ಮೋದಿ ದೊಡ್ದ ಸವಾಲು, ಚಿದು ಹೇಳಿಕೆಗೆ ಕಾಂಗ್ರೆಸ್ ತಬ್ಬಿಬ್ಬು

ನವದೆಹಲಿ, ನ 10: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಶಾಕ್ ಆಗುವ ಹೇಳಿಕೆಯೊಂದು ಪಕ್ಷದ ಮುಖಂಡರೊಬ್ಬರಿಂದಲೇ ಬಂದಿದೆ. (ಮೋದಿ ವಿರುದ್ದ ಆಯೋಗಕ್ಕೆ ದೂರು)

ಕೇಂದ್ರದ ಪ್ರಭಾವಿ ಕ್ಯಾಬಿನೆಟ್ ಸಚಿವರೊಬ್ಬರು ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಸವಾಲು ಎಂದು ಒಪ್ಪಿಕೊಳ್ಳುವ ಮೂಲಕ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಚ್ಚರಿ ಮೂಡಿಸಿದ್ದಾರೆ.

ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ಮುಂದಿರುವ ಬಹುದೂಡ್ಡ ಸವಾಲು ಎಂದಿದ್ದಾರೆ. ಕಳೆದ ತಿಂಗಳು ಚಿದಂಬರಂ ಮೋದಿ ಒಬ್ಬ ಸಮರ್ಥ ನಾಯಕನಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು. (ಮೋದಿ ಸಮರ್ಥ ನಾಯಕರಲ್ಲ)

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಹುದೊಡ್ಡ ಸವಾಲು ಎನ್ನುವ ಸತ್ಯವನ್ನು ಒಪ್ಪಿಕೊಳ್ಳುತ್ತೇನೆ ಎಂದು ಚಿದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಚಿದಂಬರಂ ಹೇಳಿಕೆ, ಸ್ಲೈಡಿನಲ್ಲಿ..

ಚಿದಂಬರಂ

ಚಿದಂಬರಂ

ಭಾನುವಾರ (ನ 10) ಪಣಜಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚಿದಂಬರಂ, ನಾನೊಬ್ಬ ಕಾಂಗ್ರೆಸ್ ಪಕ್ಷದ ಸಚಿವನಾಗಿ ಹೇಳುವುದಾದರೆ ನರೇಂದ್ರ ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಕಡೆಗಣಿಸುವಂತಿಲ್ಲ. ನಮ್ಮ ಪಕ್ಷಕ್ಕೆ ಅವರು ಸವಾಲಾಗಿ ಪರಿಣಮಿಸುತ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ

ಬಿಜೆಪಿ

ನರೇಂದ್ರ ಮೋದಿ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಘೋಷಿಸಿರುವ ಪ್ರಧಾನಿ ಅಭ್ಯರ್ಥಿ. ವೈಯಕ್ತಿಕವಾಗಿ ನನಗೆ ಅವರು ಸಾರ್ವಜನಿಕ ಸಭೆಯಲ್ಲಿ ಬಳಸುವ ಪದದ ಬಗ್ಗೆ ಒಪ್ಪಿಗೆ ಇಲ್ಲ. ದೇಶ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನರೇಂದ್ರ ಮೋದಿ ಕರಾರುವಕ್ಕಾಗಿ ಮಾತನಾಡುತ್ತಿಲ್ಲ. ಸಭೆ, ಸಮಾರಂಭಗಳಲ್ಲಿ ಆಶ್ವಾಸನೆ ನೀಡುತ್ತಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಆಶೀರ್ವದಿಸಿದರೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಮಾಡಬೇಕೆನ್ನುವುದು ಬಹಳಷ್ಟು ಕಾಂಗ್ರೆಸ್ಸಿಗರ ಅಭಿಮತ.

ಯುವಶಕ್ತಿ

ಯುವಶಕ್ತಿ

ನನ್ನ ವೈಯಕ್ತಿಕ ಅಭಿಪ್ರಾಯವೇನಂದರೆ ದೇಶದ ಆಡಳಿತವನ್ನು ಯುವಕರಿಗೆ ನೀಡುವ ಸಮಯ ಬಂದಿದೆ. ದೇಶದಲ್ಲಿ ಬಹಳಷ್ಟು ಯುವಕ, ಯುವತಿಯರು ಉತ್ತಮ ಆಡಳಿತ ನೀಡುವ ಶಕ್ತಿಯನ್ನು ಹೊಂದಿದ್ದಾರೆ.

ಸಮಸ್ಯೆಗಳು

ಸಮಸ್ಯೆಗಳು

ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದಾರೆ. ಪಕ್ಷದ ಹಿರಿಯ ಸಚಿವನಾಗಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಅವರಿಗೆ ನೀಡುವ ಸಲಹೆ ಏನಂದರೆ, ದೇಶದ ಜ್ವಲಂತ ಸಮಸ್ಯೆಯ ಬಗ್ಗೆ ಹೆಚ್ಚು ಮಾತನಾಡಿ ಮತದಾರರಿಗೆ ಅರಿವು ಮೂಡಿಸ ಬೇಕೆನ್ನುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+