ದೆಹಲಿಯಲ್ಲಿ ಏಪ್ರಿಲ್ 30ರವರೆಗೂ ರಾತ್ರಿ ನಿಷೇಧಾಜ್ಞೆ ಜಾರಿ

ನವದೆಹಲಿ, ಏಪ್ರಿಲ್ 6: ರಾಜಧಾನಿ ದೆಹಲಿಯಲ್ಲಿ ಮಂಗಳವಾರದಿಂದ ಏಪ್ರಿಲ್ 30ರವರೆಗೂ ರಾತ್ರಿ ನಿಷೇಧಾಜ್ಞೆ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ ಏ. 6ರ ರಾತ್ರಿ 10 ರಿಂದ ಬೆಳಿಗ್ಗಿನ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸುವುದಾಗಿ ಸರ್ಕಾರ ತಿಳಿಸಿದೆ.

ಕಳೆದ ತಿಂಗಳಿನಿಂದ ದೆಹಲಿ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ದೆಹಲಿಯು ಕೊರೊನಾ ವೈರಸ್‌ನ ನಾಲ್ಕನೆಯ ಅಲೆ ಎದುರಿಸುತ್ತಿದೆ. ಆದರೆ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದರು.

ದೆಹಲಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದ್ದು, ಈ ಅವಧಿಯಲ್ಲಿ ವಾಹನ ಸಂಚಾರಕ್ಕೆ ತಡೆ ಇರುವುದಿಲ್ಲ. ಹಾಗೆಯೇ ಲಸಿಕೆ ಪಡೆದುಕೊಳ್ಳಲು ತೆರುವವರಿಗೆ ಇ-ಪಾಸ್ ಹೊಂದಿದ್ದರೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿಯಲ್ಲಿ ದಿನದ 24 ಗಂಟೆಯೂ ಕೋವಿಡ್ ಲಸಿಕೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 Night Curfew In Delhi From 10 PM To 5 AM Begins From April 6 To 30

ಪಡಿತರ, ದವಸ ಧಾನ್ಯಗಳು, ತರಕಾರಿ, ಹಾಲು ಮತ್ತು ಔಷಧಗಳಂತಹ ಸರಕುಗಳನ್ನು ತರಲು ತೆರಳುವ ಅಗತ್ಯ ಸೇವೆಗಳು ಮತ್ತು ವ್ಯಾಪಾರಿಗಳಿಗೆ ಇದೇ ರೀತಿಯ ಪಾಸ್‌ಗಳೊಂದಿಗೆ ಅನುಮತಿ ನೀಡಲಾಗುತ್ತದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತರಿಗೆ ಸಹ ಪಾಸ್ ನೀಡಲಾಗುತ್ತದೆ.

ಖಾಸಗಿ ವೈದ್ಯರು, ದಾದಿಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗೆ ಗುರುತಿನ ಚೀಟಿಯೊಂದಿಗೆ ಓಡಾಡಲು ಅನುಮತಿ ನೀಡಲಾಗಿದೆ. ಗರ್ಭಿಣಿಯರು ಹಾಗೂ ಚಿಕಿತ್ಸೆ ಅಗತ್ಯವಿರುವ ಇತರರಿಗೂ ವಿನಾಯಿತಿ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+