ಮಾರ್ಚ್ 31ರವರೆಗೆ ದೆಹಲಿಯ ಸರ್ಕಾರಿ, ಖಾಸಗಿ ಪ್ರಾಥಮಿಕ ಶಾಲೆಗಳಿಗೆ ರಜೆ

ನವದೆಹಲಿ, ಮಾರ್ಚ್ 5: ಕೊರೊನಾ ಭೀತಿ ಬೇರೆ ದೇಶಗಳಿಂದ ಇದೀಗ ಭಾರತಕ್ಕೂ ಆವರಿಸಿದೆ.

ಕೊರೊನಾ ಭಯ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರವರೆಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ.

ಮಾರಕ ವೈರಸ್​ ಕೊರೊನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಟ್ವೀಟ್​ ಮಾಡಿದ್ದಾರೆ.

Manish Sisodia Statement On School Over Coronavirus

ದೆಹಲಿಯ ಮಯೂರ ವಿಹಾರ ಎಂಬ ಪ್ರದೇಶದ ವ್ಯಕ್ತಿಯೊಬ್ಬನಿಗೆ ಮೊದಲ ಬಾರಿ ಕೊರೊನಾ ವೈರಸ್​ ಕಾಣಿಸಿಕೊಂಡಿತ್ತು. ಇದು ಆಗ್ರಾದಲ್ಲಿರುವ ಆತನ ಕುಟುಂಬದ 5 ಮಂದಿಗೂ ಸೋಂಕು ತಗುಲಲು ಕಾರಣವಾಗಿತ್ತು. ಸೋಂಕು ತಗುಲಿದ ವ್ಯಕ್ತಿಯ ಜತೆ ವ್ಯವಹಾರವಿರಿಸಿಕೊಂಡಿದ್ದ 88 ಮಂದಿಗೂ ತಪಾಸಣೆ ನಡೆಸಲಾಗಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಈ ಮೊದಲು ದೆಹಲಿ ಸರ್ಕಾರವು ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಬಯೋಮೆಟ್ರಿಕ್​ ಹಾಜರಾತಿಯನ್ನು ರದ್ದುಗೊಳಿಸುವಂತೆ ಸಲಹೆ ನೀಡಿತ್ತು. ಈ ಬಗ್ಗೆ ಸಂಸ್ಥೆಗಳು ಅಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಹಾಗೂ ಪಾಲಿಕೆಗೆ ಪತ್ರ ಬರೆದು ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್​ ಹಾಜರಾತಿಯನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಬೇಕೆಂದು ತಿಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+