ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಕೋರ್ಟ್ ನಿಂದ ವಿಜಯ್ ಮಲ್ಯಗೆ ಜಾಮೀನುರಹಿತ ವಾರಂಟ್

ಹಲವು ಬಾರಿ ಜ್ಞಾಪನಾ ಆದೇಶಗಳನ್ನು ಕಳಿಸಿದರೂ ವಿಜಯ್ ಮಲ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಇದನ್ನು ಗಮನಿಸಿದರೆ ಅವರಿಗೆ ಕೋರ್ಟ್ ಬಗ್ಗೆ ಅಲ್ಪ ಗೌರವವೂ ಇದ್ದಂತಿಲ್ಲ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ನವೆಂಬರ್ 4: ಮದ್ಯ ಉದ್ಯಮಿ ವಿಜಯ್ ಮಲ್ಯಗೆ ದೆಹಲಿ ಪಟಿಯಾಲ ಹೌಸ್ ನಿಂದ ಮತ್ತೊಂದು ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ. ಮಲ್ಯ ಅವರನ್ನು ಕಟುವಾದ ಶಬ್ದಗಳಿಂದ ಟೀಕಿಸಿದ ಕೋರ್ಟ್, ಚೆಕ್ ಬೌನ್ಸ್ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿತ್ತು.

ಉದ್ಯಮಿ ವಿಜಯ ಮಲ್ಯಗೆ ವಾಪಸಾಗುವ ಉದ್ದೇಶವೇ ಇದ್ದಂತಿಲ್ಲ ಎಂದು ಕೋರ್ಟ್ ಹೇಳಿದೆ. ಹಲವು ಬಾರಿ ಈ ಬಗ್ಗೆ ಜ್ಞಾಪನಾ ಆದೇಶಗಳನ್ನು ಕಳಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಇದನ್ನು ಗಮನಿಸಿದರೆ ಅವರಿಗೆ ಕೋರ್ಟ್ ಬಗ್ಗೆ ಅಲ್ಪ ಗೌರವವೂ ಇದ್ದಂತಿಲ್ಲ ಎಂದು ಕೋರ್ಟ್ ಹೇಳಿದೆ.[ವಿಜಯ್ ಮಲ್ಯ ಅವರ ಆಪ್ತ ರಘುನಾಥನ್ ಗೆ ಜೈಲು ಶಿಕ್ಷೆ]

Vijay Mallya

ಸಮನ್ಸ್ ಕಳಿಸಿದ ನಂತರವೂ ಅದಕ್ಕೆ ಮಲ್ಯ ಸ್ಪಂದಿಸಿಲ್ಲ. ಆದ್ದರಿಂದ ಜಾಮೀನುರಹಿತ ವಾರಂಟ್ ನೀಡಲಾಗಿದೆ ಎಂದು ತಿಳಿಸಿತು. ಮುಂಬೈ ಕೋರ್ಟ್ ಸಹ ಚೆಕ್ ಬೌನ್ಸ್ ಪ್ರಕರಣದಲ್ಲಿ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.[ಇಂದಿಗೂ ಯುಬಿ ಗ್ರೂಪ್ ಗೆ ವಿಜಯ್ ಮಲ್ಯರೇ ಬಾಸ್!]

ಒಂದು ತಿಂಗಳ ಒಳಗಾಗಿ ವಿಜಯ ಮಲ್ಯಗೆ ಇರುವ ಸಂಫೂರ್ಣ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸುವಂತೆ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಮುಂದಿನ ವಿಚಾರಣೆ ನವೆಂಬರ್ 24ರಂದು ನಡೆಯಲಿದೆ ಎಂದು ಕೂಡ ತಿಳಿಸಿತ್ತು. ವಿಜಯ ಮಲ್ಯರಿಂದ ಬಾಕಿ ಇರುವ ಒಂಬತ್ತು ಸಾವಿರ ಕೋಟಿ ವಸೂಲಿಗೆ ಸ್ಟೇಟ್ ಬ್ಯಾಂಕ್ ನೇತೃತ್ವದಲ್ಲಿ ಬ್ಯಾಂಕ್ ಗಳ ಸಮೂಹ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ಇದಾಗಿತ್ತು.

English summary
Vijay Mallya has been served with yet another non-bailable warrant. While coming down on the liquor baron heavily, a Delhi court issued a non-bailable warrant against him. The court was hearing a case under the negotiable instruments act (Cheque bounce).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X