ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿ ಹೊಸ ಮುಖಗಳಿಲ್ಲ!
Recommended Video
ನವದೆಹಲಿ, ಫೆಬ್ರವರಿ 14: ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಬೀಗುತ್ತಿರುವ ಅರವಿಂದ ಕೇಜ್ರಿವಾಲ್ ಅವರು ತಮ್ಮ ಹಳೆಯ ಸಂಪುಟವನ್ನೇ ಈ ಅವಧಿಗೂ ಮುಂದುವರೆಸಲಿದ್ದಾರೆ.
ಕಳೆದ ಅವಧಿಯಲ್ಲಿ ಮಂತ್ರಿಗಳಾಗಿದ್ದ ತಮ್ಮ ಸಹವರ್ತಿಗಳನ್ನೇ ಈ ಅವಧಿಗೂ ಅರವಿಂದ ಕೇಜ್ರಿವಾಲ್ ನೆಚ್ಚಿಕೊಂಡಿದ್ದಾರೆ. ಕಳೆದ ಬಾರಿ ಉತ್ತಮ ಕೆಲಸ ಮಾಡಿ ದೆಹಲಿ ಬದಲಾವಣೆಗೆ ಕಾರಣವಾದವರನ್ನೇ ಈ ಬಾರಿಯೂ ಉಳಿಸಿಕೊಳ್ಳುವುದು ಉತ್ತಮ ಎಂದು ಅರವಿಂದ ಕೇಜ್ರಿವಾಲ್ ಯೋಚಿಸಿದ್ದಾರೆ.
ಮನೀಷ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರಾಯ್, ಕೈಲಾಶ್ ಗಹಲೋಟ್, ಇಮ್ರಾನ್ ಹುಸೇನ್ ಮತ್ತು ರಾಜೇಂದ್ರ ಪಾಲ್ ಗೌತಮ್ ಅರವಿಂದ ಕೇಜ್ರಿವಾಲ್ ಸಂಪುಟದ ಸಚಿವರಾಗಲಿದ್ದಾರೆ.

ಫೆಬ್ರವರಿ 16 ರ ಭಾನುವಾರ ಅರವಿಂದ ಕೇಜ್ರಿವಾಲ್ ಅವರು ಸಿಎಂ ಆಗಿ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅದೇ ದಿನ ಸಂಪುಟದ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೊಸದಾಗಿ ವಿಧಾನಸಭೆಗೆ ಆಯ್ಕೆ ಆಗಿರುವ ಆತಿಶಿ ಅವರಿಗೆ ಈ ಬಾರಿ ಸಂಪುಟದಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ ಅವರಿಗೆ ಅವಕಾಶ ನೀಡುವ ಸಂಭವ ವಿರಳ. ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಸಹ ಪಕ್ಷದಲ್ಲಿ ಕೇಳಿ ಬಂದಿದೆ.












Click it and Unblock the Notifications