ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳತ್ತಲೂ ಬಲೆಬೀಸುತ್ತಿದೆಯಾ ಬಿಜೆಪಿ?
ನವದೆಹಲಿ, ಜೂನ್ 15: ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಆಡಲಿತ ಮತ್ತು ವಿಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಇದೇ ಜೂನ್ 16 ರಂದು ಬಿಜೆಪಿ ಮುಖಂಡರಾದ ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಸೋನಿಯಾ ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕಾಂಗ್ರೆಸ್ಸನ್ನು ಅವರು ಮನವಿ ಮಾಡಿಕೊಳ್ಳಲಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಎಡಪಕ್ಷಗಳು ಚುರುಕಾಗಿವೆ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ವಿಪಕ್ಷಗಳತ್ತ ಬಲೆ ಬೀಸುತ್ತಿದೆ, ಹುಷಾರಾಗಿ ಎಂದು ಕಾಂಗ್ರೆಸ್ ಅನ್ನು ಅದು ಎಚ್ಚರಿಸಿದೆ.

ಆಡಳಿತ ಪಕ್ಷ ಬಿಜೆಪಿ, ಬುಡಕಟ್ತು ಜನಾಂಗದ ಪ್ರತಿನಿಧಿಯಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಸೂಚಿಸಲಿದೆ ಎಂದು ವಿಪಕ್ಷಗಳೂ ನಂಬಿವೆ. ಹಲವು ವಿಪಕ್ಷಗಳು ಬುಡಕಟ್ಟು ಜನಾಂಗದ ಅಭ್ಯರ್ಥಿಗೆ ಮತ ಹಾಕದೇ ಇರುವುದಕ್ಕೆ ಕಷ್ಟ. ಆದ್ದರಿಂದಲೇ ಬಿಜೆಪಿ ಮುರ್ಮು ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆ ಎಡಪಕ್ಷಗಳಿಗೆ ತೀವ್ರ ಹಿನ್ನಡೆ ಉಂಟುಮಾಡಬಹುದು.
ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜು.20 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications