ಮೋದಿ ನಿಜಕ್ಕೂ ಇಂಥ ಗಟ್ಟಿ ನಿರ್ಧಾರ ತೆಗೆದುಕೊಳ್ತಾರಾ?
ನವದೆಹಲಿ, ಜೂನ್ 14: ಭಾರತವನ್ನು ಒಮ್ಮೆಗೇ ಸುಖೀದೇಶವನ್ನಾಗಿ ಮಾಡಬೇಕೆಂಬ ಹುಮ್ಮಸ್ಸಿನೊಂದಿಗೆ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ದಾಪುಗಾಲು ಹಾಕುತ್ತಿದ್ದಾರೆ. ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಜನ ಅದರ ಫಲವನ್ನು ಅನುಭವಿಸುವುದು ನಿಧಾನಗತಿಯ ಪ್ರಕ್ರಿಯೆ.
ಈ ಮಧ್ಯೆ, ಕೇಂದ್ರ ಸರಕಾರದ ಮುಂದೆ ಹೊಸ ಪ್ರಸ್ತಾವನೆಯೊಂದಿದ್ದು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ 2 ಲಕ್ಷ ರೂ ನಿಂದ 5 ಲಕ್ಷ ರೂ ಗೆ ಏರಿಸುತ್ತಾರಂತೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಏನಾದರೂ ಜಾರಿಗೆ ಬಂದರೆ ಮೋದಿ ಖಂಡಿತ ನೇರವಾಗಿ ಮಧ್ಯಮ ವರ್ಗದ ಜನರ ಹೃದಯಗಳಲ್ಲಿ ಪ್ರತಿಷ್ಠಾಪಿಸುವುದು ಖಚಿತ. ಏಕೆಂದರೆ ಇಂತಹದ್ದೊಂದು ಉಚಿತ ಸೌಲಭ್ಯಕ್ಕಾಗಿ ಜನ ತಹತಹಿಸುತ್ತಿದ್ದಾರೆ.
ತೆರಿಗೆ ರಗಳೆ ತಪ್ಪಿದರೆ ಕೋಟ್ಯಂತರ ಉದ್ಯೋಗಿಗಳು ನಿರಾಳ: (ಐಟಿ- 21000 ನೇಮಕ: ಟಾರ್ಗೆಟ್ 25000 ಕೋಟಿ ರೂ)

ತಾವು ಗಳಿಸುವ ಅಲ್ಪಸ್ವಲ್ಪವೂ ತೆರಿಗೆ ಪಾಲಾಗುತ್ತದೆ ಎಂಬುದು ಮಧ್ಯಮ ವರ್ಗದ ಜನರ ಅಳಲು. ಅದಕ್ಕೆ ಬ್ರೇಕ್ ಹಾಕಲು ಆದಾಯ ತೆರಿಗೆ ಮಿತಿಯನ್ನು ತುಸು ಏರಿಸಿಬಿಟ್ಟರೆ ಸಾಕೋ ಸಾಕು ಅನ್ನುತ್ತಾರೆ ಈ ಮಧ್ಯಮ ವರ್ಗದ ಜನ. (ಇನ್ಫಿಯಂತೆ iGateನಿಂದಲೂ ಕೋಟ್ಯಂತರ ತೆರಿಗೆ ಬಾಕಿ)
ಹಾಗಂತ ಇದು ಸರಕಾರಕ್ಕೆ ಕಠಿಣ ನಿರ್ಧಾರವೇನೂ ಆಗಲಾರದು ಅಥವಾ ಇಂತಹ ಮಿತಿ ಏರಿಕೆಯಿಂದ ಬೊಕ್ಕಸಕ್ಕೆ ಬರುವ ಆದಾಯದ ಮೂಲ ನಿಂತುಹೋಗುತ್ತದೆ ಎಂದು ಭಯಪಡುವ ಅಗತ್ಯವೂ ಇಲ್ಲ. ಏಕೆಂದರೆ ಇದಕ್ಕೆ ಪರ್ಯಾಯವಾಗಿ ತೆರಿಗೆ ಸೋರಿಕೆ ಅಥವಾ ತೆರಿಗೆ ತಪ್ಪಿಸುವಿಕೆ ಅಂದರೆ ರಾಮ-ಕೃಷ್ಣ ಲೆಕ್ಕಾಚಾರವನ್ನು ಸರಿ ದಾರಿಗೆ ತರುವ ಒಂದು ಕಠಿಣ ನಿರ್ಧಾರ ತೆಗೆದುಕೊಂಡು, ಜಾರಿಗೆ ತಂದರೆ ಸಾಕಾದೀತು. ಹಾಗೆ ಮಾಡುತ್ತಾರಾ ನರೇಂದ್ರ ಮೋದಿ ಎಂಬ ನಮ್ಮ ನೂತನ ಪ್ರಧಾನಿ. ಬಹುಶಃ ಜುಲೈ 11ಕ್ಕೆ ಕೇಂದ್ರದ ಪರಿಸ್ಕೃತ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ. ಅಂದು ಇದಕ್ಕೆಲ್ಲಾ ಉತ್ತರ ಸಿಗುತ್ತದೆ. (ಕರ್ನಾಟಕದ ಆದಾಯ ತೆರಿಗೆ ಸಂಗ್ರಹ ಗಣನೀಯ ಏರಿಕೆ)
ದುಬಾರಿ ಎನಿಸುವ ಈಗಿನ ಆದಾಯ ತೆರಿಗೆ ವಿನಾಯಿತಿ ಮಿತಿ ಲೆಕ್ಕಾಚಾರ ಹೀಗಿದೆ:
ಮೊದಲ ಆದಾಯ ಮಿತಿ 2 ಲಕ್ಷ ರೂ.ಗೆ ತೆರಿಗೆಯಿಲ್ಲ. ನಂತರದ 2- 5 ಲಕ್ಷ ರೂ. ಆದಾಯಕ್ಕೆ ಶೇ. 10 ರಷ್ಟು ಆದಾಯ ತೆರಿಗೆ, 5 ರಿಂದ 10 ಲಕ್ಷ ರೂ. ಗೆ ಶೇ. 20, 10 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ. (ಆದಾಯ ತೆರಿಗೆ ಪಾವತಿ ಅತಿ ಹೆಚ್ಚು ಎಲ್ಲಿ ಗೊತ್ತಾ?)












Click it and Unblock the Notifications