ಮೋದಿ ಪ್ರಧಾನಿಯಾದ್ರೆ ಈ 3 ಸರ್ಕಾರಗಳಿಗೆ ತೂಗುಕತ್ತಿ

ನವದೆಹಲಿ, ಏ. 21: ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿ ನಿರೀಕ್ಷೆಯಂತೆ ನರೇಂದ್ರ ಮೋದಿ ಅವರೇನಾದರೂ ಪ್ರಧಾನಿಯಾದರೆ ಮೂರು ರಾಜ್ಯಗಳು ಸರಕಾರಗಳ ನೆತ್ತಿಯ ಮೇಲೆ ಈಗಾಗಲೇ ನೇತಾಡುತ್ತಿರುವ ತೂಗುಕತ್ತಿ ಯಾವಾಗ ಬೇಕಾದರೂ ಕಳಚಿ ಬೀಳಬಹುದು.

ಬಿಹಾರ, ಜಾರ್ಖಂಡ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿಯೇತರ ಸರಕಾರವಿದೆ. ಪಕ್ಷವು ದ್ವೇಷ ರಾಜಕಾರಣದಲ್ಲಿ ತೊಡಗುವುದು ದೂರದ ಮಾತಾದರೂ ಬಿಜೆಪಿ ನೇತೃತ್ವದ ಸರಕಾರಗಳನ್ನು ಸ್ಥಾಪಿಸಬೇಕೆಂಬ ಹಪಾಹಪಿಗೆ ಬಿದ್ದರೆ ಈ ಮೂರೂ ರಾಜ್ಯಗಳ ಜತೆಗೆ ದಿಲ್ಲಿಯಲ್ಲೂ ಬಿಜೆಪಿಯುದ್ದೇ ದರ್ಬಾರು ಆಗಬಹುದು.

Lok Sabha polls 2014 - NDA government at the Centre next month may spell trouble for 3 states governments
ದಿಲ್ಲಿಯಲ್ಲಿ ಪಸ್ತುತ ರಾಷ್ಟ್ರಪತಿ ಆಡಳಿತವಿದೆ. ಒಂದು ವೇಳೆ ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತ ಚಿಕ್ಕಾಣಿ ಹಿಡಿದರೆ, ಆನಂತರ ಹೊಸದಾಗಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಸುಲಲಿತವಾಗಿ ಹೆಚ್ಚು ಸ್ಥಾನಗಳನ್ನು ಗಳಿಸಿ, ಅಧಿಕಾರ ಚುಕ್ಕಾಣೀ ಹಿಡಿಯಬಹುದು.

ಇನ್ನು ಕೆಲವು ರಾಜ್ಯಗಳಲ್ಲಿ ಲೋಕಸಭಾ ಫಲಿತಾಂಶ ನೋಡಿಕೊಂಡು ಸರಕಾರಗಳು ತನ್ನಷ್ಟಕ್ಕೇ ತಾನೇ ಉರುಳಬಹುದು ಎಂದು ಖುದ್ದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರೇ ಕಳೆದ ವಾರ ಹೇಳಿದ್ದಾರೆ. ಪ್ರಜಾಪ್ರಭುತ್ವ ತಳಹದಿಯಲ್ಲಿ ಚುನಾಯಿತಗೊಂಡ ಸರಕಾರವನ್ನು ಬೀಳೀಸುವ ಕೆಲಸಕ್ಕೆ ನಾವು ಕೈಹಾಕುವುದಿಲ್ಲ. ಆದರೆ ಮುಂದೆ ಪರಿಸ್ಥಿತಿ ಹೇಗೆ ಸಾಗುತ್ತದೋ ಗೊತ್ತಿಲ್ಲ. ಒಳಜಗಳದಿಂದ ಸರಕಾರಗಳು ತಂತಾನೇ ಅಲ್ಪಮತಕ್ಕೆ ಕುಸಿಯಬಹುದು ಎಂದೂ ಅವರು ಎಚ್ಚರಿಸಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಪರಿಸ್ಥಿತಿಯನ್ನು ಅವಲಕೋಕಿಸಿದರೆ ಜೆಡಿಯು ಅದರಲ್ಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರಕಾರವನ್ನು ಉರುಳಿಸಬಹುದು. 17 ವರ್ಷಗಳ ಕಾಲ ಬಿಜೆಪಿ ನೇತೃತ್ವದ NDA ಜತೆ ಗುರುತಿಸಿಕೊಂಡಿದ್ದ JD(U) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿದ್ದುಕೊಂಡೇ ಅಧಿಕಾರಕ್ಕೆ ಬಂತಾದರೂ ಅಧಿಕಾರದ ಹೊಸ್ತಿಲಲ್ಲಿ ಬಿಜೆಪಿ ಕೈಬಿಟ್ಟು, ಅಧಿಕಾರದ ಗದ್ದುಗೆಗೇರಿತು.

