• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Coronavirus in India Live Updates: ರಾಜ್ಯದಲ್ಲಿ ಕೊರೊನಾಗೆ 4ನೇ ಬಲಿ, ಬಾಗಲಕೋಟೆಯಲ್ಲಿ ವೃದ್ಧ ಸಾವು

|

ನವದೆಹಲಿ, ಏಪ್ರಿಲ್ 03 : ವಿಶ್ವದಾದ್ಯಂತ ಜನರಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಚೀನಾದಿಂದ ಆರಂಭವಾದ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಲಗ್ಗೆ ಇಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಭಾರತಕ್ಕೆ ಭಾರತವೇ ಸ್ತಬ್ಧಗೊಂಡಿದೆ.

   ದಯವಿಟ್ಟು ಆಕೆಯನ್ನು ಬೆಂಗಳೂರಿಗೆ ಕರೆತನ್ನಿ ಎಂದು ಬೇಡಿಕೊಂಡ ಜಗ್ಗೇಶ್ | Jaggesh | Pregnant Women

   ಮಂಗಳವಾರ ಮಧ್ಯರಾತ್ರಿ 12 ಗಂಟೆಯಿಂದ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವಂತೆ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಮಾರಕ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವುದಕ್ಕೆ ಇರುವುದೊಂದೇ ಮಾರ್ಗ.

   Coronavirus In India Live Updates In Kannada

   ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್ ಡೌನ್ ನಿರ್ಧಾರವೊಂದೇ ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಹೇಗಿದೆ. ವಿಶ್ವದಲ್ಲಿ ಕೊರೊನಾ ವೈರಸ್ ಭೀತಿಯಲ್ಲಿ ನರಳುತ್ತಿರುವ ರಾಷ್ಟ್ರಗಳಲ್ಲಿನ ಚಿತ್ರಣ ಹೇಗಿದೆ. ಇದುವರೆಗೂ ಅದೆಷ್ಟು ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ ಎಂಬುದರ ಕ್ಷಣಕ್ಷಣದ ಮಾಹಿತಿ ನಿಮಗಾಗಿ.

