"ಮಗಳೇ ಇಲ್ಲ...": ಅತ್ಯಾಚಾರ, ಮೆರವಣಿಗೆಗೆ ಒಳಗಾದ ಸಂತ್ರಸ್ತೆಯ ತಂದೆಯ ಅಳಲು
ನವದೆಹಲಿ, ಫೆಬ್ರವರಿ 1: ಪೂರ್ವ ದಿಲ್ಲಿಯ ಶಾಹದರ ಪ್ರದೇಶದಲ್ಲಿ ಹಲ್ಲೆಗೊಳಗಾದ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆಪಡೆದು ಗಾಯಗಳಿಂದ ಚೇತರಿಸಿಕೊಂಡಿದ್ದಾರೆ. ಆದರೆ ಆಕೆ ತನ್ನ ತನ್ನ ಕುಟುಂಬ ಹಾಗೂ ತನ್ನ ಮೂರು ವರ್ಷದ ಮಗುವಿನೊಂದಿಗೆ ಇರಲು ನಿರಾಕರಿಸುತ್ತಿದ್ದಾಳೆ ಎಂದು ವರದಿಯಾಗಿದೆ. ಆಕೆ ತನ್ನ ಮಗುವನ್ನು ನೋಡಿಕೊಳ್ಳುವ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ಆಕೆಯ ಮನೆಯವರು ಹೇಳಿಕೊಂಡಿದ್ದಾರೆ.
ಕಳೆದ ಬುಧವಾರ ಅತ್ಯಾಚಾರ ಸಂತ್ರಸ್ತೆ ಎಂದು ತಿಳಿಯಲಾದ ಯುವತಿಯನ್ನು ಕೂದಲು ಕತ್ತರಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ಆಕೆಯ ನೆರೆಹೊರೆಯ ಮಹಿಳೆಯರೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ಆಘಾತಕಾರಿ ಘಟನೆ ನಡೆದಿತ್ತು. ಯುವತಿಯ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಸಾವಿಗೆ ಆಕೆಯನ್ನು ದೂರಿ ಯುವಕನ ಕುಟುಂಬ ಆಕೆಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ವಿವಾಹಿತಳಾಗಿರುವ ಸಂತ್ರಸ್ತೆಗೆ ಒಂದು ಮಗುವಿದೆ. ಯುವಕನ ಸಾವಿನ ನಂತರ ಆಕೆ ನವೆಂಬರ್ 12ರಂದು ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.
|
ಕ್ರಮಕ್ಕೆ ಒತ್ತಾಯ
ಈ ಘಟನೆಯನ್ನು ಮಹಿಳಾ ಆಯೋಗವೂ ಗಂಭೀರವಾಗಿ ಪರಿಗಣಿಸಿದೆ. ಪೊಲೀಸರು ನಾಲ್ಕು ಮಂದಿ ಮಹಿಳೆಯರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಿದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್, 20 ವರ್ಷದ ಯುವತಿಯನ್ನು ಅಕ್ರಮ ಮದ್ಯ ಮಾರಾಟಗಾರರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತ ಮಹಿಳೆಗೆ ಥಳಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿವೆ.
|
ಮಹಿಳೆಯನ್ನು ನಿರ್ದಯವಾಗಿ ಥಳಿಸಿದ ಮಹಿಳೆಯರು
ಒಂದು ವಿಡಿಯೋದಲ್ಲಿ, ಆಕೆಯನ್ನು ಬಂಧಿಸಿದ್ದ ಕೋಣೆಯಲ್ಲಿ ಆಕೆಯನ್ನು ನಿರ್ದಯವಾಗಿ ಥಳಿಸಲಾಗಿದೆ. ಆಕೆಯ ಮೇಲೆ ಹೇಗೆ ಹಲ್ಲೆ ನಡೆಸಬೇಕು ಎಂಬುದನ್ನು ಸುತ್ತಲ ಮಹಿಳೆಯರು ಮಾತನಾಡಿಕೊಳ್ಳುವ ಧ್ವನಿ ಕೂಡ ಕೇಳಿಸುತ್ತದೆ. ಆಕೆಯನ್ನು ಹೊಡೆದು ಒದೆಯುವಾಗ ಚಿಕ್ಕ ಹುಡುಗರೂ ಸೇರುತ್ತಾರೆ. ಒಬ್ಬ ಮಹಿಳೆ ಆಕೆ ಕೂದಲನ್ನು ಕತ್ತರಿಸಲು ಪ್ರಾರಂಭಿಸುತ್ತಾಳೆ. ಅವಳು ಸಹಾಯಕ್ಕಾಗಿ ಕಿರುಚುತ್ತಾಳೆ. ಆಕೆಯ ಮೇಲೆ ಮಹಿಳೆಯರು ಹಲ್ಲೆ ನಡೆಸಿದ್ದರಿಂದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಂದು ವೀಡಿಯೊದಲ್ಲಿ ಜನಸಮೂಹವು ಅವಳನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುವುದನ್ನು ಕಾಣಬಹುದು.

