ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಜೊತೆ ಎಚ್‌1ಎನ್‌1 ಸೋಂಕು: ಟೆಕ್ಕಿಗಳಿಗೆ ಆತಂಕ

|
Google Oneindia Kannada News

ಬೆಂಗಳೂರು, ಮಾರ್ಚ್ 7: ಬೆಂಗಳೂರಲ್ಲಿ ಕೊರೊನಾ ಜೊತೆಗೆ ಎಚ್‌1ಎನ್‌1 ಭೀತಿಯೂ ಆರಂಭವಾಗಿದೆ.

ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಭಯ ಕಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಒಂದೆಡೆ ಕುಳಿತು ಕೆಲಸ ಮಾಡುವ ಕಾರಣ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಈಗಾಗಲೇ ಚೀನಾದಲ್ಲಿ ಕೊರೊನಾ ಸೋಂಕಿಗೆ 3 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌

ಇತರೆ ದೇಶಗಳಿಂದ ಬಂದಿರುವ 24 ಜನರಲ್ಲಿ ಕೋವಿಡ್ 19 ತಗುಲಿದ್ದು, ವಿದೇಶಗಳಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಮೆಜಾನ್‌ನಲ್ಲಿ ಇಬ್ಬರು ಉದ್ಯೋಗಿಗಳಿಗೆ ಎಚ್‌1ಎನ್‌1

ಅಮೆಜಾನ್‌ನಲ್ಲಿ ಇಬ್ಬರು ಉದ್ಯೋಗಿಗಳಿಗೆ ಎಚ್‌1ಎನ್‌1

ಇ-ಕಾಮರ್ಸ್ ಕಂಪನಿಯಾದ ಅಮೆಜಾನ್‌ನ ಬೆಂಗಳೂರು ಕಚೇರಿಯ ಇಬ್ಬರು ಉದ್ಯೋಗಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅನಾರೋಗ್ಯದಿಂದಾಗಿ ಇವರು ಕಚೇರಿಗೆ ಬರುತ್ತಿಲ್ಲ.ಇನ್ನು ಮರ್ಸಿಡಿಸ್ ಬೆಂಜ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾ ಕಂಪನಿಯಲ್ಲೂ ಇದೆ ಪರಿಸ್ಥಿತಿ ಇದೆ ಎಂಬುದು ತಿಳಿದುಬಂದಿದೆ.

ಉದ್ಯೋಗಿಗಳ ಸುರಕ್ಷತೆಗೆ ಮೊದಲ ಆದ್ಯತೆ ಎಂದ ಕಂಪನಿ

ಉದ್ಯೋಗಿಗಳ ಸುರಕ್ಷತೆಗೆ ಮೊದಲ ಆದ್ಯತೆ ಎಂದ ಕಂಪನಿ

ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆ, ಮುಂಜಾಗ್ರತಾ ಕ್ರಮವಾಗಿ ಕಚೇರಿ ಸ್ವಚ್ಛಗೊಳಸಿಲಾಗುತ್ತಿದೆ. ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುತ್ತದೆ. ಹಾಗೆಯೇ ಕೆಲ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ.

ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟೆಕ್ಕಿಗೆ ಕೊರೊನಾ ಸೋಂಕಿಲ್ಲ

ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಟೆಕ್ಕಿಗೆ ಕೊರೊನಾ ಸೋಂಕಿಲ್ಲ

ಬೆಂಗಳೂರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೈದರಾಬಾದ್‌ ಮೂಲದ ಟೆಕ್ಕಿಗೆ ಕೊರೊನಾ ಸೋಂಕಿಲ್ಲ ಎಂಬುದು ದೃಢಪಟ್ಟಿದೆ. ವರು ಇತ್ತೀಚೆಗಷ್ಟೇ ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಹೈದರಾಬಾದ್‌ಗೆ ಬಸ್ಸಿನಲ್ಲಿ ತೆರಳಿದ್ದರು. ಒಂದು ವಾರದ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅದು ಕೊರೊನಾ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು.

ಕೊರೊನಾಕ್ಕೆ ಮೃತಪಟ್ಟವರ ಸಂಖ್ಯೆ 3070ಕ್ಕೆ ಏರಿಕೆ

ಕೊರೊನಾಕ್ಕೆ ಮೃತಪಟ್ಟವರ ಸಂಖ್ಯೆ 3070ಕ್ಕೆ ಏರಿಕೆ

ಕೊರೊನಾ ವೈರಸ್‌ ಸೋಂಕಿಗೆ ಚೀನಾದಲ್ಲಿ ಶುಕ್ರವಾರ 28 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 3070ಕ್ಕೆ ಏರಿಕೆಯಾಗಿದೆ. ಹ್ಯುಬೆದಲ್ಲಿ 74 ಮಂದಿಗೆ ಹೊಸದಾಗಿ ಕೋವಿಡ್ 19 ತಗುಲಿದೆ.

English summary
The H1N1 scare has begun with Corona in Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X