   Newest First Oldest First
   11:56 PM, 3 Apr
   ಲಾಕ್‌ಡೌನ್‌ ನಡುವೆ ಉತ್ತರ ಪ್ರದೇಶದ ಎಲ್ಲ ಬ್ಯಾಂಕ್‌ಗಳು ಮಹಾವೀರ್ ಜಯಂತಿ ಮತ್ತು ಗುಡ್ ಫ್ರೈಡ್ ದಿನವೂ ಕಾರ್ಯ ನಿರ್ವಹಿಸಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
   11:55 PM, 3 Apr
   ದೆಹಲಿ, ನೋಯ್ಡಾ, ಗಾಜಿಯಾಬಾದ್, ಕಾನ್ಪುರ್, ಲಕ್ನೋ, ಪ್ರಯಾಗ್ರಾಜ್, ಪಾಟ್ನಾದಲ್ಲಿ ವೈದ್ಯಕೀಯ ಸೌಲಭ್ಯಗಳಿಗೆ ನೆರವಾಗಲು ಉಬರ್ ಸಂಸ್ಥೆ ಮೊದಲ ಹಂತದಲ್ಲಿ 150 ಕಾರುಗಳ ಉಚಿತ ಸೇವೆ ಒದಗಿಸಲಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
   11:53 PM, 3 Apr
   ಮುಂಬೈನಲ್ಲಿ ಹೊಸದಾಗಿ 43 ಕೊರೊನಾ ಕೇಸ್‌ಗಳು ದಾಖಲಾಗಿದೆ. ಈಗ ಮುಂಬೈ ನಗರದಲ್ಲಿ ಮಾತ್ರ ಸೋಂಕಿತರ ಸಂಖ್ಯೆ 278 ಆಗಿದೆ.
   11:51 PM, 3 Apr
   ಇಟಲಿಯಿಂದ ಭಾರತಕ್ಕೆ ಬಂದಿದ್ದ 217 ಜನರಿಗೆ ಕೊರೊನಾ ನೆಗಿಟಿವ್ ಬಂದಿದೆ. ಮಾರ್ಚ್ 15 ರಂದು ಇಟಲಿಯಿಂದ ಭಾರತಕ್ಕೆ ಬಂದಿದ್ದರು.
   11:45 PM, 3 Apr
   ಅಸ್ಸಾಂನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ: ಆರೋಗ್ಯ ಇಲಾಖೆ
   11:39 PM, 3 Apr
   ಒಡಿಶಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ: ಆರೋಗ್ಯ ಇಲಾಖೆ
   11:33 PM, 3 Apr
   ರಾಜಸ್ಥಾನದಲ್ಲಿ ಇಂದು 46 ಕೊರೊನಾ ಪಾಸಿಟಿವ್ ಕೇಸ್‌ ಗಳು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 179ಕ್ಕೆ ಏರಿದೆ.
   11:24 PM, 3 Apr
   ಪಂಜಾಬ್‌ನಲ್ಲಿ ಮತ್ತೆರಡು ಕೊರೊನಾ ಕೇಸ್ ದೃಢವಾಗಿದೆ. ಈ ಇಬ್ಬರು ಕೂಡ ದೆಹಲಿ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದಿದೆ. ಒಟ್ಟು ಪಂಜಾಬ್‌ನಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿದೆ.
   11:14 PM, 3 Apr
   ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಕರ್ತವ್ಯನಿರತ ಪೊಲೀಸ್ ಮೃತಪಟ್ಟರೆ, ಆತನ ಕುಟುಂಬಕ್ಕೆ ಪರಿಹಾರವಾಗಿ 50 ಲಕ್ಷ ಹಣ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
   11:06 PM, 3 Apr
   75 ವರ್ಷದ ವೃದ್ಧನ ಸಾವಿನಿಂದ ಬಾಗಲಕೋಟೆ ಜನರಲ್ಲಿ ಹೆಚ್ಚಿದ ಆತಂಕ. ಬಾಗಲಕೋಟೆಯಲ್ಲಿ ಮೊದಲ ಕೊರೊನಾ ಕೇಸ್ ಇದಾಗಿದ್ದು, ಕರ್ನಾಟಕದಲ್ಲಿ 125ನೇ ಸೋಂಕಿತ ವ್ಯಕ್ತಿ. ವೃದ್ಧನ ಶವಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.
   10:53 PM, 3 Apr
   ಕೊರೊನಾ ವೈರಸ್ ನೀವು ಯಾವ ಧರ್ಮ ಎಂದು ನೋಡುವುದಿಲ್ಲ. ಸಾಂಕ್ರಮಿಕ ರೋಗದ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ, ತಮ್ಮ ತಮ್ಮಲ್ಲಿ ಕಿತ್ತಾಡಬಾರದು. ವೈದ್ಯರು, ಪೊಲೀಸರು ಸೇರಿದಂತೆ ಕೊರೊನಾ ವಿರುದ್ಧ ಫೈಟ್ ಮಾಡುತ್ತಿರುವವರನ್ನು ಗೌರವಿಸಬೇಕು ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹೇಳಿದ್ದಾರೆ.
   10:32 PM, 3 Apr
   ಕರ್ನಾಟಕದಲ್ಲಿ ಕೊರೊನಾಗೆ ನಾಲ್ಕನೇ ಬಲಿಯಾಗಿದೆ. ಬಾಗಲಕೋಟೆಯಲ್ಲಿ 75 ವರ್ಷದ ವೃದ್ದ ಕೊವಿಡ್‌ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಕಿರಾಣಿ ಅಂಗಡಿಯಲ್ಲಿ ವರ್ತಕನಾಗಿದ್ದ ವ್ಯಕ್ತಿ ಮಾರ್ಚ್ 31 ರಂದು ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮಾಹಿತಿ ನೀಡಿದ್ದಾರೆ.
   10:23 PM, 3 Apr
   ಉಚಿತ ಸಹಾಯವಾಣಿ ಸ್ಥಾಪಿಸಿದ ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಧಾನಿ ಮೋದಿ ಅವರಿಗೆ ಮಣಿಪುರಂ ಮುಖ್ಯಮಂತ್ರಿ ಧನ್ಯವಾದ ತಿಳಿಸಿದ್ದಾರೆ.
   10:11 PM, 3 Apr
   ನಾಳೆಯಿಂದ ಇಂದಿರಾ ಕ್ಯಾಂಟಿನ್‌ನಲ್ಲಿ 5 ರೂಪಾಯಿ ತಿಂಡಿ, 10 ರೂಪಾಯಿಗೆ ಊಟ ನೀಡಲಾಗುವುದು.
   10:01 PM, 3 Apr
   ಪಶ್ಚಿಮ ಬಂಗಾಳದಲ್ಲಿ ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 225 ಜನರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.
   9:53 PM, 3 Apr
