ಆರ್ಎಸ್ಎಸ್ ಮುಂದೆ ಮಂಡಿಯೂರಿದ ಬಿಜೆಪಿ : ದಿಗ್ವಿಜಯ್

ಶನಿವಾರ ನವದೆಹಲಿಯಲ್ಲಿ ಮತನಾಡಿದ ದಿಗ್ವಿಜಯ್ ಸಿಂಗ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 2014ರ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಆಯ್ಕೆ ಮಾಡಿರುವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರ್ಎಸ್ಎಸ್ ಬಿಜೆಪಿಯನ್ನು ಬೆದರಿಸಿ ಮೋದಿ ಅವರಿಗೆ ಪ್ರಧಾನಿ ಪಟ್ಟ ಕೊಡಿಸಿದೆ ಎಂದು ಆರೋಪಿಸಿದ್ದಾರೆ. ಸಂಘ ಪರಿವಾರದ ಒತ್ತಡಕ್ಕೆ ಮಣಿದ ಬಿಜೆಪಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಆಗದೆ, ಮೋದಿ ಹೆಸರು ಘೋಷಣೆ ಮಾಡಿದೆ ಎಂದು ಸಿಂಗ್ ದೂರಿದರು.
ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಎಲ್.ಕೆ.ಅಡ್ವಾಣಿ ಅವರತಂಹ ನಾಯಕರನ್ನು, ಕಡೆಗಣಿಸಿ ಬಿಜೆಪಿ ಅಧ್ಯಕ್ಷರು ಮೋದಿ ಹೆಸರನ್ನು ಪ್ರಧಾನಿ ಸ್ಥಾನಕ್ಕೆ ಘೋಷಣೆ ಮಾಡಿದ್ದಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳಲಾಗದ ಬಿಜೆಪಿ ಹಲ್ಲು ಕಿತ್ತಹಾವು ಎಂದು ದಿಗ್ವಿಜಯ್ ವ್ಯಂಗ್ಯವಾಡಿದ್ದಾರೆ.
ಆರ್ಎಸ್ಎಸ್ ಮತ್ತು ಬಾಬಾ ರಾಮ್ ದೇವ್ ಅವರ ಮುಂದೆ ಮಂಡಿಯೂರಿ ಕುಳಿತ ಬಿಜೆಪಿ ಮೋದಿಯನ್ನು ಪ್ರಧಾನಿಯೆಂದು ಘೋಷಿಸಿದೆ. ಸಾಂಸ್ಕೃತಿಕ ಸಂಘಟನೆ ಹೆಸರಿನಲ್ಲಿ ಇಷ್ಟೆಲ್ಲಾ ರಾಜಕೀಯ ಮಾಡುವ ಆರ್ಎಸ್ಎಸ್ ಅನ್ನು ಎಂತಹ ಸಂಘಟನೆ ಎಂದು ಪರಿಗಣಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಗೂ ತಿಳಿಯದಂತೆ, ರಾಜನಾಥ್ ಸಿಂಗ್ ಕುಠಿಲೋಪಾಯದ ಮೂಲಕ ಪ್ರಧಾನಿ ಹುದ್ದೆಗೆ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಪಕ್ಷವನ್ನು ಒಗ್ಗಟ್ಟು ಮುರಿದಿರುವ ಇವರು, ದೇಶವನ್ನು ಒಗ್ಗೂಡಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ವಾಗ್ದಾಳಿ ಆರಂಭಿಸಿದೆ. ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಬರುವ ತನಕ ಮಾತಿನ ಮಲ್ಲಯುದ್ಧ ಉಭಯ ಪಕ್ಷಗಳ ನಾಯಕರ ನಡುವೆ ಮುಂದುವರೆಯಲಿದೆ.
ಟ್ವೀಟರ್ ನಲ್ಲಿ ಮೋದಿ ವಿರುದ್ಧ ವಾಗ್ದಾಳಿ
BJP succumbs to threats of RSS and Ramdev and declare Modi as BJP's PM candidate. Do we still call RSS as a Cultural Organisation?
— digvijaya singh (@digvijaya_28) September 14, 2013












Click it and Unblock the Notifications