ಇನ್ನು ಜಾರ್ಖಂಡಿನಲ್ಲಿ ಹಾಲಿ ಸರಕಾರ ತೂಗುಯ್ಯಾಲೆಯಲ್ಲಿದೆ. ಜೆಎಂಎಂ ನಾಯಕ ಶಿಬು ಸೊರೇನ್ ಕಾಲಾಂತರದಲ್ಲಿ ಬಿಜೆಪಿಗೆ ಕೈಕೊಟ್ಟು, ಕೇಂದ್ರದಲ್ಲಿ ಕೈ ಪಕ್ಷದ ಶಾಮೀಲಾಗಿದ್ದು ಬಿಜೆಪಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. 81 ಶಾಸಕ ಬಲದ ಜಾರ್ಖಂಡಿನಲ್ಲಿ ಬಿಜೆಪಿ ಮತ್ತು ಜೆಎಂಎಂ ತಲಾ 18 ಸ್ಥಾನಗಳನ್ನು ಹೊಂದಿದ್ದರೆ ಕಾಂಗ್ರೆಸ್ಸಿನ 14 ಶಾಸಕರು ಅಂತಿಮವಾಗಿ ಜೆಎಂಎಂಹೆ ಜೈ ಜೈ ಎಂದಿದ್ದಾರೆ. ಜೆಎಂಎಂ- ಕಾಂಗ್ರೆಸ್ ನೇತೃತ್ವದ ಹಾಲಿ ಸರಕಾರಕ್ಕೆ 11 ಶಾಸಕರ ಕೊರತೆ ಕಾಡುತ್ತಲೇ ಇದೆ. ಹಾಗಾಗಿ ದಿಲ್ಲಿ ಗದ್ದುಗೆಗೆ ಬಿಜೆಪಿ ಸರಕಾರ ಬಂದರೆ ಜಾರ್ಖಂಡ್ ಸರಕಾರ ಉರುಳುವ ಸಾಧ್ಯತೆ ಹೆಚ್ಚು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ.

ಇನ್ನು ಬೆಟ್ಟ ರಾಜ್ಯವಾದ ಉತ್ತರಾಖಂಡ ಸರಕಾರದ ಮೇಲೂ ಬಿಜೆಪಿ ಕಣ್ಣುಬೀಳಬಹುದು. 2012ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 33 ಶಾಸಕರನ್ನು ಹೊಂದಿದ್ದರೆ ಬಿಜೆಪಿ 30 ಎಂಎಲ್ಎಗಳನ್ನು ಹೊಂದಿದೆ. ಕೇಂದ್ರದಲ್ಲಿ ಹೊಸ ಸರಕಾರ ಬರುತ್ತಿದ್ದಂತೆ ಕೆಲವು ರಾಜ್ಯಗಳಲ್ಲಾದರೂ ಹೊಸ ರಾಜ್ಯಪಾಲರುಗಳ ನೇಮಕವಾಗುತ್ತದೆ. ಅದು ಈ ರಾಜ್ಯಗಳಲ್ಲಿ ನೂತನ ಸರಕಾರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಿಜೆಪಿಗೆ ಹಿತಕಾರಿಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+