ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ

|
Google Oneindia Kannada News

ದೆಹಲಿ, ಏಪ್ರಿಲ್ 20: ಭಾರತದಲ್ಲಿ ಹೋಟೆಲ್‌ಗಳು ಜನರನ್ನು ಆಕರ್ಷಿಸಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ವಿಶೇಷ ಆಹಾರಕ್ಕೆ ಸಂಬಂಧಿಸಿದ ಸವಾಲುಗಳನ್ನು ಹಾಕುತ್ತಲೇ ಇರುತ್ತವೆ. ಭಾರತೀಯ ಆಹಾರ ಪ್ರೇಮಿಗಳು ಇವುಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಆಹಾರದ ಬಗ್ಗೆ ಉತ್ಸಾಹ ಇರುವುದರಿಂದ ಬಹುತೇಕ ಜನ ಸ್ಪರ್ಧಾತ್ಮಕವಾಗಿ ತಿನ್ನುವುದನ್ನು ಆನಂದಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ಯಾಶುಯಲ್ ಗೋಲ್ ಗಪ್ಪಾ ತಿನ್ನುವ ಸ್ಪರ್ಧೆಯನ್ನ ಏರ್ಪಡಿಸುತ್ತಾರೆ. ಆದರೆ ಕೆಲವರು ಯಶಸ್ಸಿಗಾಗಿ ದೊಡ್ಡ ಸ್ಪರ್ಧೆಗಳನ್ನು ಪ್ರಯತ್ನಿಸುತ್ತಾರೆ. ಇಂತಹ ಆಹಾರ ಪ್ರೇಮಿಗಳಿಗೆ ಮತ್ತೊಂದು ರೋಮಾಂಚಕಾರಿ ಆಹಾರ ತಿನ್ನುವ ಸವಾಲು ಬಂದಿದೆ.

ದೆಹಲಿಯ ಒಂದು ತಿನಿಸು ಮಳಿಗೆಯೊಂದು 15 ನಿಮಿಷಗಳಲ್ಲಿ 35 ಮೊಮೊಗಳನ್ನು ತಿನ್ನಲು ಜನರಿಗೆ ಸವಾಲು ಹಾಕುತ್ತಿದೆ. ಬಹುಮಾನವಾಗಿ 1 ಲಕ್ಷವನ್ನು ನಗದು ರೂಪದಲ್ಲಿ ನೀಡುವುದಾಗಿ ಘೋಷಿಸಿದೆ. ನಮ್ಮನ್ನು ನಂಬುವುದಿಲ್ಲವೇ? ಒಮ್ಮೆ ನೋಡಿ

Momos Eating Challenge for Food Lovers: 1 Lakh Reward for Winning

ಸವಾಲು ಸರಳವಾಗಿ ಕಾಣಿಸಬಹುದು ಆದರೆ ಇದು ಕೆಲವು ನಿಯಮಗಳೊಂದಿಗೆ ಬರುತ್ತದೆ. ಮೊದಲ ನಿಯಮವೆಂದರೆ ಸವಾಲಿನ ಸಮಯದಲ್ಲಿ ನೀವು ವಾಂತಿ ಮಾಡಬಾರದು. ನೀವು ವಾಂತಿ ಮಾಡಿದರೆ ಬಹುಮಾನ ಕಳೆದುಕೊಳ್ಳುತ್ತೀರಿ. ಎರಡನೆಯ ನಿಯಮವೆಂದರೆ ನೀವು ಸಂಪೂರ್ಣ ಮೊಮೊ, ಕವರ್ ಮತ್ತು ಫಿಲ್ಲಿಂಗ್ ಅನ್ನು ತಿನ್ನಬೇಕು. ಮೂರನೆಯ ನಿಯಮವೆಂದರೆ ಈ ಸವಾಲಿನ ವಿಜೇತರು ಮತ್ತೆ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಕೊನೆಯದಾಗಿ, ಚಾಲೆಂಜ್ ಅನ್ನು ಪ್ರಾರಂಭಿಸುವ ಮೊದಲು ಜನರು ಬಿಲ್ ಪಾವತಿಸಬೇಕಾಗುತ್ತದೆ.

ಇದನ್ನು ದೆಹಲಿಯ ಬಿಗ್ ಮೊಮೊಸ್ ವರ್ಲ್ಡ್ ಆಯೋಜಿಸಿದೆ. ಸವಾಲನ್ನು ಪ್ರವೇಶಿಸಲು, ಒಬ್ಬರು 2000 ಅಥವಾ 2500 (ಸಸ್ಯಾಹಾರಿ ಅಥವಾ ಮಾಂಸಾಹಾರಿ ಮೊಮೊಗಳನ್ನು ಅವಲಂಬಿಸಿ) ಪಾವತಿಸಬೇಕಾಗುತ್ತದೆ. ನೀವು ಸವಾಲನ್ನು ಗೆದ್ದರೆ 1 ಲಕ್ಷವನ್ನು ನಗದು ರೂಪದಲ್ಲಿ ಗೆಲ್ಲುವುದು ಮಾತ್ರವಲ್ಲ, ನಿಮ್ಮ ಬಿಲ್‌ನ ಮರುಪಾವತಿಯನ್ನು ಸಹ ಪಡೆಯಬಹುದು. ಯೂಟ್ಯೂಬ್ ಆಧಾರಿತ ಆಹಾರ ಬ್ಲಾಗರ್ 'ಫುಡಿ ವಿಶಾಲ್' ಈ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದು, 13 ಸಾವಿರ ಲೈಕ್‌ಗಳೊಂದಿಗೆ 230 ಸಾವಿರ ವೀಕ್ಷಣೆಗಳನ್ನು ಹೊಂದಿದೆ.

English summary
Delhi food lovers have been challenged to pay Rs 1 lakh cash prize if they eat 35 momo in 15 minutes. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X