2019 ಬಜೆಟ್: 300 ಕಿ.ಮೀ ಮೆಟ್ರೋ ಮಾರ್ಗ ವಿಸ್ತರಣೆ ಘೋಷಣೆ
ನವದೆಹಲಿ, ಜುಲೈ 5: ಮೆಟ್ರೋ ಮಾರ್ಗವನ್ನು 300 ಕಿ.ಮೀನಷ್ಟು ವಿಸ್ತರಣೆ ಮಾಡುವುದಾಗಿ 2019ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಹಾಗೆಯೇ ಮೆಟ್ರೋ ಜೊತೆಗೆ ಸಬ್ ಅರ್ಬನ್ ಯೋಜನೆಗೂ ಕೂಡ ಒತ್ತುನೀಡಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಗಳಲ್ಲಿ ಹೆಚ್ಚು ಹೂಡಿಕೆ ಮಾಡಲಾಗುತ್ತದೆ. ಸರಕು ಸಾಗಣೆ ರೈಲಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಮೆಟ್ರೋ ರೈಲು ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದ ಅವರು ಇಡೀ ದೇಶದಲ್ಲಿ ಪ್ರಯಾಣಿಸಲು ಯೂನಿವರ್ಸಲ್ ಸಿಂಗಲ್ ಕಾರ್ಡ್ ಅಭಿವೃದ್ಧಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ನ್ಯಾಷನಲ್ ಟ್ರಾವಲ್ ಕಾರ್ಡ್ (ರಾಷ್ಟ್ರೀಯ ಪ್ರಯಾಣ ಕಾರ್ಡ್) ಒಂದನ್ನೇ ಬಸ್ಸು, ರೈಲು ಇನ್ನೂ ಕೆಲವು ಸಾರ್ವಜನಿಕ ಸಾರಿಗೆಗಳಿಗೆ ಬಳಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಉತ್ತೇಜನ ನೀಡಲಾಗಿದೆ. ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಮಾಡಲು ಉದ್ದೇಶಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಒತ್ತು ನೀಡಲಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವವರಿಗೆ 1.05 ಲಕ್ಷ ಸಬ್ಸಿಡಿ, ಶೇ. 5 ರಷ್ಟು ಜಿಎಸ್‌ಟಿ ಇಳಿಕೆ ಮಾಡಲಾಗುತ್ತದೆ.












Click it and Unblock the Notifications