ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ನಿಯಂತ್ರಣ ಕಳೆದುಕೊಂಡ ನಗರಗಳ ಪಟ್ಟಿಯಲ್ಲಿ ನವದೆಹಲಿ!

|
Google Oneindia Kannada News

ನವದೆಹಲಿ, ನವೆಂಬರ್.16: ವಿಶ್ವದ ಪ್ರಮುಖ ನಗರಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಂಕಿ-ಅಂಶಗಳನ್ನು ತುಲನೆ ಮಾಡಿದಾಗ ಭಾರತದ ರಾಜಧಾನಿ ನವದೆಹಲಿ ತೀರಾ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವುದು ಗೊತ್ತಾಗಿದೆ.

ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆ ಕೇಂದ್ರವು ಪ್ರತ್ಯೇಕವಾಗಿ ಪ್ರಮುಖ ನಗರದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳ ಕುರಿತು ಮಾಹಿತಿ ನೀಡಿದೆ. ನವೆಂಬರ್ ತಿಂಗಳ ಆರಂಭದಲ್ಲಿ ನವದೆಹಲಿಯ ಕೊವಿಡ್-19 ಪ್ರಕರಣಗಳ ಸಂಖ್ಯೆಯನ್ನು ನೋಡಿದಾಗ ವಿಶ್ವದಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿರುವ ವಿಶ್ವದ ಅಗ್ರ 10 ನಗರಗಳ ಪಟ್ಟಿಯಲ್ಲಿ ನವದೆಹಲಿ ಕಾಣಿಸಿಕೊಂಡಿದೆ.

Coronavirus in India Live Updates: Live: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,548 ಪ್ರಕರಣ ಪತ್ತೆ
2020ರ ಆಗಸ್ಟ್ ತಿಂಗಳಿನಲ್ಲಿ ಸಾವೊ ಪೌಲ್ ನಲ್ಲಿ ಹಾಗೂ ಏಪ್ರಿಲ್ ನಲ್ಲಿ ನ್ಯೂಯಾರ್ಕ್ ನಗರದಲ್ಲಿ ಕಾಣಿಸಿಕೊಂಡಷ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಇದೀಗ ನವದೆಹಲಿಯಲ್ಲೇ ವರದಿಯಾಗುತ್ತಿವೆ.

New Delhi In Worst Condition Among World Cities In Coronavirus Pandemic

ಕಳೆದ ನವೆಂಬರ್.11ರಂದು ನವದೆಹಲಿಯಲ್ಲಿ 8593 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, ನವೆಂಬರ್.10ರಂದು 7830 ಪ್ರಕರಣಗಳು ದೃಢಪಟ್ಟಿವೆ. ನವೆಂಬರ್.13ರಂದು 7802 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದರೆ, ನವೆಂಬರ್.08ರಂದು 7745 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ.

ಅಮೆರಿಕಾದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣ:
ಕಳೆದ ಸಪ್ಟೆಂಬರ್.21ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಟೆಕ್ಸಾಸ್ ನಲ್ಲಿ ಒಂದೇ ದಿನ 10,000ಕ್ಕಿಂತ ಅಧಿಕ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವರದಿಯಾಗಿತ್ತು. ನವದೆಹಲಿಯಲ್ಲಿ ಪ್ರತಿನಿತ್ಯ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯು ನ್ಯೂಯಾರ್ಕ್ ಮತ್ತು ಸಾವೊ ಪೌಲ್ ನಗರಗಳಲ್ಲಿ ಅಂಕಿ-ಅಂಶಗಳಿಗಿಂತ ಹೆಚ್ಚಾಗಿದೆ. ನ್ಯೂಯಾರ್ಕ್ ನಲ್ಲಿ 24 ಗಂಟೆಗಳಲ್ಲಿ 5291 ಮಂದಿಗೆ ಸೋಂಕು ತಗುಲಿದ್ದು, ಸಾವೊ ಪೌಲ್ ನಲ್ಲಿ 3217 ಜನರಿಗೆ ಮಹಾಮಾರಿ ಅಂಟಿಕೊಂಡಿದೆ. ಆದರೆ ನವದೆಹಲಿಯಲ್ಲಿ ಒಂದೇ ದಿನ 7341 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

English summary
Highest Coronavirus Case: New Delhi In Worst Condition Among World Cities In Coronavirus Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X