ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಉತ್ಸವ

By Mahesh
|
Google Oneindia Kannada News

ಬೆಂಗಳೂರು/ನವದೆಹಲಿ, ಡಿ.10: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾಗಿದೆ. ಡಿ.13ರಿಂದ ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವವನ್ನು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಲಿದ್ದಾರೆ.

ದೆಹಲಿಯ ಲಕ್ಷ್ಮಿ ಬಾಯಿ ಮಾರ್ಗದಲ್ಲಿರುವ ತಾಲ್ ಕಟೋರಾ ಕ್ರೀಡಾಂಗಣದಲ್ಲಿ ಡಿ.13 ಹಾಗೂ 14ರಂದು ಕೆಂಪೇಗೌಡರ ಕುರಿತಾದ ಗೀತಗಾಯನ, ರಂಗ ನಮನ, ಅಕ್ಷರ ನಮನ, ದೃಶ್ಯ ನಮನ, ವಿಚಾರ ಮಂಥನ, ಛಾಯಾ ಚಿತ್ರ ಪ್ರದರ್ಶನ, ನಾಡಿನ ಸಂತ ಶ್ರೇಷ್ಠರ ದಿವ್ಯ ದರ್ಶನ, ಸಾಂಸ್ಕೃತಿಕ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ 'ಕನ್ನಡವೇ ಸತ್ಯ' ಖ್ಯಾತಿ ಕೆ.ಆರ್ ರಂಗನಾಥ್ ಅವರು ಒನ್ ಇಂಡಿಯಾ ತಂಡಕ್ಕೆ ತಿಳಿಸಿದ್ದಾರೆ.

ಆಯೋಜಕರು: 'ಬನ್ನಿ ದೆಹಲಿ ಯಾತ್ರೆಗೆ ಕೆಂಪೇಗೌಡರ ಜಾತ್ರೆಗೆ' ಕಾರ್ಯಕ್ರಮ: ವಿಶ್ವ ಒಕ್ಕಲಿಗರ ಮಹಾವೇದಿಕೆ, ದೆಹಲಿ ಒಕ್ಕಲಿಗ ಗೌಡರ ಸಂಗ, ದೆಹಲಿ ಕರ್ನಾಟಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜನೆ.

ಕಾರ್ಯಕ್ರಮದಲ್ಲಿ ಗಣ್ಯರು: ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ, ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ವೆಂಕಯ್ಯ ನಾಯ್ಡು, ಜಿಎಂ ಸಿದ್ದೇಶ್ವರ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡೀಸ್, ಎಚ್. ಡಿ ಕುಮಾರಸ್ವಾಮಿ, ಆರ್ ಅಶೋಕ್, ಡಿಕೆ ಶಿವಕುಮಾರ್, ಅಂಬರೀಷ್, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಉಮಾಶ್ರೀ, ಬಚ್ಚೇಗೌಡ, ದಿನೇಶ್ ಗುಂಡೂರಾವ್ ಮತ್ತಿತ್ತರು.

 ಕೆಂಪೇಗೌಡ ರಾಷ್ಟ್ರೀಯ ಉತ್ಸವ: ದಿವ್ಯ ಸಾನಿಧ್ಯ

ಕೆಂಪೇಗೌಡ ರಾಷ್ಟ್ರೀಯ ಉತ್ಸವ: ದಿವ್ಯ ಸಾನಿಧ್ಯ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಉಡುಪಿ ಶ್ರೀಕೃಷ್ಣಮಠದ ವಿಶ್ವೇಶತೀರ್ಥ ಸ್ವಾಮೀಜಿ, ಗದಗ ಡಂಬಳ ಮಠಾಧ್ಯಕ್ಷ ತೋಂಟದಾರ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಪಟಿಕಾಪುರಿ ಮಹಾಸಂಸ್ಥಾನ ಮಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ.

ಕಾರ್ಯಕ್ರಮದ ಉದ್ದೇಶ

ಕಾರ್ಯಕ್ರಮದ ಉದ್ದೇಶ

ಕೆಂಪೇಗೌಡರ ಆದರ್ಶವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವುದು. ಹಲವು ವೇದಿಕೆಗಳ ಜೊತೆ ಸಭೆ ಸೇರಿ ತೆಗೆದುಕೊಂಡಿರುವ ಪ್ರಮುಖ ಐದು ನಿರ್ಣಯಗಳನ್ನು ಮಂಡಿಸುವುದು. ಕನ್ನಡ ನಾಡಿನ ಕಲೆ, ಸಂಸ್ಕೃತಿ, ಇತಿಹಾಸದ ಅನಾವರಣಗೊಳಿಸುವುದು.

ರಾಷ್ಟ್ರೀಯ ಪ್ರಶಸ್ತಿ

ರಾಷ್ಟ್ರೀಯ ಪ್ರಶಸ್ತಿ

ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಹಾಗೂ ಡಾ. ಸರೋಜಿನಿ ಮಹಿಷಿ ಅವರಿಗೆ ಕೆಂಪೇಗೌಡ ರಾಷ್ಟ್ರೀಯ ಸನ್ಮಾನ್ ಪ್ರಶಸ್ತಿ ನೀಡಲಾಗುತ್ತದೆ.

ಕೆಂಪೇಗೌಡ ರಾಷ್ಟ್ರೀಯ ಉತ್ಸವ ಐದು ನಿರ್ಣಯಗಳು

ಕೆಂಪೇಗೌಡ ರಾಷ್ಟ್ರೀಯ ಉತ್ಸವ ಐದು ನಿರ್ಣಯಗಳು

* ಬೆಂಗಳೂರು ನಗರ ಜಿಲ್ಲೆಗೆ ಕೆಂಪೇಗೌಡ ಜಿಲ್ಲೆ ಎಂದು ಹೆಸರಿಡುವಂತೆ ಒತ್ತಾಯ.
* ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡ ವಿವಿ ಎಂದು ಮರು ನಾಮಕರಣ ಮಾಡುವುದು
* ವಿವಿಯಲ್ಲಿನ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಆಗ್ರಹ.
* ಮೈಸೂರು ದಸರಾ ಮಾದರಿಯಲ್ಲಿ ಕೆಂಪೇಗೌಡ ಜಯಂತ್ಯುತ್ಸವವನ್ನು ಸಾಂಸ್ಕೃತಿಕ ಹಬ್ಬವಾಗಿ ಆಚರಣೆ.
* ಆಶ್ವರೂಢ ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಕೆ.

English summary
A Two day Nadaprabhu Kempegowda National Utsav organised at Tal Kotara Stadium,Delhi on Dec 13 and 14. Former Union Minister Ajit Singh and Dr. Sarojini Mahishi will be awarded with Kempegowda Rashtriya Sanman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X