'ಮಗಳು ಮನೆಗೆ ಬರಬೇಕು'
"ಯಾವುದೇ ಹುಡುಗಿ, ಯಾವುದೇ ಮಗಳು ಈ ರೀತಿ ದೌರ್ಜನಕ್ಕೆ ಒಳಗಾಗಬಾರದು" ಎಂದು ಪಾರ್ಶ್ವವಾಯು ಮತ್ತು ಹಾಸಿಗೆ ಹಿಡಿದ ಸಂತ್ರಸ್ತೆಯ ತಂದೆ ಅಳಲು ತೋಡಿಕೊಂಡಿದ್ದಾರೆ. "ಅವಳನ್ನು ಹೊಡೆದ ರೀತಿ ನನಗೆ ಸಹಿಸಲಾಗುತ್ತಿಲ್ಲ. ಅವಳನ್ನು ತಪ್ಪಾಗಿ ದೂಷಿಸಲಾಗಿದೆ. ನನಗೆ ನ್ಯಾಯದ ಬಗ್ಗೆ ನಂಬಿಕೆ ಇಲ್ಲ. ನನಗೆ ನನ್ನ ಮಗಳು ಮನೆಗೆ ಮರಳಬೇಕು" ಎಂದು ಅವರು ಹೇಳುವಾಗ ಅವರ ಧ್ವನಿ ನಡುಗಿದೆ.
"ಬಿಜೆಪಿಯ ಗೌತಮ್ ಗಂಭೀರ್ ನಮ್ಮನ್ನು ಭೇಟಿ ಮಾಡಿದರು, ಕಾಂಗ್ರೆಸ್‌ನ ಅನಿಲ್ ಚೌಧರಿ ಕೂಡ ನಮ್ಮನ್ನು ಭೇಟಿ ಮಾಡಿದರು, ನಮಗೆ ಕೇಳದೆ ಎರಡು ತಿಂಗಳ ಪಡಿತರ ನೀಡಲಾಗಿದೆ. ನಮಗೆ ಬೆಂಬಲ ಮತ್ತು ಸಹಾಯವನ್ನು ನೀಡಲಾಗುತ್ತಿದೆ, ಇಲ್ಲದಿದ್ದರೆ ನಮಗೆ ಯಾರು ಸಹಾಯ ಮಾಡುತ್ತಾರೆ?" ತಂದೆ NDTV ಗೆ ಹೇಳಿದರು. ಆಕೆಯ ಸಹೋದರಿ, "ಆ ಸಮಯದಲ್ಲಿ ಜನರು ಸ್ವಲ್ಪ ಬೆಂಬಲವನ್ನು ತೋರಿಸಿದ್ದರೆ, ಹೀಗಾಗುತ್ತಿರಲಿಲ್ಲ'' ಎಂದರು.
ಇನ್ನೂ ಘಟನೆಯ ಬಳಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವದಂತಿಗಳನ್ನು ದೆಹಲಿ ಪೊಲೀಸರು ಇಂದು ನಿರಾಕರಿಸಿದ್ದು, ಇದು ಉತ್ತರ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳ ಚುನಾವಣೆಗೆ ಮುಂಚಿತವಾಗಿ ತೊಂದರೆಯನ್ನುಂಟುಮಾಡುವ ಪ್ರಯತ್ನ ಎಂದು ಕರೆದಿದ್ದಾರೆ. ಕೆನಡಾ, ಯುಕೆ ಮತ್ತು ಯುಎಸ್ ಮೂಲದ ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಬಗ್ಗೆ ಗುಪ್ತಚರ ಸಂಸ್ಥೆಗಳು ಈ ರೀತಿಯ ಸೂಕ್ಷ್ಮ ಘಟನೆಗಳನ್ನು ಬಳಸಿಕೊಂಡು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
|
ಈ ಕೃತ್ಯ ಅಸಹನೀಯ
20 ವರ್ಷದ ಯುವತಿಯೊಬ್ಬಳನ್ನು ಅಮಾನುಷವಾಗಿ ಥಳಿಸಿರುವ ವಿಡಿಯೋ ನಮ್ಮ ಸಮಾಜದ ಅತ್ಯಂತ ಕಳವಳಕಾರಿ ಮುಖವನ್ನು ತೆರೆದಿಟ್ಟಿದೆ. ಕಹಿ ಸತ್ಯವೆಂದರೆ ಈ ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸಲು ಕಷ್ಟವಾಗುತ್ತಿದೆ. ಈ ನಾಚಿಕೆಗೇಡಿನ ಸಂಗತಿಯನ್ನು ಒಪ್ಪಿಕೊಳ್ಳಬೇಕಾ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಗೌತಮ್ ಗಂಭೀರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮದ ಭರವಸೆ ನೀಡಿದ್ದಾರೆ. "ಈ ಪ್ರಾಣಿಗಳನ್ನು (ಪುರುಷರು ಮತ್ತು ಮಹಿಳೆಯರು) ಬಿಡಲಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಬದುಕುಳಿದವರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು" ಎಂದು ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ.
|
ಅರವಿಂದ್ ಕೇಜ್ರಿವಾಲ್ ಟ್ವೀಟ್
ಇದೊಂದು ನಾಚಿಕೆಗೇಡಿನ ಘಟನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. "ಈ ದಾಳಿಕೋರರು ಇದನ್ನು ಮಾಡಲು ಹೇಗೆ ಧೈರ್ಯ ಮಾಡಿದರು? ನಾನು ಕೇಂದ್ರ ಗೃಹ ಸಚಿವರು ಮತ್ತು ಲೆಫ್ಟಿನೆಂಟ್ ಗವರ್ನರ್ ಅವರನ್ನು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ದೆಹಲಿಯ ಜನರು ಇಂತಹ ಅಪರಾಧಗಳನ್ನು ಸಹಿಸುವುದಿಲ್ಲ" ಎಂದು ಕೇಜ್ರಿವಾಲ್ ಬರೆದಿದ್ದಾರೆ. ಕಳೆದ ವಾರ, ದೆಹಲಿ ಮಹಿಳಾ ಸಮಿತಿಯು ಈ ವಿಡಿಯೊವನ್ನು ಹಂಚಿಕೊಂಡಿದೆ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.












Click it and Unblock the Notifications