ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ..? ರಾಹುಲ್ ಮಾತಿಗೆ ನಕ್ಕರು ಮೋದಿ!
Recommended Video

ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಶ್ವಾಸ ಮತ ನಿರ್ಣಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಿಸಿದ್ದಾರೆ.
ಭಾಷಣದ ನಡುವಲ್ಲಿ, 'ಪ್ರಧಾನಿ ಮೋದಿಯವರು ನನ್ನ ಕಣ್ಣನಲ್ಲಿ ಕಣ್ಣನಿಟ್ಟು ನೋಡಲಾರರು' ಎನ್ನುವ ಮೂಲಕ ಪ್ರಧಾನಿ ಸೇರಿದಂತೆ ಲೋಕಸಭೆಯಲ್ಲಿರುವ ಎಲ್ಲರ ಮುಖದಲ್ಲೂ ನಗು ಉಕ್ಕಿಸಿದರು!
ರಾಹುಲ್ ಗಾಂಧಿಯವರ ಮಾತಿನ ನಂತರ ನಗುವನ್ನು ಹತ್ತಿಕ್ಕಲಾಗದೆ ಪ್ರಧಾನಿ ಮೋದಿಯವರೂ ನಕ್ಕುಬಿಟ್ಟರು! "ಪ್ರಧಾನಿ ಮೋದಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ. ನಿರುದ್ಯೋಗ, ಬಡತನ ಯಾವುದರ ಪರಿಹಾರಕ್ಕೂ ಮೋದಿ ಸರ್ಕಾರ ಬದ್ಧವಾಗಿಲ್ಲ. ರಕ್ಷಣಾ ಇಲಾಖೆ, ವಿದೇಶಿ ನೀತಿಗಳು ಸಂಪೂರ್ಣ ವೈಫಲ್ಯ ಕಂಡಿವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಉದ್ಯಮಿಗಳ ಮೇಲೆ ಮಾತ್ರ ವಿಶ್ವಾಸ" ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು.

"ನರೇಂದ್ರ ಮೋದಿಯವರಿಗೆ ತಪ್ಪು ಮಾಡಿರುವ ಅಳುಕಿದೆ. ಆದ್ದರಿಂದಲೇ ಅವರು ನನ್ನ ಕಣ್ಣಿನಲ್ಲಿ ಕಣ್ಣನಿಟ್ಟು ನೋಡಲಾರರು" ಎಂದು ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ ಸಂಸತ್ತಿನಲ್ಲಿ ಭಾಷಣ ಮಾಡುತ್ತಿರುವುದರಿಂದ ಇಂದು ಸಂಸತ್ ಭಾಗದಲ್ಲಿ ಭೂಕಂಪವಾಗುತ್ತದೆಂದು ಬೆಳಿಗ್ಗೆಯಿಂದ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. 2016 ರ ಅಪನಗದೀಕರಣದ ಸಮಯದಲ್ಲಿ, ಸಂಸತ್ತಿನಲ್ಲಿ ನಾನು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.












Click it and Unblock the Notifications