ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ ಎಂದಿದ್ದ ನಿತಿನ್ ಗಡ್ಕರಿ ಯೂ ಟರ್ನ್
ನವದೆಹಲಿ, ಅಕ್ಟೋಬರ್ 10: ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಬಿಜೆಪಿಯು ಅವಾಸ್ತವಿಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ ಎಂದಿದ್ದ ಕೇಂದ್ರ ಬಿಜೆಪಿ ಮಂತ್ರಿ ನಿತಿನ್ ಗಡ್ಕರಿ ಇದೀಗ 'ನಾನು ಹಾಗೆ ಹೇಳಿಯೇ ಇಲ್ಲ' ಎಂದಿದ್ದಾರೆ.
ಮರಾಠಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ 'ನಾವು ಅವಾಸ್ತವಿಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದು, ನಾವು ಮಾಡಿದ್ದ ಭರವಸೆಗಳನ್ನು ಜನರು ನೆಪಿಸಿದಾಗ ನಕ್ಕು ಸುಮ್ಮನಾಗುತ್ತೇವೆ' ಎಂದು ನಿತಿನ್ ಗಡ್ಕರಿ ಹೇಳಿದ್ದರು. ಅವರ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿತಿನ್ ಗಡ್ಕರಿ, 'ನಾನು ಮೋದಿ ಅವರ ಬಗ್ಗೆಯಾಗಲಿ, 15 ಲಕ್ಷದ ಬಗ್ಗೆಯಾಗಲಿ ಮಾತನಾಡೇ ಇಲ್ಲ ಎಂದಿದ್ದಾರೆ. ಆ ಸಂದರ್ಶನ ಮರಾಠಿ ಭಾಷೆಯಲ್ಲಿದೆ ರಾಹುಲ್ ಗಾಂಧಿ ಯಾವಾಗ ಮರಾಠಿ ಕಲಿತರು ಎಂದು ರಾಹುಲ್ ಗಾಂಧಿ ಬಗ್ಗೆ ಕೊಂಕು ನುಡಿದಿದ್ದಾರೆ.
सही फ़रमाया, जनता भी यही सोचती है कि सरकार ने लोगों के सपनों और उनके भरोसे को अपने लोभ का शिकार बनाया है| pic.twitter.com/zhlKTrKHgU
— Rahul Gandhi (@RahulGandhi) October 9, 2018
ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋವನ್ನು ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿ, ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ ಎಂದು ಒಪ್ಪಿಕೊಂಡಿದೆ ಎಂದು ಹೇಳಿದ್ದರು.












Click it and Unblock the Notifications