ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ದೆಹಲಿ : ಸಮ-ಬೆಸ ಸಂಚಾರ ವ್ಯವಸ್ಥೆಗೆ ಬ್ರೇಕ್

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಅರವಿಂದ್ ಕೇಜ್ರಿವಾಲ್ ಗೆ ಟೈಮೇ ಸರಿಯಿದ್ದಂತಿಲ್ಲ | Oneindia Kannada

    ನವೆಂಬರ್ 11, ನವದೆಹಲಿ : ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ ಕಾರಣ ನವೆಂಬರ್ 13 ರಿಂದ ಜಾರಿಗೆ ತರಲು ಯೋಜಿಸಿದ್ದ ಸಮ-ಬೆಸ ಸಂಖ್ಯೆ ಸಂಚರ ವ್ಯವಸ್ಥೆಯ ಯೋಜನೆಯನ್ನು ದೆಹಲಿ ಸರ್ಕಾರ ಕೈಬಿಟ್ಟಿದೆ. ಹಸಿರು ನ್ಯಾಯಮಂಡಳಿಯು ದೆಹಲಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ ಹಿನ್ನೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ದೆಹಲಿ ಸರ್ಕಾರಕ್ಕೆ ನವೆಂಬರ್ ಛಳಿ ಯ 'ಬಿಸಿ' ತಗುಲುತ್ತಿದೆ. ನಗರದ ವಾಯುಮಾಲಿನ್ಯ ನಿಯಂತ್ರಣಕ್ಕೆ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ಯೋಜಿತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ವಿರೋಧ ಪಕ್ಷಗಳು ಸರ್ಕಾರವನ್ನು ಚುಚ್ಚುತ್ತಿವೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಯಾವ ಹೆಜ್ಜೆ ಇಟ್ಟರೂ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದೆ.

    ದೆಹಲಿ : 64 ರೈಲುಗಳ ಸಂಚಾರಕ್ಕೆ ಅಡ್ಡಗಾಲಿಟ್ಟ ದಟ್ಟ ಮಂಜು

    ವಾಯುಮಾಲಿನ್ಯ ನಿಯಂತ್ರಣಕ್ಕೆಂದು ಸಮ-ಬೆಸೆ ಸಂಖ್ಯೆ ಸಂಚಾರ ವ್ಯವಸ್ಥೆಯನ್ನು ಇದೇ ತಿಂಗಳ 13 ರಿಂದ ಐದು ದಿನಗಳ ಕಾಲ ಜಾರಿಯಾಗುವಂತೆ ದೆಹಲಿ ಸರ್ಕಾರ ನೀಡಿದ್ದ ಆದೇಶಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಡ್ಡಗಾಲು ಹಾಕಿದ್ದಲ್ಲದೆ. ದೆಹಲಿ ಸರ್ಕಾರದ ಮಾಲಿನ್ಯ ನಿಯಂತ್ರಣ ಯೋಜನೆಗಳನ್ನು ದೂರದೃಷ್ಠಿ ಇಲ್ಲದವು ಎಂದು ಹೀಗಳೆದಿದೆ.

    ಕಳೆದ ವರ್ಷ ಮಾಡಿದ್ದ ಸಮ-ಬೆಸ ಸಂಖ್ಯೆ ಸಂಚಾರ ವ್ಯವಸ್ಥೆಯಿಂದ ಮಾಲಿನ್ಯದಲ್ಲಿ ಆದ ಬದಲಾವಣೆಯ ಬಗ್ಗೆ ವರದಿ ಸಲ್ಲಿಸಿದ ನಂತರವಷ್ಟೆ ಈ ನಿರ್ಣಯ ಕೈಗೊಳ್ಳಲಿ. ಕಳೆದ ವರ್ಷ ಮಾಡಿದ ಪ್ರಯೋಗದಿಂದ ಮಾಲಿನ್ಯ ಇಳಿಕೆಯಲ್ಲಿ ಯಾವುದೇ ಬದಲಾವಣೆ ಆಗದೇ ಇದ್ದಾಗ ಹೀಗೆ ಸುಮ್ಮನೆ ಜನರಿಗೆ ಸಮಸ್ಯೆ ನೀಡುವುದು ಸರಿಯಲ್ಲ ಎಂದು ಅದು ಅಭಿಪ್ರಾಯವ್ಯಕ್ತಪಡಿಸಿದೆ.

