ಎನ್ ಡಿ ತಿವಾರಿ ಪುತ್ರನ ನಿಗೂಢ ಸಾವು, ರೋಹಿತ್ ಪತ್ನಿಯ ಬಂಧನ

ನವದೆಹಲಿ, ಏಪ್ರಿಲ್ 24: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿತ್ ಅವರ ಪತ್ನಿ ಅಪೂರ್ವ ತಿವಾರಿ ಅವರನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

ಏಪ್ರಿಲ್ 16 ರಂದು ಮಂಗಳವಾರ ರೋಹಿತ್(40) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆದರೆ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅದು ಅಸಹಜ ಸಾವು ಎಂಬುದು ದೃಢವಾಗಿತ್ತು.

ND Tiwaris son Rohits death case: Wife Apoorva Tiwari arrested

ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲಾಗಿರಬಹುದು ಎಂದು ಪೊಲೀಸ್ ಮೂಲಗಳು ಅನುಮಾನ ವ್ಯಕ್ತಪಡಿಸಿದ್ದರು.

ಏಪ್ರಿಲ್ 16 ರಂದು ಸಂಜೆ ರೋಹಿತ್ ಅವರ ಮೂಗಿನಲ್ಲಿ ರಕ್ತಸೋರುತ್ತಿದ್ದರಿಂದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆಯೇ ಅವರು ಮೃತರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+