ಸಂಸತ್ತಿನ ಮುಂಗಾರು ಅಧಿವೇಶನ ಆರಂಭ
ನವದೆಹಲಿ, ಜುಲೈ 18: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ(ಜು.18) ರಿಂದ ಆರಂಭವಾಗಲಿದ್ದು, ಹಲವು ಮಹತ್ವದ ಮಸೂದೆಗಳು ಅಂಗೀಕಾರವಾಗುವ ಸಾಧ್ಯತೆ ಇದೆ.
ಜುಲೈ 18 ರಿಂದ ಆಗಸ್ಟ್ 10 ರ ವರೆಗೆ ಒಟ್ಟು 18 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಎನ್ ಡಿಎ ಸರ್ಕಾರ ಈ ಅವಧಿಯ ಕೊನೆಯ ಮುಂಗಾರು ಅಧಿವೇಶನವೂ ಇದಾಗಿರುವುದರಿಂದ ಮತ್ತಷ್ಟು ಮಹತ್ವ ಪಡೆದಿದೆ.
123 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ಮಸೂದೆಯಲ್ಲಿ ತಿದ್ದುಪಡಿ, ಬಾಡಿಗೆ ತಾಯ್ತನ, ಮುಸ್ಲಿಂ ಮಹಿಳೆಯರ ಮಸೂದೆ, ರಾಷ್ಟ್ರೀಯ ಮೆಡಿಕಲ್ ಕಮಿಶನ್ ಬಿಲ್ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಮಸೂದೆಗಳು ಚರ್ಚೆಯಾಗುವ ಸಾಧ್ಯತೆ ಇದೆ.

ಲೋಕಸಭೆಯಿಂದ ಅಂಗೀಕೃತವಾಗಿ, ರಾಜ್ಯ ಸಭೆಯಲ್ಲಿ ಚರ್ಚೆಯಾಗಬೇಕಿರುವ ತ್ರಿವಳಿ ತಲಾಖ್ ಮಸೂದೆಯೂ ಅಂಗೀಕರಿಸುವ ಸಾಧ್ಯತೆ ಇದೆ.
ರಾಜ್ಯಸಭಾ ಉಪಸಭಾಪತಿ ಪಿ.ಜೆ.ಕುರಿಯನ್ ಅವರ ಅಧಿಕಾರಾವಧಿ ಕೊನೆಯಾಗುವುದರಿಂದ ಉಪಸಭಾಪತಿ ಸ್ಥಾನಕ್ಕೆ ಚುನಾವಣೆಯೂ ನಡೆಯಲಿದೆ.












Click it and Unblock the Notifications