• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮದು ಪ್ರೀತಿಯ ಚುನಾವಣೆಯೇ ಹೊರತು ದ್ವೇಷದ ಪೈಪೋಟಿಯಲ್ಲ: ರಾಹುಲ್

|

ನವದೆಹಲಿ, ಮೇ 12: ನಾವು ಪ್ರೀತಿಯಿಂದ ಚುನಾವಣೆಯನ್ನು ಎದುರಿಸಿದ್ದೇವೆ ಹೊರತು ದ್ವೇಷದ ಪೈಪೋಟಿಯಿಂದಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತದಾನ ಮಾಡಿ ಬಳಿಕ ಮಾತನಾಡಿದ ಅವರು, ನೋಟು ಅಮಾನ್ಯೀಕರಣ, ರೈತರ ಸಮಸ್ಯೆಗಳು, ಗಬ್ಬರ್​ ಸಿಂಗ್​ ಟ್ಯಾಕ್ಸ್​ ಮತ್ತು ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿನ ಅವ್ಯವಹಾರವನ್ನು ಲೋಕಸಭೆ ಚುನಾವಣೆಯ ವಿಷಯವನ್ನಾಗಿಸಿಕೊಂಡು ಮತಯಾಚಿಸಿದೆವು.

ನನ್ನ ನಾಲ್ಕು ಪ್ರಶ್ನೆಗೆ ಮೋದಿ ಈವರೆಗೆ ಉತ್ತರಿಸಿಲ್ಲ: ರಾಹುಲ್

ಆದರೆ, ಇದಾವುದಕ್ಕೂ ಸೂಕ್ತ ಉತ್ತರ ನೀಡದ ಪ್ರಧಾನಿ ನರೇಂದ್ರ ಮೋದಿ ಕೇವಲ ನಮ್ಮ ಮೇಲೆ ದ್ವೇಷ ಕಾರುವ ಮೂಲಕ ಪೈಪೋಟಿ ನೀಡಲು ಯತ್ನಿಸಿದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ದೆಹಲಿಯ ಔರಂಗಜೇಬ್​ ಲೇನ್​ನಲ್ಲಿರುವ ಎನ್​ಪಿ ಸೀನಿಯರ್​ ಸೆಕೆಂಡರಿ ಸ್ಕೂಲ್​ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜನತೆಯೇ ನಿರ್ಣಾಯಕರು, ಅವರ ತೀರ್ಪೇ ಅಂತಿಮ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಜನರು ನೀಡುವ ತೀರ್ಪಿಗೆ ಬೆಲೆ ಕೊಡುತ್ತೇವೆ ಎಂದು ತಿಳಿಸಿದರು.

English summary
Congress president Rahul Gandhi on Sunday attacked Prime Minister Narendra Modi and said the PM “used hatred in the campaign and we used love and I am confident love will win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X