• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಂಡಿಎಚ್ ಮಸಾಲದ ಮಾಲೀಕ King of Spices ಇನ್ನಿಲ್ಲ

|

ನವದೆಹಲಿ, ಡಿ.3: ದೇಶದ ಎರಡನೇ ಅತಿದೊಡ್ಡ ಮಸಾಲ ಉತ್ಪನ್ನಗಳ ಮಾರಾಟ ಸಂಸ್ಥೆ ಎಂಡಿಎಚ್ ಮಸಾಲದ ಮಾಲೀಕ ಧರ್ಮಪಾಲ್ ಗುಲಾಟಿ ಅವರು ಗುರುವಾರದಂದು ನಿಧನರಾಗಿದ್ದಾರೆ.

   ಎಮ್‌ಡಿಹೆಚ್‌ ಮಸಾಲೆ ಕಂಪನಿ ಸಂಸ್ಥಾಪಕ ಧರಮ್‌ಪಾಲ್‌ ಗುಲಾಟಿ ನಿಧನ

   98 ವರ್ಷ ವಯಸ್ಸಿನ ಗುಲಾಟಿ ಅವರು ದೆಹಲಿಯ ಮಾತಾ ಚನ್ನನ್ ದೇವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಒಂದು ವಾರದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾವೈರಸ್ ಸೋಂಕು ತಗುಲಿರಲಿಲ್ಲ ಎಂದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

   ಗುಲಾಟಿ ಅವರನ್ನು King of Spices ಎಂದೇ ಕರೆಯಲಾಗುತ್ತಿತ್ತು. ಮಹಾಶಯ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಎಂಡಿಎಚ್ ಮಾಲೀಕ ಧರ್ಮಪಾಲ್ ಅವರು ಎಂಡಿಎಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಜ್ಜ ಎಂದೇ ಗುರುತಿಸಲ್ಪಡುತ್ತಿದ್ದರು. ಎಂಡಿಎಚ್ ಸಂಸ್ಥೆಯ ಮಾಲೀಕ 'ಮಹಾಶಯ್' ಧರ್ಮಪಾಲ್ ಗುಲಾಟಿ. ಮಸಾಲ ಪಾಕೆಟ್ ಗಳ ಮೇಲೂ ಅವರ ಭಾವಚಿತ್ರ ಇರುತ್ತದೆ.

   ಧರ್ಮಪಾಲ್ ಅವರ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಚಿವ ಮನೀಶ್ ಸಿಸೋಡಿಯಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಫೂತಿದಾಯಕ ವ್ಯಕ್ತಿಯಾಗಿದ್ದ ಇವರನ್ನು ಭೇಟಿ ಮಾಡಿದ್ದು ನನ್ನ ಪುಣ್ಯ ಎಂಬರ್ಥದಲ್ಲಿ ಇಬ್ಬರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

   English summary
   Mahashian Di Hatti(MDH) spice brand owner Mahashay Dharampal Gulati passes away on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X