• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರೇಂದ್ರ ಮೋದಿ, ರಾಹುಲ್ ಹೇಳಿದ್ದು ಒಂದನ್ನೇ... ಆದರೆ ರೀತಿ ಬೇರೆ, ಬೇರೆ!

|
   ಜನರಿಗೆ ಮತದಾನ ಮಾಡಲು ಬೇರೆ ಬೇರೆ ರೀತಿ ಮನವಿ ಮಾಡಿದ ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ

   ನವದೆಹಲಿ, ಏಪ್ರಿಲ್ 11: ಲೋಕಸಭೆ ಚುನಾವಣೆ ಹಬ್ಬಕ್ಕೆ ಇಂದು ಮುಹೂರ್ತ ಕೂಡಿ ಬಂದಿದ್ದು, ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರತಯೊಬ್ಬರೂ ಮತದಾನ ಮಾಡಿ, ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಟ್ವೀಟ್ ಮಾಡಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಇಬ್ಬರ ಉದ್ದೇಶವೂ 'ಮತದಾನ ಮಾಡಿ' ಎಂಬುದೇ ಆಗಿದ್ದರೂ, ಅದನ್ನು ಹೇಳಿದ ರೀತಿ ಮಾತ್ರ ಬೇರೆ ಬೇರೆ!

   "2019 ರ ಲೋಕಸಭಾ ಚುನಾವಣೆ ಇಂದಿನಿಂದ ಆರಂಭವಾಗುತ್ತದೆ. ಮೊದಲ ಹಂತದಲ್ಲಿ ಬರುವ ಎಲ್ಲಾ ಕ್ಷೇತ್ರದ ಮತದಾರರಿಗೆ ನನ್ನ ವಿನಂತಿ ಏನೆಂದರೆ ಎಲ್ಲರೂ ಮತಚಲಾಯಿಸಿ, ಮತದಾನದ ಪ್ರಮಾಣವನ್ನು ಹೆಚ್ಚಿಸಿ. ಅದರಲ್ಲೂ ವಿಶೇಷವಾಗಿ ಯುವ ಮತ್ತು ಮೊದಲ ಬಾರಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಿ ಎಂಬುದು ನನ್ನ ಕಳಕಳಿಯ ವಿನಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

   ಲೋಕಸಭೆ ಚುನಾವಣೆ LIVE: ಮೊದಲ ಹಂತದ 91 ಕ್ಷೇತ್ರಗಳಲ್ಲಿ

   "2 ಕೋಟಿ ಉದ್ಯೋಗವಿಲ್ಲ, 15 ಲಕ್ಷ ನಿಮ್ಮ ಖಾತೆಗೆ ಬರಲಿಲ್ಲ, ಅಚ್ಚೇದಿನ(ಒಳ್ಳೆಯದಿನ)ವೂ ಬರಲಿಲ್ಲ! ಅದರ ಬದಲು, ನಿರುದ್ಯೋಗ, ಅಪನಗದೀಕರಣ, ರೈತರ ನೋವು, ಗಬ್ಬರ್ ಸಿಂಗ್ ಟ್ಯಾಕ್ಸ್, ಸೂಟ್ ಬೂಟ್ ಸರ್ಕಾರ, ರಫೇಲ್, ಸುಳ್ಳು, ಸುಳ್ಳು, ಸುಳ್ಳು, ಅಪನಂಬಿಕೆ, ಹಿಂಸೆ, ದ್ವೇಷ, ಭಯ... ನೀವು ಇಂದು ಭಾರತದ ಆತ್ಮಕ್ಕೆ ಮಥಾಕುತ್ತಿದ್ದೀರಿ. ಅದರ ಭವಿಷ್ಯಕ್ಕೆ ಮತಹಾಕುತ್ತಿದ್ದೀರಿ, ಯೋಚಿಸಿ ಮತಚಲಾಯಿಸಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

   17ನೇ ಲೋಕಸಭೆ ಚುನಾವಣೆ ಗುರುವಾರ(ಏ.11) ದಿಂದ ಮತದಾನ ಆರಂಭವಾಗಿದ್ದು, ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 20 ರಾಜ್ಯಗಳ 1279 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂದು ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.

   ಮಾರ್ಚ್ 10 ರಂದು ಲೋಕಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತ್ತು. ಅಂದಿನಿಂದಲೂ ನೀತಿಸಂಹಿತೆ ಜಾರಿಯಲ್ಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 11 ರಿಂದ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

   English summary
   Lok Sabha elections 2019: Both Prime minister Narendra Modi and Congress president rahul Gandhi requests people to caste their vote for nation's future, But way is different.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X