದೆ. ಇನ್ನು ಕೆಲವು ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಣೆಯಾಗಲಿದೆ ಎಂದು ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+