• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಸಂಸತ್‌ ಕಟ್ಟಡದಲ್ಲಿ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದ ಮೋದಿ

|
Google Oneindia Kannada News

ನವದೆಹಲಿ, ಜು.11: ಹೊಸ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ಹಾಕಲಾದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು.

ನಾಲ್ಕು ಸಿಂಹದ ಮುಖಗಳುಳ್ಳ ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ಮಾಡಲಾಗಿದ್ದು ಒಟ್ಟು 9,500 ಕಿಲೋಗ್ರಾಂ ತೂಕ ಮತ್ತು 6.5 ಮೀಟರ್ ಎತ್ತರವಿದೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಸೆಂಟ್ರಲ್ ಫೋಯರ್‌ನ ಮೇಲ್ಭಾಗದಲ್ಲಿ ಇದನ್ನು ನಿರ್ಮಿಸಲಾಗಿದೆ. ಲಾಂಛನಕ್ಕೆ ಪೂರಕವಾಗಿ ಸುಮಾರು 6,500 ಕೆಜಿ ತೂಕದ ಉಕ್ಕಿನ ಪೋಷಕಿನ ರಚನೆಯನ್ನು ನಿರ್ಮಿಸಲಾಗಿದೆ.

ಸೆಂಟ್ರಲ್‌ ವಿಸ್ಟಾ ಯೋಜನೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿಸೆಂಟ್ರಲ್‌ ವಿಸ್ಟಾ ಯೋಜನೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ

ಹೊಸ ಸಂಸತ್ತಿನ ಕಟ್ಟಡದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನದ ಪರಿಕಲ್ಪನೆಯ ಲಾಂಛನದ ರೇಖಾಚಿತ್ರ ಮತ್ತು ಪ್ರಕ್ರಿಯೆಯು ಕ್ಲೇ ಮಾಡೆಲಿಂಗ್ ಅಥವಾ ಕಂಪ್ಯೂಟರ್ ಗ್ರಾಫಿಕ್‌ನಿಂದ ಮೂಲಕ ಕಂಚಿನ ಎರಕಹೊಯ್ದ ಮತ್ತು ಪಾಲಿಶ್ ಮಾಡುವವರೆಗೆ ಎಂಟು ವಿಭಿನ್ನ ತಯಾರಿಕೆ ಹಂತದ ಮೂಲಕ ನಿರ್ಮಾಣ ಮಾಡಲಾಗಿದೆ. ಈ ವೇಳೆ ಹೊಸ ಸಂಸತ್ತಿನ ಕೆಲಸದಲ್ಲಿ ತೊಡಗಿರುವ ಕೆಲಸಗಾರರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ಉಪಸ್ಥಿತರಿದ್ದರು.

ನೂತನ ಸಂಸತ್ ಕಟ್ಟಡ ಯೋಜನೆಗೆ ಸರ್ಕಾರ 1,250 ಕೋಟಿ ರುಪಾಯಿ ವೆಚ್ಚ ಮಾಡಿದೆ. ಇದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದ 977 ಕೋಟಿಗಿಂತ ವೆಚ್ಚವು ಶೇ. 29 ರಷ್ಟು ಹೆಚ್ಚಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಯ ಪ್ರಮುಖ ಭಾಗವಾಗಿರುವ ಈ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ಸ್ ನಿರ್ಮಿಸುತ್ತಿದೆ.

ಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮ

ರಾಷ್ಟ್ರಪತಿ ಭವನದಿಂದ ಅತ್ಯಲ್ಪ ದೂರದಲ್ಲಿರುವ 13 ಎಕರೆ ಪ್ರದೇಶದಲ್ಲಿ ಪ್ರಸ್ತಾವಿತ ನಾಲ್ಕು ಅಂತಸ್ತಿನ ಕಟ್ಟಡವನ್ನು ಈ ವರ್ಷ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಪೂರ್ಣಗೊಳಿಸಲು ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ನಂತರ ಗಡುವನ್ನು ಅಕ್ಟೋಬರ್‌ಗೆ ಹೆಚ್ಚುವರಿಯಾಗಿ ನೀಡಲಾಯಿತು.

Modi unveiled the national emblem in the new parliament building
ನರೇಂದ್ರ ಮೋದಿ
Know all about
ನರೇಂದ್ರ ಮೋದಿ
English summary
Prime Minister Narendra Modi on Monday unveiled the national emblem on the roof of the new Parliament House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X