• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉದ್ಯಮಿಗಳನ್ನುದ್ದೇಶಿಸಿ ಮೋದಿ ಭಾಷಣ: ಪ್ರಮುಖ ಅಂಶಗಳು

|

ನವದೆಹಲಿ, ಜೂನ್ 11: ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ನ 95ನೇ ವಾರ್ಷಿಕ ಸಭೆಯಲ್ಲಿ ಉದ್ಯಮಿಗಳನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು.

   Renukacharya mocks DK Shivakumar and Siddaramaiah | Oneindia Kannada

   ಭಾರತವು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಅದರ ಜೊತೆಗೆ ಆಹಾರ, ಮರುಭೂಮಿ ಮಿಡತೆ, ಆಲಿಕಲ್ಲು, ತೈಲ ಬಾವಿಯಲ್ಲಿ ಅನಿಲ ಸೋರಿಕೆ, ಭೂಕಂಪದಂತಹ ಸವಾಲುಗಳನ್ನು ಎದುರಿಸುತ್ತಿದೆ. ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುತ್ತಾ ಭಾರತೀಯರು ಸ್ವಾವಲಂಬಿಯಾಗಿ ಬದುಕಲು ಕಲಿಯಬೇಕು ಎಂದರು.

   ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆ ಮೋದಿ ಚರ್ಚೆ: ಪ್ರಮುಖ ಅಂಶಗಳು

   ಮೋದಿ ಭಾಷಣದ ಪ್ರಮುಖ ಅಂಶಗಳು:

   -ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಆತ್ಮನಿರ್ಭರ ಭಾರತದ ಪರಿಕಲ್ಪನೆಯ ಕಲಿಕೆಯನ್ನು ಮನೆಯಲ್ಲಿ ಆರಂಭಿಸಬೇಕು.

   -ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ಉತ್ಪನ್ನಗಳನ್ನು ಸಾಧ್ಯವಾದಷ್ಟು ನಮ್ಮಲ್ಲಿಯೇ ತಯಾರಿಸಬೇಕು. ಇಷ್ಟು ದಿನ ನಾವು ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ನಾವೇ ರಫ್ತು ಮಾಡುವಷ್ಟು ಎತ್ತರಕ್ಕೆ ಬೆಳೆಯಬೇಕು.

   -ರೈತರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡಲಾಗಿದೆ. ಅವರು ಯಾವ ದೇಶಕ್ಕೆ ಬೇಕಾದರೂ ತಮ್ಮ ಬೆಳೆಗಳನ್ನು ರಫ್ತು ಮಾಡಬಹುದಾಗಿದೆ.

   -ಇಷ್ಟು ದಿನ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆಯುವುದು ಹೇಗೆ ಎಂಬುದರ ಕುರಿತು ಕಾರ್ಖಾನೆಗಳು ಆಲೋಚಿಸಬೇಕು.

   -ಎಲ್‌ಇಡಿ ಬಲ್ಬ್ ಬಳಕೆಯಿಂದ ಭಾರತವು 19,000 ಕೋಟಿ ರೂ. ಹಣವನ್ನು ಉಳಿತಾಯ ಮಾಡುತ್ತಿದೆ.

   -ಭಾರತದ ಆರ್ಥಿಕತೆಯನ್ನು ಕಮ್ಯಾಂಡ್ ಆಂಡ್ ಕಂಟ್ರೋಲ್‌ನಿಂದ ಪ್ಲಗ್ ಆಂಡ್ ಪ್ಲೇ ಕಡೆಗೆ ಕರೆದೊಯ್ಯಬೇಕಿದೆ.

   -DBT,JAM ಲಕ್ಷಾಂತರ ಫಲಾನುಭವಿಗಳಿಗೆ ಸಹಾಯ ಮಾಡಿದೆ

   -ನಾವು ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ವಲಯವನ್ನು ಪುನರುಜ್ಜೀವನಗೊಳಿಸಬೇಕು, ಇದು ಹೆಚ್ಚು ಹೂಡಿಕೆಯ ಸಮಯ, ಸಂಪ್ರದಾಯವಾದಿ ನಿರ್ಧಾರಗಳಲ್ಲ.

   English summary
   Prime Minister Narendra Modi said on Thursday that the country needs to be self reliant and change coronavirus pandemic into a turning point, on the occasion of the 95th annual plenary session of Indian Chamber of Commerce (ICC) via video conferencing.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X