Get Updates
Get notified of breaking news, exclusive insights, and must-see stories!

ನಿಮ್ಮ ಕ್ಷೇತ್ರದ ಶಾಸಕ, ಸಂಸದರ ಕಾರ್ಯಕ್ಕೆ ಅಂಕ ನೀಡಲೊಂದು ಆ್ಯಪ್

ನವದೆಹಲಿ, ಆಗಸ್ಟ್‌ 24: ನಿಮ್ಮ ಕ್ಷೇತ್ರದ ಶಾಸಕ ಅಥವಾ ಸಂಸದನ ಕಾರ್ಯವನ್ನು ಮೌಲ್ಯಮಾಪನ ಮಾಡಲು ಆಪ್‌ ಒಂದು ಬಂದಿದೆ. ಅದುವೇ 'ನೇತಾ' (Neta app) ಈ ಆ್ಯಪ್ ಮೂಲಕ ನಿಮ್ಮ ಕ್ಷೇತ್ರದ ಶಾಸಕ ಅಥವಾ ಸಂಸದನಿಗೆ ಅಂಕಗಳನ್ನೂ ನೀಡಬಹುದು.

ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದೆಹಲಿಯಲ್ಲಿ 'ನೇತಾ ಆ್ಯಪ್' ಬಿಡುಗಡೆ ಮಾಡಿದ್ದಾರೆ. ಆಪ್‌ನಲ್ಲಿ ಶಾಸಕ, ಸಂಸದರಿಗೆ ಮತದಾರರು ರೇಟಿಂಗ್ ನೀಡುವ ಜೊತೆಗೆ ಅವರ ಕುರಿತು ಟೀಕೆ-ಟಿಪ್ಪಣಿಗಳನ್ನೂ ಬರೆಯಬಹುದು.

ಈ ಆಪ್‌ನಲ್ಲಿ ಬೇರೆ ಬೇರೆ ಕ್ಷೇತ್ರದ ಶಾಸಕರಿಗೆ ಅಥವಾ ಸಂಸದರಿಗೆ ಸಿಕ್ಕಿರುವ ರೇಟಿಂಗ್ ಹಾಗೂ ಅಂಕಗಳನ್ನು ಎಲ್ಲರೂ ನೋಡಬಹುದಾಗಿದೆ. ಆ ಮೂಲಕ ಒಟ್ಟು ದೇಶದ ಮತದಾರನ ಭಾವನೆ ತಿಳಿಯಲು ಸಹ ಸಹಕಾರಿಯಾಗಿದೆ.

27 ವರ್ಷದ ಪ್ರಥಮ್ ಅವರಿಂದ ನಿರ್ಮಾಣ

27 ವರ್ಷದ ಪ್ರಥಮ್ ಅವರಿಂದ ನಿರ್ಮಾಣ

27 ವರ್ಷದ ಪ್ರಥಮ್ ಮಿತ್ತಲ್ ಎಂಬುವರು ಈ ಆ್ಯಪ್ ಅನ್ನು ನಿರ್ಮಿಸಿದ್ದು, ಪ್ರಣವ್ ಮುಖರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆಪ್ ಬಿಡುಗಡೆ ಮಾಡಿದರು.

ಆಧಾರ್ ಸಂಖ್ಯೆ ಮೂಲಕ ರಿಜಿಸ್ಟರ್

ಆಧಾರ್ ಸಂಖ್ಯೆ ಮೂಲಕ ರಿಜಿಸ್ಟರ್

ಒನ್‌ಟೈಮ್ ಪಾಸ್ವರ್ಡ್‌ ಮತ್ತು ಆಧಾರ್ ಸಂಖ್ಯೆ ಮೂಲಕ ಬಳಕೆದಾರರನ್ನು ಆ್ಯಪ್ ಗುರುತಿಸುತ್ತಿದೆ. ರಾಜಕಾರಣಿಗಳಿಗೆ ಅಂಕ ಕೊಡುತ್ತಿರುವುದು ಮತದಾರನೇ ಎಂದು ಗುರುತಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಬಾಟ್‌ (ರೋಬೋಟ್‌)ಗಳನ್ನು ಉಪಯೋಗಿಸಿ ಉತ್ತಮ ಅಂಕಗಳನ್ನು ಕೊಟ್ಟುಕೊಳ್ಳುವ ಸಾಧ್ಯತೆ ಇರುವ ಕಾರಣ ಹೀಗೆ ಭದ್ರತೆ ಒದಗಿಸಲಾಗಿದೆ.

ಲೊಕೆಶನ್ ಅನುಸರಿಸಿ ಕ್ಷೇತ್ರದ ಗುರುತು

ಲೊಕೆಶನ್ ಅನುಸರಿಸಿ ಕ್ಷೇತ್ರದ ಗುರುತು

ಈ ಆ್ಯಪ್ ಬಳಕೆದಾರನ ಲೊಕೆಶನ್ ಅನುಸರಿಸಿ ಕ್ಷೇತ್ರದ ಶಾಸಕ ಹಾಗೂ ಸಂಸದನ ಚಿತ್ರವನ್ನು ತೋರಿಸುತ್ತದೆ. ಬಳಕೆದಾರನು ತನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯೂ ಆಪ್‌ನಲ್ಲಿದೆ.

ಆಡ್ರಾಯ್ಡ್‌ನಲ್ಲಿ ಕಾರ್ಯ ಮಾಡುತ್ತೆ

ಆಡ್ರಾಯ್ಡ್‌ನಲ್ಲಿ ಕಾರ್ಯ ಮಾಡುತ್ತೆ

ಆ್ಯಪ್ ಅನ್ನು ಈಗಾಗಲೇ ಲಕ್ಷಾಂತರ ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಆಪ್ ಆಂಡ್ರಾಯ್ಡ್‌ ಮತ್ತು ಐಒಎಸ್‌ ಮೊಬೈಲ್‌ಗಳಲ್ಲಿ ಬಳಸಬಹುದಾಗಿದೆ. ಹೆಸರು, ಆಧಾರ್ ಸಂಖ್ಯೆ ನೀಡಿ ರಿಜಿಸ್ಟರ್‌ ಮಾಡಿಕೊಂಡು ಮತ ಚಲಾಯಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+