ಬಡವರ ಹಣದ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್ : ಕೇಜ್ರಿವಾಲ್

Posted By:
Subscribe to Oneindia Kannada

ನವದೆಹಲಿ, ನವೆಂಬರ್ 12: ನೋಟು ರದ್ದು ಎಂಬುದು ಬಿಜೆಪಿ ಸರಕಾರದ ದೊಡ್ಡ ಹಗರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.

ಕಪ್ಪು ಹಣಕ್ಕೆ ತಡೆ ಹಾಕ್ತೀವಿ ಎಂದು ಹೇಳುತ್ತಾ ಬಿಜೆಪಿ ದೊಡ್ಡ ಹಗರಣವನ್ನೇ ಮಾಡಿದ್ದಾರೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್ ಗಳಲ್ಲಿನ ನಗದು ಜಮೆ ವಿಪರೀತ ಜಾಸ್ತಿಯಾಗಿದೆ ಎಂದು ಆರೋಪಿಸಿದರು.

ಬಿಜೆಪಿಯ ಸ್ನೇಹ ವಲಯದೊಳಗಿರುವವರಿಗೆ 500, 1000 ರುಪಾಯಿ ನೋಟು ರದ್ದು ಮಾಡುವ ವಿಚಾರ ಮೊದಲೇ ಗೊತ್ತಾಗಿತ್ತು. ಆದ್ದರಿಂದ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್ ಗಳಿಗೆ ಜಮೆ ಮಾಡಿದ್ದಾರೆ. ಜೊತೆಗೆ ಡಾಲರ್ ಗಳಿಗೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿನ್ನ ಖರೀದಿಸಿದ್ದಾರೆ. ಆಸ್ತಿಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.[ಎಸ್ ಬಿಐ ಒಂದರಲ್ಲೇ 53 ಸಾವಿರ ಕೋಟಿ ಹಣ ಜಮೆ !]

Arvind Kejriwal

ವಿಚಿತ್ರ ಅಂದರೆ, ನವಂಬರ್ 8ನೇ ತಾರೀಕು ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ದು ವಿಚಾರವನ್ನು ಘೋಷಿಸುತ್ತಾರೆ. ಆದರೆ ಅದಕ್ಕೂ ಮೊದಲೇ ಎರಡು ಸಾವಿರ ರುಪಾಯಿ ನೋಟು ಬರುತ್ತದೆ ಎಂಬ ಸಂಗತಿ ಬದಲಾಗಿದೆ. ಕಟ್ಟುಕಟ್ಟು ಹೊಸ ನೋಟುಗಳು ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.[ಬಿಡುಗಡೆಗೂ ಮುನ್ನ ನೋಟಿನ ಫೋಟೋ: ತನಿಖೆಗೆ ನಿರ್ಧಾರ]

ನರೇಂದ್ರ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಕಪ್ಪು ಹಣದ ವಿರುದ್ಧ ಅಲ್ಲ, ಬಡ ಜನರ ಉಳಿತಾಯದ ಹಣದ ಮೇಲೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದರು. ಅಂಬಾನಿ, ಅದಾನಿ, ಶರದ್ ಪವಾರ್, ಸುಭಾಷ್ ಚಂದ್ರ ಅಂಥವರ ಹತ್ತಿರ ಕಪ್ಪು ಹಣ ಇದೆಯೋ ಅಥವಾ ಜನಸಾಮಾನ್ಯರ ಬಳಿಯೋ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are questioning Government's intent, their intention is wrong in demonetization of 500, 1000 currency, alleged by Arvind Kejriwal, Delhi CM.
Please Wait while comments are loading...