ಪ್ರಧಾನಿ ನರೇಂದ್ರ ಮೋದಿಗೆ ಮಕ್ಕಳು ಬರೆದ ಪತ್ರದಲ್ಲೇನಿದೆ?

Posted By:
Subscribe to Oneindia Kannada

ನವದೆಹಲಿ,ಮಾರ್ಚ್,03: 'ನಾವು ಆರ್ಥಿಕವಾಗಿ ಸಬಲರಲ್ಲ. ನನ್ನ ತಂದೆಗೆ ಅಸ್ತಮ, ಜೀವನ ಸಾಗಿಸುವುದು ಕಷ್ಟಕರವಾಗುತ್ತಿದೆ. ಶಾಲೆ ಶುಲ್ಕ ಭರಿಸಲು ಸಾಧ್ಯವಾಗದೇ ಶಾಲೆ ಬಿಟ್ಟಿದ್ದೇವೆ. ನಮಗೆ ನಿಮ್ಮ ಸಹಾಯ ಹಸ್ತ ಬೇಕಾಗಿದೆ. ಆರ್ಥಿಕವಾಗಿ ಸಹಾಯ ಮಾಡಿ'. ಇದು ಇಬ್ಬರು ಮಕ್ಕಳು ಮೋದಿ ಅವರಿಗೆ ಬರೆದ ಪತ್ರದ ಸಾರಾಂಶ.

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉತ್ತರ ಪ್ರದೇಶದ ಕಾನ್ಪುರದ ಇಬ್ಬರು ಮಕ್ಕಳಾದ ಸುಶಾಂತ್ ಮಿಶ್ರಾ (13 ಮತ್ತು ಈತನ ತಮ್ಮ ತನ್ಮಯ್ ಅವರು ಪತ್ರ ಬರೆದು, 'ತಮ್ಮ ತಂದೆಯ ಚಿಕಿತ್ಸೆಗೆ ಸಹಕರಿಸಿ. ಇವರ ದುಡಿಮೆ ಇಲ್ಲದೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ಮೊರೆ ಇಟ್ಟಿದ್ದಾರೆ.[ರಾಯಚೂರು ಯುವಕನ ಪತ್ರಕ್ಕೆ ಸ್ಪಂದಿಸಿದ ನರೇಂದ್ರ ಮೋದಿ]

Minors write to PM Modi, ask for financial help to treat ill father

ಸುಶಾಂತ್ ಮಿಶ್ರಾ ಮತ್ತು ಈತನ ತಮ್ಮ ತನ್ಮಯ್ ಅವರ ತಂದೆ ಸರೋಜ್ ಮಿಶ್ರಾ. ಇವರು ಉತ್ತರ ಪ್ರದೇಶದ ಕಾನ್ಪುರದಲ್ಲಿ ವಾಸವಾಗಿದ್ದಾರೆ. ಸರೋಜ್ ಮಿಶ್ರಾ ಅವರು ಬದುಕಿಗಾಗಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದಾರೆ.

ಸರೋಜ್ ಮಿಶ್ರಾ ಅವರಿಗೆ ಸುಮಾರು ಎರಡು ವರ್ಷಗಳಿಂದ ಅಸ್ತಮಾ ಖಾಯಿಲೆ ತೀವ್ರವಾಗಿ ಬಿಗಡಾಯಿಸಿದ ಪರಿಣಾಮ ಟೈಲರಿಂಗ್ ವೃತ್ತಿಯನ್ನು ಮುಂದುವರೆಸಲಾಗುತ್ತಿಲ್ಲ. ಹಾಗಾಗಿ ಇವರ ಮಕ್ಕಳು ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಂದೆಯ ಖಾಯಿಲೆಯ ನಿವಾರಣೆಗೆ ಸಹಾಯ ಮಾಡಿ ಎಂದು ಕೋರಿದ್ದಾರೆ.[ಮಗಳಿಗೆ ಬರೆದ ಪತ್ರದಲ್ಲಿ ಫೇಸ್ ಬುಕ್ ಜನಕ ಹೇಳಿದ್ದೇನು?]

ತಂದೆ ಸರೋಜ್ ಮಿಶ್ರಾ ಹೇಳಿದ್ದೇನು?

ನಾನು ಎರಡು ವರ್ಷದಿಂದ ಅಸ್ತಮಾ ಖಾಯಿಲೆಯಿಂದ ನರಳುತ್ತಿದ್ದೇನೆ. ಪ್ರಾರಂಭದಲ್ಲಿ ನನ್ನ ಸಂಬಂಧಿಕರು ಹಾಗೂ ನೆರೆಹೊರೆಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ ಆರು ತಿಂಗಳಿಂದ ಈ ಖಾಯಿಲೆ ಜೋರಾಗಿದೆ. ಜೀವ ಹಿಂಡುತ್ತಿದೆ. ನನ್ನ ಮೃತ್ತಿಯಿಂದಲೇ ಸಂಸಾರ ಸಾಗಬೇಕು. ದಯವಿಟ್ಟು ಸಹಾಯ ಮಾಡಿ ಎಂದು ಪತ್ರದಲ್ಲಿ ಅಂಗಲಾಚಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minors 13-year-old Sushant Mishra and his 8 year-old brother Tanmay wrote to Prime Minister Narendra Modi, ask for financial help to treat ill father.
Please Wait while comments are loading...