ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್‌ಪೀಸ್ ಇಂಡಿಯಾ ಲೈಸನ್ ಕೊನೆಗೂ ರದ್ದು

By Mahesh
|
Google Oneindia Kannada News

ನವದೆಹಲಿ, ಸೆ. 04: ವಿದೇಶದಿಂದ ಹಣ ಪಡೆದು ದೇಶದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸುವ ಆರೋಪಕ್ಕೆ ತುತ್ತಾಗಿರುವ ಸರ್ಕಾರೇತರ ಸಂಘಟನೆ ಗ್ರೀನ್‌ ಪೀಸ್‌ ಸಂಸ್ಥೆಯ ವಿದೇಶಿ ದೇಣಿಗೆ ನೋಂದಣಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ) ಉಲ್ಲಂಘನೆ ಆರೋಪದ ಮೇಲೆ ಲೈಸನ್ಸ್ ರದ್ದಾಗಿದೆ.

ಗ್ರೀನ್ ಪೀಸ್ ಸಂಸ್ಥೆ ಮೇಲೆ ಕಳೆದ ವರ್ಷವೇ ಕೇಂದ್ರ ಸರ್ಕಾರ 'ಆರ್ಥಿಕ ಕಡಿವಾಣ' ಹೇರಲು ಮುಂದಾಗಿತ್ತು. ಈಗ ದೇಶದ ಆರ್ಥಿಕತೆಗೆ ಮಾರಕವಾಗಿರುವ ಎನ್ ಜಿಒಗಳ ವಿದೇಶಿ ದೇಣಿಗೆ ಸಂಗ್ರಹಕ್ಕೆ ಕೊನೆಗೂ ಕಡಿವಾಣ ಬಿದ್ದಿದೆ. ಅದರೆ, ಸರ್ಕಾರದ ಆರೋಪವನ್ನು ಗ್ರೀನ್ ಪೀಸ್ ಇಂಡಿಯಾ ತಳ್ಳಿ ಹಾಕಿದೆ. [ಸ್ವದೇಶಿ ಐಟಿ ಕಂಪೆನಿಗಳ ಮೇಲೆ ಗ್ರೀನ್‌ಪೀಸ್‌ ಕಣ್ಣು!]

Govt cancels Greenpeace India's FCRA licence

ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಅಣು ಸ್ಥಾವರಗಳ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡ ಬಂದಿರುವ ಗ್ರೀನ್ ಪೀಸ್ ಸಂಸ್ಥೆಯ ಮುಂದಿನ ಟಾರ್ಗೆಟ್ ಐಟಿ ಬಿಟಿ ಸಂಸ್ಥೆ ಎನ್ನಲಾಗಿತ್ತು.

ಭಾರತದ ಗ್ರೀನ್‌ಪೀಸ್‌ ಸಂಘಟನೆ ಐಟಿ ಕಂಪೆನಿಗಳು. ಈ ಕಂಪೆನಿಗಳ ಇ ತ್ಯಾಜ್ಯ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ತಯಾರಿ ನಡೆಸುತ್ತಿದೆ ಎನ್ನವ ಮಾಹಿತಿಯನ್ನು ಐಬಿ ಗೃಹ ಇಲಾಖೆಗೆ ಸಲ್ಲಿಸಿತ್ತು. ಈ ಮಾಹಿತಿಗೆ ಪುಷ್ಟಿ ನೀಡುವಂತೆ ಗ್ರೀನ್‌ ಪೀಸ್‌ ಇಂಡಿಯಾ ಇ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದು ಸುದ್ದಿಯನ್ನು ಗ್ರೀನ್ ಪೀಸ್ ಇಂಡಿಯಾ ತನ್ನ ಫೇಸ್‌ಬುಕ್‌ ವಾಲ್‌ನಲ್ಲಿ ಪ್ರಕಟಿಸಿತ್ತು. ಸದ್ಯ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯಲ್ಲಿ 340ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. (ಪಿಟಿಐ)

English summary
In yet another crackdown on NGOs, government today cancelled the registration of Greenpeace India under the Foreign Contribution Regulations Act (FCRA) for its activities which allegedly hampered country's economic growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X