Get Updates
Get notified of breaking news, exclusive insights, and must-see stories!

ಈ 6 ಮಹಾನಗರಗಳಲ್ಲಿ ಕೊರೊನಾ ನಿಯಂತ್ರಿಸಿದರೆ ಭಾರತ ಗೆದ್ದಂತೆ!

ದೆಹಲಿ, ಏಪ್ರಿಲ್ 29: ಭಾರತದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೂ 31,332 ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ. 1007 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಗೋವಾ, ತ್ರಿಪುರ, ಮಣಿಪುರ ಹಾಗೂ ಅರುಣಾಚಲ ಪ್ರದೇಶ ಬಿಟ್ಟರೆ ದೇಶದ ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ಅಂಟಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಒಂದೇ ರಾಜ್ಯದಲ್ಲಿ 9 ಸಾವಿರಕ್ಕು ಹೆಚ್ಚು ಸೋಂಕು ಪತ್ತೆಯಾಗಿದ್ದು, ಸದ್ಯದಲ್ಲೇ ಹತ್ತು ಸಾವಿರ ಗಡಿದಾಟಲಿದೆ. ದೆಹಲಿ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿದೆ.

ದೇಶ, ರಾಜ್ಯ ಎನ್ನುವುದು ಪಕ್ಕಕ್ಕಿಟ್ಟರೆ ಕೆಲವು ಮಹಾನಗರಗಳಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮಾಡುತ್ತಿದೆ. ಇಡೀ ದೇಶದ ಅರ್ಧದಷ್ಟು ಸೋಂಕು ಈ 6 ಮಹಾನಗರಗಳಲ್ಲಿ ವರದಿಯಾಗಿದೆ. ಈ ನಗರಗಳು ನಿಯಂತ್ರಣಕ್ಕೆ ಬಂದರೆ ಕೊರೊನಾದಿಂದ ಭಾರತ ಗೆದ್ದಂತೆ. ಯಾವುದು ಆ ಆರು ಮಹಾನಗರ? ಮುಂದೆ ಓದಿ....

ಅತಿ ಹೆಚ್ಚು ಸೋಂಕು ಹೊಂದಿರುವುದು ಮುಂಬೈ

ಅತಿ ಹೆಚ್ಚು ಸೋಂಕು ಹೊಂದಿರುವುದು ಮುಂಬೈ

ಅತಿ ಹೆಚ್ಚು ವಲಸೆ ಕಾರ್ಮಿಕರು ಹಾಗು ವಿದೇಶಿ ಪ್ರಯಾಣಿಕರು ಸಂಚರಿಸುವ ದೇಶದ ಪ್ರಮುಖ ವಾಣಿಜ್ಯ ನಗರ ಮುಂಬೈ. ಖ್ಯಾತಿಗೆ ತಕ್ಕಂತೆ ಕೊರೊನಾ ವಿಚಾರದಲ್ಲೂ ಮುಂಬೈ ಮುಂಚೂಣಿಯಲ್ಲಿದೆ. ಈವರೆಗೂ ಮಹಾರಾಷ್ಟ್ರದಲ್ಲಿ 9,318 ಜನರಿಗೆ ಸೋಂಕು ತಗುಲಿದೆ. 400 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 6,169 ಸೋಂಕು ಪತ್ತೆಯಾಗಿರುವುದು ಮುಂಬೈನಲ್ಲಿ. ಆದರೆ, ಮುಂಬೈನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಅಹಮದಬಾದ್

ಅಹಮದಬಾದ್

ಪ್ರಧಾನಿ ನರೇಂದ್ರ ಮೋದಿ ಅವರ ತಾಯ್ನಾಡು ಗುಜರಾತ್. ಇಲ್ಲಿಯೂ ಕೊರೊನಾ ರಣಕೇಕೆ ಹಾಕಿದೆ. ರಾಜ್ಯದಲ್ಲಿ 3,774 ಕೊರೊನಾ ಕೇಸ್ ದಾಖಲಾಗಿದೆ. ಈ ಪೈಕಿ 2,542 ಪ್ರಕರಣ ವರದಿಯಾಗಿರುವುದು ಗುಜರಾತ್‌ ರಾಜಧಾನಿ ಅಹಮದಬಾದ್‌ನಲ್ಲಿ. ಈ ಮಹಾನಗರ ಬಿಟ್ಟರೆ ಉಳಿದ ಕಡೆ ಕೊರೊನಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ.

