ಹೊಸವರ್ಷ ಬಂಪರ್, ಸ್ಪೈಸ್ ಜೆಟ್ ಪ್ರಯಾಣ ದರ ಕಡಿತ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್, 28: ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸವರ್ಷಕ್ಕೆ ಒಂದು ಬಂಪರ್ ಕೊಡುಗೆ ನೀಡಿದ್ದು, ದೇಶೀಯ ಮಾರ್ಗಗಳ ಪ್ರಯಾಣ ದರದಲ್ಲಿ ಭಾರೀ ರಿಯಾಯಿತಿ ಒದಗಿಸಿದೆ.

ದೇಶೀಯ ಮಾರ್ಗಗಳಲ್ಲಿ ಒಂದು ಬಾರಿ ಪ್ರಯಾಣಕ್ಕೆ ಕೇವಲ 716 ದರ ನಿಗದಿಪಡಿಸಿದ್ದು, ಟಿಕೆಟ್ ಬುಕ್ ಮಾಡುವ ಅವಕಾಶ ಡಿಸೆಂಬರ್ 28ರಿಂದ 31 ರವರೆಗೆ ಪ್ರಯಾಣಿಕರಿಗೆ ಸ್ಪೈಸ್ ಜೆಟ್ ನ ವಿವಿಧ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ.[ಸಸ್ಯಹಾರಿಗಳಿಗೆ ಸೋತ ಏರ್ ಇಂಡಿಯಾ]

spiceJet

'ಹ್ಯಾಪಿ ನ್ಯೂ ಇಯರ್ ಸೇಲ್' ಎಂಬ ಹೆಸರಿನ ಕೊಡುಗೆಯಾದ ಕಡಿಮೆ ದರ ಟಿಕೆಟ್ ಪಡೆದವರು 2016ರ ಜನವರಿ 15 ರಿಂದ ಏಪ್ರಿಲ್ 12ರ ಒಳಗೆ ಪ್ರಯಾಣಿಸಬಹುದು ಎಂದು ಕಂಪನಿಯು ತಿಳಿಸಿದೆ. ಪ್ರತಿದಿನ 293 ಸ್ಪೈಸ್ ಜೆಟ್ ವಿಮಾನಗಳು ಆರು ಅಂತರಾಷ್ಟ್ರೀಯ ಮಾರ್ಗಗಳು ಸೇರಿದಂತೆ 40 ಪ್ರದೇಶಗಳಿಗೆ ಹಾರಾಡಲಿದೆ.[ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]

ಸ್ಪೈಸ್ ಜೆಟ್ ಟಿಕೆಟ್ ಎಲ್ಲೆಲ್ಲಿ ಪಡೆಯಬಹುದು?

ಸ್ಪೈಸ್ ಜೆಟ್.ಕಾಂ (spicejet.com), ಸ್ಪೈಸ್ ಜೆಟ್ ಮೊಬೈಲ್ ಆಪ್ (spicejet mobile app), ಎಲ್ಲಾ ಪ್ರಯಾಣ ಕಂಪನಿ, ಕಾಲ್ ಸೆಂಟರ್, ಟ್ರಾವೆಲ್ ಏಜೆಂಟ್. ಹೀಗೆ ಬುಕ್ ಮಾಡುವ ಟಿಕೆಟ್ ಗಳು ತೆರಿಗೆ ರಹಿತವಾಗಿರುತ್ತದೆ.[ತುಂಡುಡುಗೆ ತೊಟ್ಟಿದ್ದಕ್ಕೆ ವಿಮಾನಕ್ಕೆ 'ನೋ' ಎಂಟ್ರಿ]

ಸ್ಪೈಸ್ ಜೆಟ್ ಪ್ರಮುಖ ಅಂಶಗಳು?

*ಸ್ಪೈಸ್ ಜೆಟ್ ಟಿಕೆಟ್ ದರ : ರೂ 716 (ತೆರಿಗೆಯೂ ಸೇರಿದಂತೆ)

* ಟಿಕೆಟ್ ಬುಕ್ ಮಾಡುವ ಅವಧಿ : 28th ಡಿಸೆಂಬರ್ ನಿಂದ 31 ಡಿಸೆಂಬರ್- 2015[ಬೆಂಗಳೂರು-ಬ್ಯಾಂಕಾಕ್, ಪ್ರಯಾಣದರ 3,999 ರೂ.]

* ಪ್ರಯಾಣಿಸುವ ಅವಧಿ : ಜನವರಿಯಿಂದ 15 ರಿಂದ ಏಪ್ರಿಲ್ 12th- 2016

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No-frills airline SpiceJet today announced a four-day sale, offering one-way base fares as low as Rs 716 for the journey period between January 15 and April 12 next year for domestic fliers.
Please Wait while comments are loading...