ಸ್ವಚ್ಛತೆಯೇ ಮಹಾತ್ಮಾ ಗಾಂಧಿಗೆ ನೀಡುವ ನಿಜವಾದ ಗೌರವ: ಮೋದಿ

ನವದೆಹಲಿ, ಅಕ್ಟೋಬರ್ 02: ನೈರ್ಮಲ್ಯವೇ ನಾವು ಭಾರತೀಯರು ಗಾಂಧೀಜಿಗೆ ಕೊಡುವ ನಿಜವಾದ ಗೌರವ, ಗಾಂಧಿ ಅವರಿಗೆ ಶ್ರದ್ಧಾಂಜಲಿ ಜೊತೆಗೆ ಕಾರ್ಯಾಂಜಲಿಯನ್ನೂ ನೀಡಬೇಕಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ದೆಹಲಿಯಲ್ಲಿ ಆಯೋಜಿಸಿದ್ದ ಮಹಾತ್ಮಾಗಾಂಧಿ ಅಂತರರಾಷ್ಟ್ರೀಯ ಸ್ವಚ್ಛತಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸ್ವಚ್ಛತೆ ಕಾಪಾಡಲು ನಾಲ್ಕು 'p' ಗಳ ಸೂತ್ರ ಮುಂದಿಟ್ಟ ಅವರು, 'ರಾಜಕೀಯ ಇಚ್ಛಾಶಕ್ತಿ, ಸಾರ್ವಜನಿಕರ ಭಾಗವಹಿಸುವಿಕೆ, ಖಾಸಗಿ ಸಹಭಾಗಿತ್ವ, ಸಾರ್ವಜನಿಕ ಧನಸಹಾಯ ಇವುಗಳ ನೆರವಿನಿಂದ ನಮ್ಮ ದೇಶ ಸ್ವಚ್ಛ ದೇಶವಾಗುತ್ತದೆ ಎಂದು ಮೋದಿ ಅವರು ಹೇಳಿದರು.

Narendra Modi talks at Mahatma Gandhi International Sanitation Convention

ಸ್ವಚ್ಛತೆಯು ಮಾನವೀಯತೆಗೆ ಸಂಬಂಧಿಸಿದ ವಿಷಯ. ಈ ಮಹತ್ವದ ಉದ್ದೇಶಕ್ಕಾಗಿ ಇಷ್ಟೋಂದು ರಾಷ್ಟ್ರಗಳು ಒಟ್ಟಾಗಿರುವುದು ಬಹಳ ಮಹತ್ತರವಾದುದು. ಇಂದಿನ ಈ ಕಾರ್ಯಕ್ರಮವು ಸ್ವಚ್ಛತೆ ಎಡೆಗೆ ಒಂದು ಮೈಲಿಗಲ್ಲು ಆಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Narendra Modi talks at Mahatma Gandhi International Sanitation Convention

ಸ್ವಚ್ಛತೆಗಾಗಿ ಸೇವೆ ಮಾಡಿದ ರಾಷ್ಟ್ರದ ಹಲವು ವ್ಯಕ್ತಿಗಳಿಗೆ ಮೋದಿ ಅವರು ಸನ್ಮಾನ ಮಾಡಿದರು. ಸೇವಾಕರ್ತರಾದ 'ಅಮ್ಮಾ' ಅವರು ಕಾರ್ಯಕ್ರಮದ ಆಯೋಜನೆ ಮಾಡಿದ್ದರು. ಮೋದಿ ಅವರು ಅಮ್ಮಾ ಅವರ ಕಾರ್ಯಗಳನ್ನು ಶ್ಲಾಘಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+