ಪಿಪಿಇ ಕಿಟ್ ಧರಿಸಿ 25 ಕೆ.ಜಿ. ಚಿನ್ನ ಕಳ್ಳತನ; ಸಿಸಿ ಟಿ.ವಿಯಲ್ಲಿ ಸೆರೆಸಿಕ್ಕ ದೃಶ್ಯ

ನವದೆಹಲಿ, ಜನವರಿ 21: ವ್ಯಕ್ತಿಯೊಬ್ಬ ಪಿಪಿಇ ಕಿಟ್ ಧರಿಸಿ ಬಂದು ಚಿನ್ನ ಕಳ್ಳತನ ಮಾಡಿರುವ ವಿಚಿತ್ರ ಸಂಗತಿ ದೆಹಲಿಯಲ್ಲಿ ಬುಧವಾರ ನಡೆದಿದೆ. ಪಿಪಿಇ ಕಿಟ್ ಧರಿಸಿ, ಚಿನ್ನದ ಶೋರೂಂಗೆ ನುಗ್ಗಿದ ವ್ಯಕ್ತಿ ಬರೋಬ್ಬರಿ 13 ಕೋಟಿ ಮೌಲ್ಯದ 25 ಕೆ.ಜಿ ಚಿನ್ನ ದೋಚಿದ್ದಾನೆ.

ಈತ ಕಳ್ಳತನ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಳ್ಳನನ್ನು ಮೊಹಮದ್ ಶಾಯಿಖ್ ನೂರ್ ಎಂದು ಗುರುತಿಸಲಾಗಿದೆ. ಪಕ್ಕದ ಕಟ್ಟಡದಲ್ಲಿ ಪಿಪಿಇ ಕಿಟ್ ಧರಿಸಿ ಈ ಮಳಿಗೆಗೆ ಜಿಗಿದು ಕಳ್ಳತನ ಮಾಡಿದ್ದಾನೆ. ಐದು ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದರೂ ಅವರ ಕಣ್ತಪ್ಪಿಸಿ ಮಳಿಗೆಗೆ ನುಗ್ಗಿದ್ದಾನೆ. ಆತ ಚಿನ್ನದ ಒಡವೆಗಳಿಗಾಗಿ ಇಡೀ ಅಂಗಡಿಯಲ್ಲಿ ಓಡಾಡಿರುವ ದೃಶ್ಯ ಸೆರೆಯಾಗಿದೆ.

Man In PPE Steals Gold Worth Rs 13 Crore In Delhi

ಕದ್ದ ಚಿನ್ನವನ್ನು ನಂತರ ಆಟೋದಲ್ಲಿ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹುಬ್ಬಳ್ಳಿ ಮೂಲದವನಾಗಿರುವ ಮೊಹಮದ್ ಶಾಯಿಖ್ ದಕ್ಷಿಣ ದೆಹಲಿಯ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ 9.30 ಸುಮಾರಿಗೆ ಶೋರೂಂಗೆ ಬಂದು ಬೆಳಗ್ಗಿನ ಜಾವ 3 ಗಂಟೆಗೆ ಹೊರ ಹೋಗಿದ್ದಾನೆ. ಅಲ್ಲಿವರೆಗೂ ಶೋರೂಂ ಅನ್ನು ತಡಕಾಡಿ ಸುಮಾರು 25 ಕೆ.ಜಿ. ಚಿನ್ನ ದೋಚಿದ್ದಾನೆ.

ಸದ್ಯಕ್ಕೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಈ ರೀತಿ ಪಿಪಿಇ ಕಿಟ್ ಧರಿಸಿ ಕಳ್ಳತನ ಮಾಡಿರುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+