• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇಧಾ ಪಾಟ್ಕರ್ ಭಾಷಣ ವೇಳೆ ಪಾಕ್ ನಿರಾಶ್ರಿತರಿಂದ ಮೋದಿ ಪರ ಘೋಷಣೆ

|

ನವದೆಹಲಿ. ಡಿಸೆಂಬರ್ 20: ನವದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಪಾಕಿಸ್ತಾನ ನಿರಾಶ್ರಿತರು ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರ ನೇತೃತ್ವದಲ್ಲಿ ನಡೆಸುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಪಾಕಿಸ್ತಾನದ ಹಿಂದೂ ನಿರಾಶ್ರಿತರು ಅಡ್ಡಿಪಡಿಸಿದರು.

"ಬಾಂಗ್ಲಾದೇಶದಿಂದ ಒಬ್ಬರನ್ನೂ ಅಸ್ಸಾಂ ಒಳಗೆ ಬಿಟ್ಟುಕೊಳ್ಳುವುದಿಲ್ಲ"

ಮೇಧಾ ಪಾಟ್ಕರ್ ಮಾತನಾಡುತ್ತಿದ್ದ ವೇಳೆಯಲ್ಲಿ ಬಂದ ಹಿಂದೂ ನಿರಾಶ್ರಿತರು, ಪಾಕಿಸ್ತಾನದಲ್ಲಿ ಬದುಕುವುದು ಕಷ್ಟ, ಪೌರತ್ವ ಕಾಯ್ದೆ ತಪ್ಪು ಎಂದು ಮೇಧಾ ಪಾಟ್ಕರ್ ತಿಳಿದುಕೊಂಡಿದ್ದರೆ, ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದಿರುವ ನರೇಂದ್ರ ಮೋದಿಯವರ ಪರವಾಗಿ ಘೋಷಣೆಗಳನ್ನು ಕೂಗಿದರು. ಮೇಧಾ ಪಾಟ್ಕರ್ ಅವರ ಮಾತನ್ನು ಕೇಳಲು ಯಾರೂ ಸಿದ್ದವಿರಲಿಲ್ಲ. ಇದರಿಂದ ಪ್ರತಿಭಟನಾ ಸ್ಥಳದಿಂದ ಮೇಧಾ ಪಾಟ್ಕರ್ ತೆರಳಬೇಕಾಯಿತು.

ದೆಹಲಿ ಸೇರಿದಂತೆ ವಿವಿದಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವೂ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡರೂ ಅಲ್ಲಲ್ಲಿ ಗಲಭೆಗಳು ನಡೆಯುತ್ತಿವೆ.

ಪ್ರಧಾನಿ ಮೋದಿ ಮೇಲೆ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ಇತ್ತೀಚಿಗೆ ಕರ್ನಾಟಕದ ಮಂಗಳೂರಿನಲ್ಲಿ ಗಲಭೆ ನಡೆಯುವ ಸಂದರ್ಭದಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದಾರೆ. ಇಂದೂ ಕೂಡಾ ರಾಜ್ಯದ ಪ್ರಮುಖ ನಗರಗಳಲ್ಲಿ ಸಿಆರ್ ಪಿಸಿ 144 ಸೆಕ್ಷನ್ ಮುಂದುವರೆದಿದೆ. ಆದರೂ ಪ್ರತಿಭಟನೆಗಳು ನಿಂತಿಲ್ಲ.

English summary
Pakistani refugees have shouted on behalf of Narendra Modi in New Delhi protesting against the Citizenship Amendment Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X