ಇದು ಅಧಿಕೃತ: ಮೇ 26ಕ್ಕೆ ನರೇಂದ್ರ ಮೋದಿ ಪಟ್ಟಾಭಿಷೇಕ

ನವದೆಹಲಿ, ಮೇ 20: ಸಂಸತ್ ಭವನದ ಮೆಟ್ಟಿಲುಗಳಿಗೆ ಹಣೆಯೊತ್ತಿ ಒಳಪ್ರವೇಶಿಸಿದ ನರೇಂದ್ರ ಮೋದಿಯನ್ನು NDA ಸಂಸದೀಯ ಮಂಡಳಿಯು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದ ಬಳಿಕ ಸೀದಾ ರಾಷ್ಟ್ರಪತಿ ಭವನಕ್ಕೆ ತೆರಳಿ ಸರಕಾರ ರಚಿಸುವ ಹಕ್ಕು ಮಂಡನೆ ಮಾಡಿದ ನರೇಂದ್ರ ಮೋದಿ ಇದೀಗ ಮೇ 26ರಂದು ಸೋಮವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿದುಬಂದಿದೆ.

Narendra Modi to take oath on May 26 as Narendra Modi Prime Minister

ಮೇ 26ರಂದು ಮೋದಿ ಪದಗ್ರಹಣ ಮಾಡುವುದರ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಇದೀಗತಾನೆ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಹಿಂದೆ, ಮೇ 24ರಂದು ಶನಿವಾರ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿದುಬಂದಿತ್ತು. ಸುಮಾರು ಮೂರು ಸಾವಿರ ಮಂದಿ ಗಣ್ಯರೆದುರು ಮೋದಿ ಮತ್ತು ಅವರ ಸಚಿವ ಸಂಪುಟವು ಮುಂದಿನ ಸೋಮವಾರ ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದೆ.

ಹಿಂದೂ ಪಂಚಾಂಗದ ಪ್ರಕಾರ ಮೇ 26 ತ್ರಯೋದಶಿ ದಿನವಾಗಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 337 ಸಂಸದರ ಬಲವನ್ನು ಹೊಂದಿರುವ ನರೇಂದ್ರ ಮೋದಿ ಅವರಿಗೆ ಪ್ರಧಾನ ಮಂತ್ರಿ ಅಧಿಕಾರ ಗೌಪ್ಯತೆ ಮತ್ತು ಪ್ರಮಾಣ ವಚನ ಬೋಧಿಸಲಿದ್ದಾರೆ. (ಮೋದಿಗೆ ದಸರೀಘಟ್ಟ ಚೌಡೇಶ್ವರಿ ಅಮ್ಮನ ಅಪ್ಪಣೆಯಾಗಿತ್ತೇ?)

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪತ್ರ ನೀಡಿದ್ದು, ಅದರಲ್ಲಿ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದ್ದಾರೆ.

Narendra Modi to take oath on May 26 as Narendra Modi Prime Minister,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+