• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಶ್ಲೀಲ ದೃಶ್ಯ ಪ್ರಸಾರ: ನೆಟ್ ಫ್ಲಿಕ್ಸ್, ಅಮೆಜಾನ್ ವಿರುದ್ಧ ದೂರು

|

ನವದೆಹಲಿ, ನವೆಂಬರ್ 14: ಆನ್ ಲೈನ್ ವಿಡಿಯೋ ವೇದಿಕೆಗಳಾದ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಡಿಯೋ ಮುಂತಾದವುಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಯಾವುದೇ ಸೆನ್ಸಾರ್ ಇಲ್ಲದೆ ಪ್ರಸಾರ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿದೆ.

ಅಶ್ಲೀಲ, ಲೈಂಗಿಕ ಕ್ರಿಯೆ, ಅವಾಚ್ಯ ಶಬ್ದ ಬಳಕೆ ದೃಶ್ಯಗಳ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ವಿವರಿಸಿ ದೆಹಲಿ ಹೈಕೋರ್ಟ್, ಬುಧವಾರದಂದು ಸೂಚಿಸಿದೆ.

ರಾಜೀವ್ ಗಾಂಧಿ ಬಗ್ಗೆ ಡೈಲಾಗ್, ನಟ ನವಾಜುದ್ದೀನ್ ವಿರುದ್ಧ ದೂರು

ಜಸ್ಟೀಸ್ ರಾಜೇಂದ್ರ ಮೆನನ್ ಹಾಗೂ ಜಸ್ಟೀಸ್ ವಿ ಕಾಮೇಶ್ವರ್ ರಾವ್ ಅವರಿದ್ದ ನ್ಯಾಯಪೀಠವು ಈ ಅರ್ಜಿ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿದೆ.

ಜಸ್ಟೀಸ್ ಫಾರ್ ರೈಟ್ಸ್ ಹೆಸರಿನ ಸರ್ಕಾರೇತರ ಸಂಸ್ಥೆಯ ಪರ ವಕೀಲ ಹರ್ಪೀತ್ ಎಸ್ ಹೋರಾ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆನ್ ಲೈನ್ ವಿಡಿಯೋ ವೇದಿಕೆಗಳಲ್ಲಿನ ಅಶ್ಲೀಲ ಧಾರಾವಾಹಿ, ಸಿನಿಮಾ ಸರಣಿಗಳ ಮೇಲೆ ಯಾವುದೇ ಕಡಿವಾಣ ಹಾಕಲು ಆಗುತ್ತಿಲ್ಲ.ಸೆನ್ಸಾರ್ ಇಲ್ಲದೆ, ನಗ್ನ ದೃಶ್ಯ, ಕೆಟ್ಟ ಶಬ್ದ ಬಳಕೆ ಮಾಡಲಾಗುತ್ತಿದೆ.

ಇಲ್ಲಿ ಸಿಗುವ ದೃಶ್ಯಗಳು ಇದು ಪೋರ್ನೋಗ್ರಾಫಿಯನ್ನು ಬೆಳೆಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚಂದಾದಾರರನ್ನು ಹೊಂದಿ ಲಾಭ ಪಡೆಯುವುದೇ ಇವರ ಉದ್ದೇಶವಾಗಿದೆ. ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಉಲ್ಲಂಘನೆ ಎಂದು ದೂರಿನಲ್ಲಿ ಹೇಳಲಾಗಿದೆ.

English summary
The Delhi High Court on Wednesday sought the Centre's response on a plea for removal of vulgar and sexually explicit content from online platforms like Netflix, Amazon Prime Video and others. A bench of Chief Justice Rajendra Menon and Justice V. Kameswar Rao listed the matter for further hearing on February 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X