ದೆಹಲಿಯಲ್ಲಿ ವಿದ್ಯಾರ್ಥಿ ನಿಗೂಢ ಸಾವು: ಪ್ರಕರಣ ಭೇದಿಸಿದ ಪೊಲೀಸರು

ನವದೆಹಲಿ, ಮಾರ್ಚ್ 30: ದೆಹಲಿಯಲ್ಲಿ ಅಪಹರಣಕ್ಕೊಳಗಾಗಿದ್ದ 21 ವರ್ಷ ವಯಸ್ಸಿನ ವಿದ್ಯಾರ್ಥಿಯ ಮೃತದೇಹ ಇಲ್ಲಿನ ದ್ವಾರಕಾ ಪ್ರದೇಶದ ಚರಂಡಿಯೊಂದರಲ್ಲಿ ಪತ್ತೆಯಾಗಿದೆ. ಈತ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಆಯುಶ್ ಎಂದು ಗುರುತಿಸಲಾಗಿದೆ.

ಮಾರ್ಚ್ 22 ರಿಂದ ಕಾಣೆಯಾಗಿದ್ದ ವಿದ್ಯಾರ್ಥಿ ಆಯುಶ್ ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ.

ಮಾರ್ಚ್ 22 ರಂದು ಆಯುಶ್, ಇಶ್ತ್ಯಾಕ್ ಅಲಿ ಎಂಬುವವನ್ನು ಭೇಟಿಯಾಗಿದ್ದು, ಇವರಿಬ್ಬರ ನಡುವಲ್ಲಿ ವ್ಯವಹಾರಕ್ಕೆ ಸಂಬಮಧಿಸಿದಂತೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತೆರಳಿ ಅಲಿ, ಆಯುಶ್ ನನ್ನು ಕೊಂದಿದ್ದಾನೆ. ಆದರೆ ಮೃತದೇಹವನ್ನು ಸಾಗಿಸಲು ಸಮಯ ಬೇಕೆಂದು ತಾನೇ ಮೃತನ ಮನೆಗೆ ಫೋನಾಯಿಸಿ ಹಣದ ಬೇಡಿಕೆ ಇಟ್ಟು, ಪ್ರಕರಣದ ಹಾದಿ ತಪ್ಪಿಸಲು ಪ್ರಯತ್ನಿಸಿದ್ದಾನೆ.

Missing DU student found dead, accused arrested

ಆದರೆ ಆಯುಶ್ ನ ಮೊಬೈಲ್ ಕರೆಗಳು ಮತ್ತು ಸಿಸಿಟಿವಿ ಫೂಟೇಜ್ ಗಳ ಮೂಲಕ ಕೊಲೆಗಾರನನ್ನು ಪೊಲೀಸರು ಪತ್ತೆ ಮಾಡಿದ್ದು, ಈ ಕೃತ್ಯವನ್ನು ತಾನೇ ಎಸಗಿದ್ದಾಗಿ ಅಲಿ ತಪ್ಪೊಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+