    'ನಾಸಾ' ಚಿತ್ರಗಳಲ್ಲಿ ದೆಹಲಿ ಮಾಲಿನ್ಯದ ರಹಸ್ಯ ಬಯಲು

    ದೆಹಲಿ ಸರ್ಕಾರ ಹೊಸ ಸಂಚಾರ ವ್ಯವಸ್ಥೆಯನ್ನು ಜಾರಿ ಮಾಡಿರುವ ರೀತಿಯ ಬಗ್ಗೆಯೂ ಅಸಮಧಾನ ಹೊರಹಾಕಿರುವ ಹಸಿರು ನ್ಯಾಯ ಮಂಡಳಿ. "ಆದೇಶವನ್ನು ಹೀಗೆ ಜಾರಿ ಮಾಡಲು ಸಾಧ್ಯವಿಲ್ಲ' ಎಂದು ಖಾರವಾಗಿ ಹೇಳಿದೆ.

    ಮಾಲಿನ್ಯದಲ್ಲಿ ಆಗಿರಲಿಲ್ಲ ವ್ಯತ್ಯಾಸ

    ಮಾಲಿನ್ಯದಲ್ಲಿ ಆಗಿರಲಿಲ್ಲ ವ್ಯತ್ಯಾಸ

    ಕಳೆದ ವರ್ಷ ಎರಡು ಬಾರಿ ಸಮ-ಬೆಸ ಸಂಚಾರ ವ್ಯವಸ್ಥೆ ಜಾರಿಮಾಡಿದಾಗಲೂ ಯೋಜನೆ ಮಕಾಡೆ ಮಲಗಿತ್ತು. ಕಳೆದ ವರ್ಷದ ಸಮ-ಬೆಸ ಸಂಚಾರ ವ್ಯವಸ್ಥೆ ಜಾರಿ ಮಾಡಿದಾಗ ವಾಯು ಮಾಲಿನ್ಯದಲ್ಲಿ ಯಾವುದೇ ವ್ಯತ್ಯಾಸ ಬಂದಿರಲಿಲ್ಲ ಹಾಗಿದ್ದಮೇಲೆ ಏಕೆ ಈಗ ಜಾರಿ ಮಾಡಲಾಗುತ್ತಿದೆ ಎಂದು ಹಸಿರು ನ್ಯಾಯ ಮಂಡಳಿ ಪ್ರಶ್ನಿಸಿದೆ.

    ಹೆಚ್ಚು ವಾಹನ ಖರೀದಿಗೆ ಪ್ರೇರೇಪಣೆ ಸಾಧ್ಯತೆ

    ಹೆಚ್ಚು ವಾಹನ ಖರೀದಿಗೆ ಪ್ರೇರೇಪಣೆ ಸಾಧ್ಯತೆ

    ಈ ರೀತಿಯಾಗಿ ಆದೇಶ ಜಾರಿ ಮಾಡುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿರುವ ಹಸಿರು ನ್ಯಾಯಮಂಡಳಿ ಇದರಿಂದ ಜನರು ಹೆಚ್ಚು ವಾಹನಗಳನ್ನು ಖರೀದಿ ಮಾಡುವಂತೆ ಆಗುತ್ತದೆ. ಪ್ರತಿಯೊಬ್ಬರು ಸಮ ಸಂಖ್ಯೆಯ ಒಂದು ವಾಹನ ಬೆಸ ಸಂಖ್ಯೆಯ ಒಂದು ವಾಹನ ಹೊಂದಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆಯಷ್ಟೆ ಎಂದು ಹಸಿರು ನ್ಯಾಯ ಮಂಡಳಿ ಹೇಳಿದೆ.

    ಬೇರೆ ಸೂಚನೆಗಳ ಬಗ್ಗೆ ನಿರ್ಲಕ್ಷ್ಯ

    ಬೇರೆ ಸೂಚನೆಗಳ ಬಗ್ಗೆ ನಿರ್ಲಕ್ಷ್ಯ

    ಸುಪ್ರೀಂ ಕೋರ್ಟ್ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ನೀಡಿದ ಎಲ್ಲ ಸೂಚನೆಗಳನ್ನು ನಿರ್ಲಕ್ಷಿಸಿ ಕೇವಲ ಸಮ-ಬೆಸ ಸಂಖ್ಯೆ ಸಂಚಾರ ವ್ಯವಸ್ಥೆಯ ಬಗ್ಗೆ ಮಾತ್ರ ತಲೆ ಕೆಡಿಕೊಳ್ಳುತ್ತಿರುವುದು ಏತಕ್ಕೆ. ಇದನ್ನು ಪಿಕ್ ನಿಕ್ ಎಂದು ಸರ್ಕಾರ ಭಾವಿಸದಂತಿದೆ ಎಂದು ಹಸಿರು ನ್ಯಾಯ ಮಂಡಳಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ.