   ಲಾಕ್‌ಡೌನ್‌ ಮಧ್ಯೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಾರಣ ಬಾರ್‌ ಮ್ಯಾನೇಜರ್ ಮತ್ತು ವೇಯ್ಟರ್‌ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. 1.31 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
   9:43 PM, 3 Apr
   ಏಪ್ರಿಲ್ 30ರವರೆಗೂ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಇರುವುದಿಲ್ಲ. ಏಪ್ರಿಲ್ 14ರ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
   9:34 PM, 3 Apr
   ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 386ಕ್ಕೆ ಏರಿಕೆ.
   9:24 PM, 3 Apr
   ಉತ್ತರಾಖಂಡದಲ್ಲಿ ಒಂದು 6 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಈಗ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ.
   9:15 PM, 3 Apr
   ಮಹಾರಾಷ್ಟ್ರದಲ್ಲಿ ಇಂದು 67 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಒಟ್ಟು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 490ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 26. ಇಂದು ಒಂದೇ ದಿನ 6 ಜನರು ಮೃತಪಟ್ಟಿದ್ದಾರೆ.
   9:06 PM, 3 Apr
   ಯಶ್ ಚೋಪ್ರಾ ಫೌಂಡೇಶನ್ ವತಿಯಿಂದ 3000 ಸಿನಿಮಾ ದಿನಗೂಲಿ ಕಾರ್ಮಿಕರಿಗೆ ವೈಯಕ್ತಿಕವಾಗಿ ಪ್ರತಿ ಖಾತೆಗೆ 5000 ರೂಪಾಯಿ ವರ್ಗಾವಣೆ ಮಾಡುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
   8:57 PM, 3 Apr
   ಇಸ್ರೇಲ್ ಪ್ರಧಾನಿ ಬೆಂಜಮಿನ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೊರೊನಾ ಹರಡುವಿಕೆಯನ್ನು ಎದುರಿಸುವ ಕುರಿತು ಚರ್ಚಿಸಿದ್ದಾರೆ.
   8:51 PM, 3 Apr
   ಜಮ್ಮು ಮತ್ತು ಕಾಶ್ಮೀರದಲ್ಲಿ 70 ಸೋಂಕಿತರು ಪತ್ತೆಯಾಗಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 2000 ಜನರನ್ನು ಗುರುತಿಸಿ ಎಲ್ಲರನ್ನು ಸುಮಾರು 35 ಕಡೆ ಐಸೋಲೇಶನ್‌ ಗೆ ಒಳಪಡಿಸಲಾಗಿದೆ. ಮುಂದಿನ ದಿನದಲ್ಲಿ ವಾರ್ಡ್, ಪಂಚಾಯಿತಿ, ಬ್ಲಾಕ್ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
   8:47 PM, 3 Apr
   ಮಧ್ಯ ಪ್ರದೇಶದಲ್ಲಿ ವೈದ್ಯರೊಬ್ಬರಿಗೆ ಎರಡನೇ ಬಾರಿಯೂ ಕೊರೊನಾ ಪಾಸಿಟಿವ್ ಬಂದಿದೆ.
   8:38 PM, 3 Apr
   ಗುಜರಾತ್‌ನಲ್ಲಿ 67 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9.
   8:29 PM, 3 Apr
   ತೆಲಂಗಾಣದಲ್ಲಿ ಇಂದು 75 ಪಾಸಿಟಿವ್ ಕೇಸ್ ದಾಖಲಾಗಿದೆ. ಈಗ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 162ಕ್ಕೆ ಏರಿದೆ.
   8:25 PM, 3 Apr
   ಕಳೆದ 24 ಗಂಟೆಯಲ್ಲಿ ಒಟ್ಟು 478 ಕೊವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ವೈಯಕ್ತಿಕವಾಗಿ ದಿನವೊಂದರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡ ದಿನ ಇದಾಗಿದೆ.
   8:23 PM, 3 Apr
   ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2547ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 62ಕ್ಕೆ ಹೋಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
   8:12 PM, 3 Apr
   ಹುಬ್ಬಳ್ಳಿಯಲ್ಲಿ ನಡೆದ ಕಲ್ಲೂ ತೂರಾಟದಲ್ಲಿ ನಾಲ್ವರು ಪೊಲೀಸರಿಗೆ ಹಾಗೂ ಪೊಲೀಸರಿಗೆ ಸಹಕರಿಸಿ ಎಂದು ಮನವೊಲಿಸುತ್ತಿದ್ದ ಕೆಲವರು ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ತಿಳಿಸಿದ್ದಾರೆ.
   8:02 PM, 3 Apr
   ಕೊರೊನಾ ವೈರಸ್‌ ವಿರುದ್ಧದ ಹೋರಾಟ ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು, ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 14 ರಾಜ್ಯಗಳಿಗೆ 17,287.08 ಕೋಟಿ ಅನುದಾನ ಬಿಡುಗಡೆ ಮಾಡಿದೆ.
   READ MORE

   English summary
   Coronavirus outbreak LIVE updates in Kannada: Check out the Live News, latest updates about confirmed and suspected coronavirus cases in india.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X