ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಮಹಡಿಯಿಂದ ಬಿದ್ದು ಮುತ್ತೂಟ್ ಸಮೂಹದ ಅಧ್ಯಕ್ಷ ಸಾವು

|
Google Oneindia Kannada News

ನವದೆಹಲಿ, ಮಾರ್ಚ್ 7: ಮುತ್ತೂಟ್ ಸಮೂಹದ ಅಧ್ಯಕ್ಷ ಎಂಜಿ ಜಾರ್ಜ್ ಮುತ್ತೂಟ್ ಅವರು ಶನಿವಾರ ತಮ್ಮ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ದೆಹಲಿಯ ಪೂರ್ವ ಭಾಗದ ಕೈಲಾಶ್‌ನಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ಮನೆಯ ನಾಲ್ಕನೆಯ ಮಹಡಿಯಿಂದ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಕೂಡಲೇ ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ನೀಡುವ ವೇಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಏಮ್ಸ್‌ನಲ್ಲಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅವರ ಸಾವಿನ ಹಿಂದೆ ಯಾವುದೇ ಅನುಮಾನಾಸ್ಪದ ಮಾಹಿತಿ ಲಭ್ಯವಾಗಿಲ್ಲ. ಅವರು ಪತ್ನಿ ಸಾರಾ ಜಾರ್ಜ್ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ. ಅವರ ಹಿರಿಯ ಮಗ ಜಾರ್ಜ್ ಎಂ ಜಾರ್ಜ್ ಸಮೂಹದ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಕಿರಿಯ ಮಗ ಅಲೆಗ್ಸಾಂಡರ್ ಜಾರ್ಜ್ ನಿರ್ದೇಶಕರಾಗಿದ್ದಾರೆ. ಅವರ ಎರಡನೆಯ ಮಗ ಪಾಲ್ ಮುತ್ತೂಟ್ ಜಾರ್ಜ್ ಅವರನ್ನು 2009ರಲ್ಲಿ ಹತ್ಯೆ ಮಾಡಲಾಗಿತ್ತು. ಮುಂದೆ ಓದಿ.

ತನಿಖೆ ಮುಂದುವರಿಕೆ

ತನಿಖೆ ಮುಂದುವರಿಕೆ

71 ವರ್ಷ ವಯಸ್ಸಿನ ಜಾರ್ಜ್ ಮುತ್ತೂಟ್ ಅವರು ಶುಕ್ರವಾರ ರಾತ್ರಿ 9.21ರ ವೇಳೆಗೆ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದರು. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಉಳಿದಂತೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಆರ್‌ಪಿ ಮೀನಾ ತಿಳಿಸಿದರು.

ದೇಶ ವಿದೇಶಗಳಲ್ಲಿ ಸಂಸ್ಥೆ

ದೇಶ ವಿದೇಶಗಳಲ್ಲಿ ಸಂಸ್ಥೆ

ಮುತ್ತೂಟ್ ಸಮೂಹದ ಅಧ್ಯಕ್ಷರಾಗಿ ಅವರು ಮುತ್ತೂಟ್ ಫೈನಾನ್ಸ್ ಸಂಸ್ಥೆಯನ್ನು ದೇಶದೆಲ್ಲೆಡೆ ಹಾಗೂ ಮಧ್ಯಪ್ರಾಚ್ಯ ಸೇರಿದಂತೆ ಅನೇಕ ದೇಶಗಳಲ್ಲಿ ಕೂಡ ಬೆಳೆಸಿದ್ದರು. ಚಿನ್ನದ ಮೇಲಿನ ಸಾಲದಿಂದ ಭದ್ರತಾ ಸಂಸ್ಥೆಗಳವರೆಗೆ ಸುಮಾರು 20ಕ್ಕೂ ಅಧಿಕ ಉದ್ದಿಮೆಗಳು, ಮೂಲಸೌಕರ್ ರಿಯಾಲ್ಟಿ ಎಸ್ಟೇಟ್‌ಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು.

ಅಜ್ಜ ಶುರುಮಾಡಿದ ಸಂಸ್ಥೆ

ಅಜ್ಜ ಶುರುಮಾಡಿದ ಸಂಸ್ಥೆ

ಕೇರಳದ ಈಗಿನ ಪಟ್ಟಣಂತಿಟ್ಟ ಜಿಲ್ಲೆಯ, ಕೊಳೆಂಚೆರ್ರಿಯಲ್ಲಿ 1949ರ ನವೆಂಬರ್‌ನಲ್ಲಿ ಜನಿಸಿದ್ದ ಮಥಾಯ್ ಜಾರ್ಜ್ ಮುತ್ತೂಟ್ ಅವರು, ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅವರ ಅಜ್ಜ ಮುತ್ತೂಟ್ ನಿನಾನ್ ಮಥಾಯ್ ಸಮೂಹದ ಸಂಸ್ಥಾಪಕರಾಗಿದ್ದರು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ

ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ

ಮಣಿಪಾಲ್ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಅವರು ಕಚೇರಿ ಸಹಾಯಕರಾಗಿ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡರು. 1979ರಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ 1993ರಲ್ಲಿ ಸಮೂಹ ಅಧ್ಯಕ್ಷ ಹುದ್ದೆಗಳಿಗೆ ಏರಿದ್ದರು.

1980ರಲ್ಲಿ ಕುಟುಂಬ ವಿಭಜನೆ

1980ರಲ್ಲಿ ಕುಟುಂಬ ವಿಭಜನೆ

1980ರ ಆರಂಭದಲ್ಲಿ ಅವರ ಬೃಹತ್ ಕುಟುಂಬ ವಿಭಜನೆಯಾಗಿ, ಕುಟುಂಬದ ಸಂಪತ್ತು ಸಹೋದರ ಸಂಬಂಧಿಗಳ ನಡುವೆ ಹಂಚಿಹೋಗಿತ್ತು. ಇದು ಮುತ್ತೂಟ್ ಪಪ್ಪಚೆನ್ ಸಮೂಹದ ಸ್ಥಾಪನೆಗೆ ಕಾರಣವಾಗಿತ್ತು. ಇದು ಮುತ್ತೂಟ್ ಫಿನ್‌ಕಾರ್ಪ್‌ನ ಪ್ರತಿಸ್ಪರ್ಧಿ ಗೋಲ್ಡ್ ಲೋನ್ ಕಂಪೆನಿಯಾಗಿ ಬೆಳೆದಿತ್ತು.

English summary
Muthoot Group Chairman MG George died on Saturday after falling from 4th floor of Delhi residence on Friday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X