    ಡೀಸೆಲ್ ಚಾಲಿತ ಬಸ್ಸುಗಳನ್ನು ಓಡಿಸಿದರೆ ಪ್ರಯೋಜನವೇನು

    ಡೀಸೆಲ್ ಚಾಲಿತ ಬಸ್ಸುಗಳನ್ನು ಓಡಿಸಿದರೆ ಪ್ರಯೋಜನವೇನು

    ಸಮ-ಬೆಸೆ ಸಂಚಾರ ವ್ಯವಸ್ಥೆ ಸಮಯದಲ್ಲಿ ಸರ್ಕಾರ ಚಲಾಯಿಸುವುದಾಗಿ ಹೇಳಿರುವ 500 ಬಸ್ಸುಗಳ ಬಗ್ಗೆಯೂ ಮಾಹಿತಿ ಕೇಳಿರುವ ಹಸಿರು ನ್ಯಾಯ ಮಂಡಳಿ. ಇವುಗಳಲ್ಲಿ ಎಷ್ಟು ಬಸ್ಸುಗಳು ಡೀಸೆಲ್ ನಿಂದ ಚಲಿಸುತ್ತವೆ. ಎಷ್ಟು ಬಸ್ಸುಗಳು ವಿದ್ಯುತ್ ನಿಂದ ಚಲಿಸುತ್ತವೆ ಮಾಹಿತಿ ಕೊಡಿ ಎಂದು ಹೇಳಿದೆ. ಡೀಸೆಲ್ ಬಸ್ ಚಲಾವಣೆ ಮಾಡಿದರೆ ಸಮ-ಬೆಸೆ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ ಉದ್ದೇಶ ಸಾರ್ಥಕವಾಗುವುದಾದರೂ ಹೇಗೆ ಎಂದು ಅಂದು ಕೇಳಿದೆ.

    ಮಾಲಿನ್ಯದಲ್ಲಿ ಅರ್ಧ ಪಾಲು ದ್ವಿಚಕ್ರ ವಾಹನದ್ದೇ

    ಮಾಲಿನ್ಯದಲ್ಲಿ ಅರ್ಧ ಪಾಲು ದ್ವಿಚಕ್ರ ವಾಹನದ್ದೇ

    ಸಮ-ಬೆಸ ಸಂಚಾರ ವ್ಯವಸ್ಥೆಯಿಂದ ಮಹಿಳಾ ಚಾಲಕರಿಗೆ ಮತ್ತು ದ್ವಿಚಕ್ರ ವಾಹನಕ್ಕೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿರುವ ಹಸಿರು ನ್ಯಾಯ ಮಂಡಳಿ. ಈ ಆದೇಶ ಹಾಸ್ಯಾಸ್ಪದವಾಗಿದೆ ಎಂದಿದೆ. ಕಾನ್ಪುರ ಐಐಟಿ ಯ ವರದಿಯ ಪ್ರಕಾರರ ದೆಹಲಿಯ ವಾಯುಮಾಲಿನ್ಯದಲ್ಲಿ 46% ಕಾರಣ ದ್ವಿಚಕ್ರವಾಹನಗಳೇ ಆಗಿವೆ ಹಾಗಿದ್ದ ಮೇಲೆ ದ್ವಿಚಕ್ರ ವಾಹನಕ್ಕೆ ವಿನಾಯಿತಿ ನೀಡಿರುವುದು ಸರಿಯಾದ ಕ್ರಮವಲ್ಲ ಹಾಗೂ ಮಹಿಳೆಯರು ವಾಹನ ಚಲಾಯಿಸಿದರೆ ವಾಯುಮಾಲಿನ್ಯ ಆಗುವುದಿಲ್ಲವೇ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದೆ.

    ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಇತರ ಪಕ್ಷಗಳು

    ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಇತರ ಪಕ್ಷಗಳು

    ದೆಹಲಿಯಲ್ಲಿ ವಾಯುಮಾಲಿನ್ಯ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ದೆಹಲಿ ಬಿ.ಜೆ.ಪಿಯು ಜನಗಳಿಗೆ ಉಚಿತ ಮಾಸ್ಕ್ ಗಳನ್ನು ನೀಡುತ್ತಿದೆ. ಕಲುಷಿತ ಗಾಳಿಯಿಂದ ರಕ್ಷಿಸಿಕೊಳ್ಳಿ ಹಾಗೂ ಕಲುಷಿತ ಸರ್ಕಾರವನ್ನು ದೂರ ತಳ್ಳಿ ಎಂಬ ಘೊಷವಾಕ್ಯವನ್ನು ಬಿ.ಜೆ.ಪಿ ಬಳಸುತ್ತಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Uncertainty prevailed over the implementation of the odd-even car rationing scheme as the National Green Tribunal today questioned the rationale behind Delhi government's decision to roll it out for five days next week, saying the scheme "cannot be imposed like this".

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more