ಇಂದೋರ್ ಮಹಾನಗರ

ಇಂದೋರ್ ಮಹಾನಗರ

ಮಧ್ಯಪ್ರದೇಶದಲ್ಲಿ ರಾಜಧಾನಿ ಭೋಪಾಲ್‌ಗಿಂತ ಮತ್ತೊಂದು ವಾಣಿಜ್ಯ ನಗರದಲ್ಲಿ ಹೆಚ್ಚು ಸೋಂಕು ವರದಿಯಾಗಿದೆ. ಇಂದೋರ್ ನಗರದಲ್ಲಿ ಕೊರೊನಾ ರೂಲ್ ಮಾಡ್ತಿದೆ. ಮಧ್ಯಪ್ರದೇಶದಲ್ಲಿ ಒಟ್ಟು 2,387 ಕೇಸ್ ದಾಖಲಾಗಿದೆ. ಇರದಲ್ಲಿ 1,372 ಸೋಂಕಿತರು ಇಂದೋರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಿಂಕ್ ಸಿಟಿ ಜೈಪುರ

ಪಿಂಕ್ ಸಿಟಿ ಜೈಪುರ

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ರಾಜಸ್ಥಾನ ಐದನೇ ಸ್ಥಾನದಲ್ಲಿದೆ. ಈವರೆಗೂ ರಾಜ್ಯದಲ್ಲಿ 2,383 ಜನರಿಗೆ ಸೋಂಕು ತಗುಲಿದೆ. ಆದರೆ, ರಾಜ್ಯ ರಾಜಧಾನಿ ಜೈಪುರದಲ್ಲಿ ಮಾತ್ರ 864 ಜನರಿಗೆ ಕೊರೊನಾ ಅಂಟಿಕೊಂಡಿದೆ. ಜೈಪುರ ಬಿಟ್ಟರೆ ಜೋಧ್‌ಪುರದಲ್ಲಿ 401 ಪ್ರಕರಣ ವರದಿಯಾಗಿದೆ.

ಚೆನ್ನೈ ಮಹಾನಗರ

ಚೆನ್ನೈ ಮಹಾನಗರ

ಆರಂಭದ ದಿನದಲ್ಲಿ ತಮಿಳುನಾಡು ಕೊರೊನಾದಿಂದ ಬಹಳ ಸುರಕ್ಷಿತವಾಗಿತ್ತು. ಆದರೆ, ದೆಹಲಿ ಧಾರ್ಮಿಕ ಸಭೆ ಬಳಿಕ ರಾಜ್ಯದಲ್ಲಿ ದಿಢೀರ್ ಏರಿಕೆ ಕಂಡಿತ್ತು. ತಮಿಳುನಾಡಿನಲ್ಲಿ ಒಟ್ಟು 2,058 ಕೊರೊನಾ ಕೇಸ್ ವರದಿಯಾಗಿದೆ. ಇದರಲ್ಲಿ ಚೆನ್ನೈ ಒಂದೇ ಕಡೆ 678 ಕೇಸ್ ದಾಖಲಾಗಿದೆ. ಚೆನ್ನೈ ಬಿಟ್ಟರ ಉಳಿದ ಜಿಲ್ಲೆಗಳಲ್ಲಿ ಕಡಿಮೆ ಸೋಂಕಿತರಿದ್ದಾರೆ.

ಹೈದರಾಬಾದ್

ಹೈದರಾಬಾದ್

ತಮಿಳುನಾಡಿನಂತೆ ತೆಲಂಗಾಣ ರಾಜ್ಯಕ್ಕೂ ದೆಹಲಿಗೆ ಹೋಗಿ ಬಂದಿದ್ದ ತಬ್ಲಿಘಿಗಳು ಸೋಮಕು ಹರಡಲು ಕಾರಣವಾದರು. ತೆಲಂಗಾಣದಲ್ಲಿ ಒಟ್ಟು 1,009 ಕೊವಿಡ್ ಕೇಸ್ ದಾಖಲಾಗಿದೆ. ಇದರಲ್ಲಿ ಹೈದರಾಬಾದ್‌ ಮಹಾರನಗರದಲ್ಲಿ 548 ಜನರಿಗೆ ಸೋಂಕು ಅಂಟಿಕೊಂಡಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಈ ಆರು ಮಹಾನಗರದಲ್ಲಿ ಅತಿ ಹೆಚ್ಚು ಕೇಸ್‌ಗಳಿದೆ. ಮುಂದಿನ ದಿನದಲ್ಲಿ ಇಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಭಾರತದಲ್ಲಿ ಕೊವಿಡ್‌ಗೆ ಬ್ರೇಕ್ ಬೀಳುತ್ತೆ, ಇಲ್ಲವಾದಲ್ಲಿ ಕಷ್ಟವಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+