• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ನೀಚ' ಎಂದ ಅಯ್ಯರ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್: ಟ್ವಿಟ್ಟಿಗರ ಗೇಲಿ

|

ನವದೆಹಲಿ, ಮೇ 14: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಕರೆದ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ಎದ್ದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಂದು ನಾನು ನನ್ನ ಲೇಖನದಲ್ಲಿ ಏನೆಲ್ಲ ಬರೆದಿದ್ದೆನೋ ಅದೆಲ್ಲವನ್ನೂ ಸಮರ್ಥಿಸಿಕೊಳ್ಳುತ್ತೇನೆ, ಅದರ ಪ್ರತಿ ಪದವೂ ಸತ್ಯ" ಎಂದು ಮಣಿಶಂಕರ್ ಅಯ್ಯರ್ ಅವರು ಎಎನ್ ಐ ನ್ಯೂಸ್ ಏಜೆನ್ಸಿಗೆ ಹೇಳಿದ್ದರು. ಇದು ಮತ್ತೊಮ್ಮೆ ವಿವಾದ ಹೊತ್ತಿಸಿದ್ದು, ಕಾಂಗ್ರೆಸ್ ಮಾನ ಹರಾಜು ಹಾಕುವುದಕ್ಕೆ ಮಣಿಶಂಕರ್ ಅಯ್ಯರ್ ಒಬ್ಬರೇ ಸಾಕು ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೆ ವಿವಾದದ ಕಿಡಿ ಹತ್ತಿಸಿದ ಗಾಂಧಿ ಕುಟುಂಬದ ಮುಕುಟ'ಮಣಿ' ಶಂಕರ್ ಅಯ್ಯರ್!

ಮಣಿಶಂಕರ್ ಅಯ್ಯರ್ ಅವರು ಇಂಥ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ ಎಂದು ಮತ್ತಷ್ಟು ಜನ ಟ್ವಿಟ್ಟರ್ ನಲ್ಲಿ ಗೇಲಿ ಮಾಡಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2017 ರ ಡಿಸೆಂಬರ್ ತಿಂಗಳಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅಯ್ಯರ್, "ಡಾ. ಬಿ. ಆರ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ಶ್ರಮಿಸಿದವರಲ್ಲಿ ಜವಹರಲಾಲ್ ನೆಹರೂ ಅಗ್ರಗಣ್ಯರು. ದೇಶಕ್ಕಾಗಿ ದುಡಿದ ಇಂಥ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವ ಇಂಥ ವ್ಯಕ್ತಿ(ಮೋದಿ)ಯನ್ನು 'ನೀಚ' ಎನ್ನದೇ ಇರಲಾಗದು, ಆತನಿಗೆ ಯಾವುದೇ ನಾಗರಿಕ ಸಭ್ಯತೆಗಳಿಲ್ಲ. ಅತ್ಯಂತ ಹೀನಾಯ ರೀತಿಯ ರಾಜಕೀಯವನ್ನು ಅವರು ಮಾಡುತ್ತಿದ್ದಾರೆ ಎಂದಿದ್ದರು.

ಬಿಜೆಪಿ ಸ್ಟಾರ್ ಕ್ಯಾಂಪೇನರ್!

ಇವರು ನಾಲ್ಕು ಜನ ಬಿಜೆಪಿಯ ಅತ್ಯಂತ ಯಶಸ್ವೀ ತಅರಾ ಪ್ರಚಾರಕರು ಎಂದು ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಶಾ ಅವರ ಚಿತ್ರದೊಂದಿಗೆ ಮಣಿಶಂಕರ್ ಅಯ್ಯರ್ ಅವರ ಚಿತ್ರವನ್ನೂ ಪೋಸ್ಟ್ ಮಾಡಿ ಗೇಲಿ ಮಾಡಿದ್ದಾರೆ ಅಪರ್ಣಾ.

ಕಾಂಗ್ರೆಸ್ ಗಾಗಿ ಪ್ರಾರ್ಥಿಸಿ

ಗುಜರಾತ್ ಚುನಾವಣೆಯ ಸಮಯದಲ್ಲಿ ಈ ಹೇಳಿಕೆ ನೀಡಿದ್ದ ಮಣಿಶಂಕರ್ ಅಯ್ಯರ್ ರಿಂದ ಕಾಂಗ್ರೆಸ್ ಎಮಥ ನಷ್ಟ ಅನುಭವಿಸಬೇಕಾಯ್ತು ಎಂಬುದು ಗೊತ್ತಿರುವ ವಿಷಯ. ಈಗ ಮತ್ತೆ ಅದೇ ತಪ್ಪು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ ಶಿವಗಂಗಾಧರ್.

ಅಯ್ಯರ್ 'ನೀಚ' ಹೇಳಿಕೆ: ಕೆರಳಿದ ಜನರಿಂದ ಛೀಮಾರಿಯ ಸುರಿಮಳೆ!

ಸ್ಯಾಮ್ ಪಿತ್ರೋಡಾ ಮುಖವಾಡ!

ಮಂನಿಶಂಕರ್ ಅಯ್ಯರ್ ಅವರು ಸ್ಯಾಮ್ ಪಿತ್ರೋಡಾ ಮುಖವಾಡ ಧರಿಸಿದ್ದಾರೆ-ಓಶೋ ರಾಜೇಶ್.

ರಾಹುಲ್ ಭವಿಷ್ಯಕ್ಕೆ ಕೊಳ್ಳಿ!

ಸ್ಯಾಮ್ ಪಿತ್ರೋಡಾ ಈಗಾಗಲೇ ರಾಹುಲ್ ಗಾಂಧಿ ಆವರ ರಾಜಕು ಭವಿಷ್ಯಕ್ಕೆ ಹಾನಿಯುಂಟು ಮಾಡಿದ್ದಾರೆ. ಕೇವಲ ಸ್ಯಾಮ್ ಪಿತ್ರೋಡಾ ಒಬ್ಬರೇ ಆ ಕೆಲಸ ಮಾಡಿದರೆ ಸಾಲದು ಎಂಬಂತೆ ಮಣಿಶಂಕರ್ ಅಯ್ಯರ್ ಅವರೂ ಈಗ ಕೈಜೋಡಿಸುತ್ತಿದ್ದಾರೆ- ಅವಿನಾಶ್

ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್

ದೇಶಸೇವೆ ಮಾಡುತ್ತಿದ್ದಾರೆ

ಮಣಿಶಂಕರ್ ಅಯ್ಯರ್ ಚುನಾವಣೆಯ ಮೊದಲ ಹಂತದಲ್ಲೇ ಬರಬೇಕಿತ್ತು. ಏನೇ ಆಗಲಿ, ಅವರು ಕಾಂಗ್ರೆಸ್ಸಿಗೆ ಹಾನಿ ಮಾಡುವ ಮೂಲಕ ದೇಶಸೇವೆ ಮಾಡುತ್ತಿದ್ದಾರೆ- ತ್ರಿಪಾಟಿ ದೇವ್

English summary
Congress leader Mani Shankar Aiyer, who was suspended by the party after his 'Neech' remark against PM Narendra Modi in 2017, has again defended his words. Twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X